Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ದಾರಿ ಬಿಡಿ ಎಂದು ಹಾರ್ನ್​ ಮಾಡಿದಕ್ಕೆ ವಿದ್ಯಾರ್ಥಿಗೆ ಥಳಿತ; ಆರೋಪಿಗಳು ಅರೆಸ್ಟ್​

ದಾರಿ ಬಿಡಿ ಎಂದು ಹಾರ್ನ್​​​ ಮಾಡಿದ್ದಕ್ಕೆ ದುಷ್ಕರ್ಮಿಗಳು ಯುವಕನಿಗೆ ಥಳಿಸಿರುವ ಘಟನೆ ಭೂಪಸಂದ್ರ ರಸ್ತೆಯಲ್ಲಿ ನಡೆದಿದೆ. ಸಂಜಯನಗರದ ಎಂಎಲ್‌ಎ ಲೇಔಟ್‌ ನಿವಾಸಿ ಪ್ರಜ್ವಲ್ ಎಸ್‌ ಹಲ್ಲೆಗೊಳಗಾದ ಯುವಕ. ಭೂಪಸಂದ್ರ ನಿವಾಸಿಗಳಾದ ಅಸಾದುಲ್ಲಾ ಖಾನ್ ಮತ್ತು ಮಸೈಬುಲ್ಲಾ ಖಾನ್ ಹಲ್ಲೆ ಮಾಡಿದ ಆರೋಪಿಗಳು.

ಬೆಂಗಳೂರು: ದಾರಿ ಬಿಡಿ ಎಂದು ಹಾರ್ನ್​ ಮಾಡಿದಕ್ಕೆ ವಿದ್ಯಾರ್ಥಿಗೆ ಥಳಿತ; ಆರೋಪಿಗಳು ಅರೆಸ್ಟ್​
ಸಾಂದರ್ಭಿಕ ಚಿತ್ರ
Follow us
ವಿವೇಕ ಬಿರಾದಾರ
|

Updated on: Nov 13, 2023 | 8:35 AM

ಬೆಂಗಳೂರು ನ.13: ದಾರಿ ಬಿಡಿ ಎಂದು ಹಾರ್ನ್​​​ ಮಾಡಿದ್ದಕ್ಕೆ ದುಷ್ಕರ್ಮಿಗಳು ಯುವಕನಿಗೆ ಥಳಿಸಿರುವ (Thrash) ಘಟನೆ ಭೂಪಸಂದ್ರ ರಸ್ತೆಯಲ್ಲಿ ನಡೆದಿದೆ. ಸಂಜಯನಗರದ ಎಂಎಲ್‌ಎ ಲೇಔಟ್‌ ನಿವಾಸಿ ಪ್ರಜ್ವಲ್ ಎಸ್‌ ಹಲ್ಲೆಗೊಳಗಾದ ಯುವಕ. ಭೂಪಸಂದ್ರ ನಿವಾಸಿಗಳಾದ ಅಸಾದುಲ್ಲಾ ಖಾನ್ ಮತ್ತು ಮಸೈಬುಲ್ಲಾ ಖಾನ್ ಹಲ್ಲೆ ಮಾಡಿದ ಆರೋಪಿಗಳನ್ನು ಪೊಲೀಸರು (Police) ಬಂಧಿಸಿದ್ದಾರೆ.

ಸಂಜಯನಗರದ ಎಂಎಲ್‌ಎ ಲೇಔಟ್‌ ಪ್ರಜ್ವಲ್​ ಎಸ್​ (19) ಬ್ರಿಗೇಡ್ ರಸ್ತೆಯಲ್ಲಿರುವ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದಾರೆ. ಪ್ರಜ್ವಲ್​ ಶುಕ್ರವಾರ ಸೆಮಿಸ್ಟರ್​ ಪರೀಕ್ಷೆ ಬರೆಯಲು ಬೆಳಿಗ್ಗೆ 11.30 ಸುಮಾರಿಗೆ ಹುಂಡೈ ಐ10 ಕಾರಿನಲ್ಲಿ ಕಾಲೇಜಿಗೆ ತೆರಳುತ್ತಿದ್ದರು. ಕಲ್ಪನಾ ಚಾವ್ಲಾ ರಸ್ತೆಗೆ ಹೋಗುವ ಭೂಪಸಂದ್ರ ಮುಖ್ಯ ರಸ್ತೆಯಲ್ಲಿ ಬೈಕ್​ ಅಡ್ಡ ನಿಲ್ಲಿಸಿ ಅಸಾದುಲ್ಲಾ ಖಾನ್ ಹಾಗೂ ಮಸೈಬುಲ್ಲಾ ಸಿಗರೇಟ್​ ಸೇದುತ್ತ ನಿಂತಿದ್ದರು.

ರಸ್ತೆಯ ಎಡಭಾಗದಲ್ಲಿ ಬಿಎಂಟಿಸಿ ಬಸ್‌ಗಳು ಮತ್ತು ಇತರ ಭಾರೀ ವಾಹನಗಳು ಚಲಿಸುತ್ತಿದ್ದವು. ಆದ್ದರಿಂದ ಪ್ರಜ್ವಲ್​ ಬಲಗಡೆಯಿಂದ ತಿರುವು ತೆಗೆದುಕೊಳ್ಳಲು ಯತ್ನಿಸಿದರು. ಆದರೆ ಈ ಇಬ್ಬರು ರಸ್ತೆಯನ್ನು ಬ್ಲಾಕ್​ ಮಾಡಿದ್ದನು ಗಮನಿಸಿದ ಪ್ರಜ್ವಲ್​ ಹಾರ್ನ್ ಮಾಡಿದರು. ಆದರೆ ಆರೋಪಿಗಳು “ಕೆಲವೇ ಕ್ಷಣಗಳ ಹಿಂದೆ ಸಿಗರೇಟನ್ನು ಹಚ್ಚಿಕೊಂಡಿದ್ದೇವೆ, ಅದು ಮುಗಿಯುವವರೆಗೆ ನಿಲ್ಲು” ಎಂದಿದ್ದಾರೆ. ಆದರೆ ಪ್ರಜ್ವಲ್​ ಮತ್ತೆ ಹಾರ್ನ್ ಮಾಡಿದ್ದು, ದಾರಿ ಬಿಡುವಂತೆ ಹೇಳಿದರು.

ಇದನ್ನೂ ಓದಿ: ಆನೇಕಲ್​: ಪೊಲೀಸ್ ಎಂದು ಹೇಳಿಕೊಂಡು ಟೋಲ್ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ

ಆಗ ಇಬ್ಬರು ದುಷ್ಕರ್ಮಿಗಳು ಪ್ರಜ್ವಲ್ ಕಡೆಗೆ ಬಂದು, ಕಾರಿನ ಗಾಜು ಒಡೆದಿದ್ದಾರೆ. ಪ್ರಜ್ವಲ್ ಮುಖಕ್ಕೆ ಗುದ್ದಿ ಕಾರಿನಿಂದ ಹೊರಗೆ ಎಳೆದಿದ್ದಾರೆ. ಬಳಿಕ ಪ್ರಜ್ವಲ್ ಅವರನ್ನು ರಸ್ತೆಗೆ ತಳ್ಳಿ ಪಕ್ಕೆಲುಬುಗಳಿಗೆ ಒದ್ದಿದ್ದಾರೆ. ನಂತರ ನಾವು ಸಿಗರೇಟ್​ ಸೇದಿ ದಾರಿ ಬಿಡುವವರೆಗು ಕಾಯಬೇಕು ಎಂದು ಆರೋಪಿಗಳು ಪ್ರಜ್ವಲ್​ಗೆ ಹೇಳಿದ್ದಾರೆ. ಪ್ರಜ್ವಲ್ ಅವರ ಮೂಗಿಗೆ ಗಾಯಗಳಾಗಿದ್ದು, ಮೂರು ಹಲ್ಲುಗಳು ಸಡಿಲಗೊಂಡಿವೆ. ಇಬ್ಬರೂ ಕಾರಿನ ಇತರ ಗ್ಲಾಸ್‌ಗಳಿಗೂ ಹಾನಿ ಮಾಡಿದ್ದಾರೆ.

ಸ್ಥಳೀಯರು ಕೂಡಲೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೊಯ್ಸಳ ವಾಹನವು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಆರೋಪಿಗಳು ಮತ್ತು ಅವರ ಆರು ಜನ ಸ್ನೇಹಿತರು ಸ್ಥಳದಿಂದ ಪರಾರಿಯಾದರು. ಕೊನೆಗೂ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶನಿವಾರದಂದು ಇಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಉತ್ತರ ವಿಭಾಗ ಡಿಸಿಪಿ ಸೈದುಲು ಅದಾವತ್ ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ