ದೇಶದಲ್ಲಿ ಗಣ್ಯರಿಗೆ ಮತ್ತು ಅನ್ಯರಿಗೆ ಬೇರೆ ಬೇರೆ ಕಾನೂನು ಯಾಕೆ ಅಂತ ವಿದ್ಯಾರ್ಥಿ ಕೇಳಿದರೆ ಪೊಲೀಸ್ ಅಧಿಕಾರಿಗೆ ಉತ್ತರ ಹೊಳೆಯಲಿಲ್ಲ!
ನೂರು ಅಪರಾಧಿಗಳು ಕಾನೂನು ಕ್ರಮಕ್ಕೆ ಒಳಗಾಗದೆ ತಪ್ಪಿಸಿಕೊಂಡರೂ ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು ಎಂಬ ಮಾತಿದೆ. ಅದರೆ, ನಮ್ಮ ದೇಶದಲ್ಲಿ ಬಹಳಷ್ಟು ಸಲ ಈ ಮಾತು ಉಲ್ಟಾ ಆಗೋದನ್ನು ನಾವು ನೋಡಿದ್ದೇವೆ. ಈ ಪ್ರಜ್ಞಾವಂತ ವಿದ್ಯಾರ್ಥಿ ಅತ್ಯಂತ ಜ್ವಲಂತ ಪ್ರಶ್ನೆಯನ್ನು ಎತ್ತಿದ್ದಾನೆ. ಪೊಲೀಸ್ ಅಧಿಕಾರಿ ಕಾನೂನನ್ನು ವಿವರಿಸಿ ಬಚಾವಾದರಾದರೂ, ವಿದ್ಯಾರ್ಥಿಯ ಪ್ರಶ್ನೆಗೆ ಸಮಾಧಾನಕರ ಉತ್ತರ ಸಿಗಲಿಲ್ಲ.
ನೆಲಮಂಗಲ: ಬೆಂಗಳೂರು ಉತ್ತರ ವಿಭಾಗದ ಡಿಸಿಪಿ (north division DCP) ಸೈದುಲು ಅದಾವತ್ (Saidulu Adavath) ಅವರಿಗೆ ವಿದ್ಯಾರ್ಥಿಗಳಿಂದ ಇಂಥದೊಂದು ಪ್ರಶ್ನೆ ಎದುರಾದೀತೆಂಬ ನಿರೀಕ್ಷೆ ಇರಲಿಲ್ಲ. ಬಾಗಲಕುಂಟೆಯ ಖಾಸಗಿ ಕಾಲೇಜೊಂದರಲ್ಲಿ ಅವರು; ವಿದ್ಯಾರ್ಥಿಗಲ್ಲಿ ಡ್ರಗ್ಸ್ ವ್ಯಸನ ಮತ್ತು ಅದರ ದುಷ್ಪರಿಣಾಮ; ಕಳ್ಳತನ ಹಾಗೂ ದರೋಡೆಗಳನ್ನು ತಡೆಗಟ್ಟಲು ನಾಗರಿಕರು ಅನುಸರಿಸಬಹುದಾದ ಕ್ರಮಗಳ ಬಗ್ಗೆ ಅರಿವು ಮೂಡಿಸಲು ಜಾಗೃತಿ ಅಭಿಯಾನ (awareness programme) ನಡೆಸಿದರು. ಈ ಸಂದರ್ಭದಲ್ಲಿ ಆ ಕಾಲೇಜಿನ ವಿದ್ಯಾರ್ಥಿಯೊಬ್ಬ ಎದ್ದುನಿಂತು, ನಾಡಿನಲ್ಲಿ ರಾಜಕಾರಣಿಗಳಿಗೆ ಮತ್ತು ಸಾಮಾನ್ಯ ಜನರಿಗೆ ಯಾಕೆ ಬೇರೆ ಬೇರೆ ಕಾನೂನುಗಳಿವೆ ಅಂತ ಕೇಳಿಬಿಟ್ಟ! ಯುವಕನ ಪ್ರಶ್ನೆಯ ಅರ್ಧಭಾಗವನ್ನು ಮಾತ್ರ ಅರ್ಥಮಾಡಿಕೊಂಡ ಪೊಲೀಸ್ ಅಧಿಕಾರಿ, ಯಾವುದಾದರೂ ಉದಾಹರಣೆ ಸಮೇತ ಹೇಳಿ ಅನ್ನುತ್ತಾರೆ. ಅಗ ಯುವ ವಿದ್ಯಾರ್ಥಿ, ಡಿಕೆ ಶಿವಕುಮಾರ್ ಅವರ ಡಿಎ ಪ್ರಕರಣ ಅನ್ನುತ್ತಾನೆ. ಅವನ ಮಾತಿಗೆ ಅಲ್ಲಿದ್ದ ವಿದ್ಯಾರ್ಥಿಗಳೆಲ್ಲ ಗೊಳ್ಳಂತ ನಕ್ಕರೆ, ಬ್ಲಶ್ ಆದರೂ ಅದನ್ನು ತೋರಿಸಿಕೊಳ್ಳದ ಸೈದುಲು, ಕಾನೂನು ಪ್ರಕ್ರಿಯೆ ಮತ್ತು ಅಪರಾಧ ಪ್ರಕರಣಗಳಲ್ಲಿ ಪೊಲೀಸರ ಪಾತ್ರವನ್ನು ವಿವರಿಸುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ