Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರಾವಳಿ ಕೋನಸೀಮಾ ಜಿಲ್ಲೆಯಲ್ಲಿ 8 ಅಡಿ ಎತ್ತರದ ಬಾಹುಬಲಿ ಬಾಳೆಹಣ್ಣು ಗೊನೆ ತೊನೆದಾಡುತ್ತಿದೆ!

ಕರಾವಳಿ ಕೋನಸೀಮಾ ಜಿಲ್ಲೆಯಲ್ಲಿ 8 ಅಡಿ ಎತ್ತರದ ಬಾಹುಬಲಿ ಬಾಳೆಹಣ್ಣು ಗೊನೆ ತೊನೆದಾಡುತ್ತಿದೆ!

ಸಾಧು ಶ್ರೀನಾಥ್​
|

Updated on: Dec 21, 2023 | 2:13 PM

8 ಅಡಿ ಎತ್ತರದ ಬಾಳೆ ಗಿಡದಲ್ಲಿ 3,000 ಕಾಯಿಗಳಿವೆ. ಈ ಬಾಳೆಹಣ್ಣು ಗಿಡವನ್ನು ನೋಡಲು ಸ್ಥಳೀಯರು ಸಾಲುಗಟ್ಟಿ ಬರುತ್ತಿದ್ದಾರೆ. ಈ ಬಾಳೆಹಣ್ಣು ಗೊನೆಯೊಂದಿಗೆ ಸೆಲ್ಫಿ ತೆಗೆಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಿದ್ದಾರೆ.

ಆಂಧ್ರಪ್ರದೇಶದ ಕರಾವಳಿ ಕೋನಸೀಮಾ ಜಿಲ್ಲೆಯ ಮಲ್ಕಿಪುರಂ ಮಂಡಲದ ದಿಂಡಿ ಗ್ರಾಮದಲ್ಲಿ ಬಾಹುಬಲಿ ಬಾಳೆಹಣ್ಣು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಸಾಮಾನ್ಯವಾಗಿ ಬಾಳೆ ಗಿಡ ಐದಾರು ಗಜ ಎತ್ತರದಲ್ಲಿರುತ್ತದೆ. ಆದರೆ ದಿಂಡಿ ಗ್ರಾಮದ ಸರಪಂಚ್‌ ಮುದುನೂರಿ ಶ್ರೀನಿವಾಸ್‌ರಾಜು ಅವರ ಜಮೀನಿನಲ್ಲಿ ಬಾಹುಬಲಿಯಂತೆ ಎತ್ತರವಾಗಿ ಬೆಳೆದ ಬಾಳೆಹಣ್ಣು ಅಚ್ಚರಿ ಮೂಡಿಸಿದೆ. ಅಂತಹ ಬಾಳೆಹಣ್ಣು ಗಿಡವನ್ನು ನೀವೆಲ್ಲೂ ನೋಡಿಲ್ಲ.

ಏಕೆಂದರೆ ಆ 8 ಅಡಿ ಎತ್ತರದ ಬಾಳೆ ಗಿಡದಲ್ಲಿ 3,000 ಕಾಯಿಗಳಿವೆ. ಈ ಬೃಹದಾದ ಬಾಳೆಹಣ್ಣು ಗಿಡವನ್ನು ನೋಡಲು ಸ್ಥಳೀಯರು ಸಾಲುಗಟ್ಟಿ ಬರುತ್ತಿದ್ದಾರೆ. ಈ ಬಾಳೆಹಣ್ಣು ಗಿಡ ಬಾಳೆಹಣ್ಣು ಗೊನೆಯೊಂದಿಗೆ ಫೋಟೋ ಮತ್ತು ಸೆಲ್ಫಿ ತೆಗೆಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಿದ್ದಾರೆ. ಈ ಬಾಳೆಹಣ್ಣಿಗೆ ಬಾಹುಬಲಿ ಬಾಳೆಹಣ್ಣು ಎಂದು ಹೆಸರಿಡಲಾಗಿದೆ.

ಬಾಳೆಗಿಡ ದಟ್ಟವಾಗಿ ಬೆಳೆದಿದ್ದರಿಂದ ಭಾರದ ಹೊಡೆತಕ್ಕೆ ಗಿಡ ಮುರಿಯದಂತೆ ಆಸರೆ ನೀಡಿ ಬೆಳೆಸಲಾಗಿತ್ತು. ಸಿಂಗಾಪುರದ ಬಾದಾಮಿ ಕರ್ಪೂರ ತಳಿಯ ಬಾಳೆಹಣ್ಣು ಎಂದು ಮುದುನೂರಿ ಶ್ರೀನಿವಾಸರಾಜು ತಿಳಿಸಿದ್ದಾರೆ. ಮಲೇಷಿಯಾದಿಂದ ವಿಶೇಷವಾಗಿ ಈ ಬಾಳೆ ಸಸಿ ತರಲಾಗಿತ್ತು. ಬಾಹುಬಲಿ ಬಾಳೆಹಣ್ಣು ಗೊನೆ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.