ಆನೇಕಲ್​: ಪೊಲೀಸ್ ಎಂದು ಹೇಳಿಕೊಂಡು ಟೋಲ್ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ

ನವೆಂಬರ್​ 1 ರಂದು ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿ ಎಲೆಕ್ಟ್ರಾನಿಕ್ ಸಿಟಿಯ Betpl ಎಲಿವೇಟೆಡ್ ಟೋಲ್ ಸಿಬ್ಬಂದಿ ಮೇಲೆ ಬೈಕ್​ ಸವಾರನೊಬ್ಬ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ.

ಆನೇಕಲ್​: ಪೊಲೀಸ್ ಎಂದು ಹೇಳಿಕೊಂಡು ಟೋಲ್ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ
ಟೋಲ್​ ಸಿಬ್ಬಂದಿ ಮೇಲೆ ಹಲ್ಲೆ
Follow us
ರಾಮು, ಆನೇಕಲ್​
| Updated By: ವಿವೇಕ ಬಿರಾದಾರ

Updated on: Nov 07, 2023 | 1:51 PM

ಆನೇಕಲ್ ನ.07: ಪೊಲೀಸ್ ಎಂದು ಹೇಳಿಕೊಂಡು ಟೋಲ್ (Toll) ಸಿಬ್ಬಂದಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಬೆಂಗಳೂರು-ಹೊಸೂರು (Bengaluru-Hosuru) ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಎಲೆಕ್ಟ್ರಾನಿಕ್ ಸಿಟಿಯ Betpl ಎಲಿವೇಟೆಡ್ ಟೋಲ್ ಬಳಿ ನಡೆದಿದೆ. ಪವನ್ ಕುಮಾರ್ ಹಲ್ಲೆಗೊಳಗಾದ ಟೋಲ್ ಸಿಬ್ಬಂದಿ. ನವೆಂಬರ್​ 1 ರಂದು ಟೋಲ್​ ಸಿಬ್ಬಂದಿ ಪವನ್ ಕುಮಾರ್, ದ್ವಿಚಕ್ರ ವಾಹನ ಸವಾರನಿಗೆ ಟೋಲ್ ಹಣವನ್ನು ಕೇಳಿದ್ದರು.

ಪೊಲೀಸ್ ಸಿಬ್ಬಂದಿ ಬಳಿಯೇ ಹಣ ಕೇಳುತ್ತೀಯಾ ಎಂದು ಬೈಕ್​ ಸವಾರ ಅವಾಜ್ ಆಗಿದ್ದನು. ಈ ವೇಳೆ ಪವನ್​ ಕುಮಾರ್ ಪೊಲೀಸ್ ಐಡಿ ಕಾರ್ಡ್ ತೋರಿಸುವಂತೆ ಹೇಳಿದರು. ಆಗ ಬೈಕ್​ ಸವಾರ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹೆಲ್ಮೆಟ್ ಹಾಗೂ ಕೈಯಿಂದ ಪವನ್​ ಕುಮಾರ್​ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ.

ಇದರಿಂದ ಪವನ್​ ಕುಮಾರ್​ ಅವರ ತಲೆ ಹಾಗೂ ಕಿವಿಯ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಪವನ್​ ಕುಮಾರ್​ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ನಡೆಸುತ್ತಿರುವ ದೃಶ್ಯ ಟೋಲ್​ನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ