ಕೊರೋನಾ ಜೆಎನ್.1 ಭೀತಿ: ಕರ್ನಾಟಕ-ಗೋವಾ ಗಡಿಭಾಗದಲ್ಲಿ ಇಲ್ಲ ಚೆಕ್ಪೋಸ್ಟ್ಗಳು, ನಿರ್ಬಂಧವಿಲ್ಲದೆ ಜನ ಓಡಾಟ!
ಕೊರೋನಾ ಸೋಂಕು ಮಾತ್ರ ಅಂತಲ್ಲ, ರೋಗ ಅಥವಾ ಸೋಂಕು ಯಾವುದೇ ಆಗಿರಲಿ ಮುನ್ನೆಚ್ಚರಿಕೆ ಕ್ರಮ ಚಿಕಿತ್ಸೆಗಿಂತ ಹೆಚ್ಚು ಪ್ರಭಾವಶಾಲಿ ಮತ್ತು ಪರಿಣಾಮಕಾರಿ ಅಂತ ವೈದ್ಯಕೀಯ ಭಾಷೆಯಲ್ಲಿ ಹೇಳುತ್ತಾರೆ. ಕೋವಿಡ್-19 ಮನುಕುಲವನ್ನು ಹೇಗೆ ಕಾಡಿತು ಅಂತ ನಾವ್ಯಾರೂ ಮರೆತಿಲ್ಲ. ಹಾಗಾಗಿ, ಸರ್ಕಾರಗಳು ಮತ್ತು ಜನ ಯಾವ ಕಾರಣಕ್ಕೂ ಎಚ್ಚರ ತಪ್ಪುವಂತಿಲ್ಲ.
ಬೆಳಗಾವಿ: ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ಪೊಲೀಸರ ನಿರ್ಲಕ್ಷ್ಯ ಧೋರಣೆ (indifferent attitude) ಗಾಬರಿ ಹುಟ್ಟಿಸಿ ಆತಂಕ ಮೂಡಿಸುತ್ತದೆ. ಯಾಕೆ ಅನ್ನೋದನ್ನು ಟಿವಿ9 ಕನ್ನಡ ವಾಹಿನಿಯ ಬೆಳಗಾವಿ ವರದಿಗಾರ ವಿವರಿಸುತ್ತಿದ್ದಾರೆ. ಕೊರೋನಾ ವೈರಸ್ ಹೊಸ ರೂಪಾಂತರಿ ಜೆಎನ್.1 (JN.1) ದೇಶದೆಲ್ಲೆಡೆ ತಲ್ಲಣ ಸೃಷ್ಟಿಸುತ್ತಿದೆ. ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ. ನಗರದ ಹೊರಭಾಗದಲ್ಲಿರುವ ಈ ರಸ್ತೆ ಗೋವಾ (Goa) ಮತ್ತು ಮಹಾರಾಷ್ಟ್ರ (Maharashtra) ಎರಡು ರಾಜ್ಯಗಳನ್ನು ಸಂಪರ್ಕಿಸುತ್ತದೆ. ಆದರೆ ಆ ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಬರುವ ಮತ್ತು ನಮ್ಮ ಕಡೆಯಿಂದ ಆ ಕಡೆಗೆ ವಾಹನಗಳಲ್ಲಿ ಹೋಗುವ ಜನರ ಆರೋಗ್ಯ ತಪಾಸಣೆ ನಡೆಸಲು ಪೊಲೀಸ್ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಿಲ್ಲ. ಆ ಚೆಕ್ ಪೋಸ್ಟ್ ಇರುವ ಸ್ಥಳಗಲಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಜನರ ಅರೋಗ್ಯ ತಪಾಸಣೆ ನಡೆಸುತ್ತಾರೆ. ದೃಶ್ಯಗಳಲ್ಲಿ ನೀವು ನೋಡುವ ಹಾಗೆ ಜನ ಯಾವುದೇ ನಿರ್ಬಂಧವಿಲ್ಲದೆ ನಿರ್ಭೀತಿಯಿಂದ ಓಡಾಡುತ್ತಿದ್ದಾರೆ. ಇದು ನಿರ್ಲಕ್ಷ್ಯತನ ಪರಮಾವಧಿ.
ರಾಜ್ಯದಲ್ಲಿ ಈಗಾಗಲೇ ಸೋಂಕಿತರ ಸಂಖ್ಯೆ ಶತಕದ ಗಡಿ ಸಮೀಪಿಸುತ್ತಿದೆ. ಸಂಬಂಧಪಟ್ಟ ಇಲಾಖೆಗಳು ಮತ್ತು ಸರ್ಕಾರಗಳು ಕೂಡಲೇ ಎಚ್ಚರವಹಿಸಬೇಕು ಮತ್ತು ಚೆಕ್ ಪೋಸ್ಟ್ ಗಳನ್ನು ನಿರ್ಮಿಸಬೇಕು. ನಿರ್ಲಕ್ಷ್ಯ ಮತ್ತು ಅಜಾಗರೂಕತೆ ಮುಂದುವರಿದರೆ ಅಪಾಯ ತಪ್ಪಿದ್ದಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ