ಚಿನ್ನ ತೋರಿಸಲು ಮನೆ ಕರೆಯಿಸಿದ ಮಾಲೀಕ, ಬಾತ್ ರೂಮ್ಗೆ ಹೋಗಿ ಬರುವಷ್ಟರಲ್ಲೇ ವ್ಯಕ್ತಿ ಚಿನ್ನದೊಂದಿಗೆ ಪರಾರಿ
ಗೋಲ್ಡ್ ಡಿಸೈನರ್ ಆಗಿರುವ ಮೋಹನ್ ಲಾಲ್ ಚಿನ್ನದ ವ್ಯಾಪಾರಿ ರಾಮ್ ಲಾಲ್ ಮನೆಯಲ್ಲಿ 84 ಲಕ್ಷ ಬೆಲೆ ಬಾಳುವ 1.399 ಕೆಜಿ ಚಿನ್ನವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ . ಸದ್ಯ ಸಂಪಂಗಿರಾಮನಗರ ಪೊಲೀಸರು ಕಳ್ಳನಿಗಾಗಿ ಬಲೆ ಬೀಸಿ ಆರೋಪಿಯನ್ನು ಬಂಧಿಸಿದ್ದಾರೆ. ಹಾಗೂ ಆರೋಪಿಯಿಂದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ.
ಬೆಂಗಳೂರು, ನ.07: ಸಂಪಂಗಿರಾಮನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ (Sampangi Rama Nagar Police Station) ಚಿನ್ನಾಭರಣ ಕಳವು ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೋಹನ್ ಲಾಲ್ ಬಂಧಿತ ಆರೋಪಿ. ಗೋಲ್ಡ್ ಡಿಸೈನರ್ ಆಗಿರುವ ಮೋಹನ್ ಲಾಲ್ ಚಿನ್ನದ ವ್ಯಾಪಾರಿ ರಾಮ್ ಲಾಲ್ ಮನೆಯಲ್ಲಿ 84 ಲಕ್ಷ ಬೆಲೆ ಬಾಳುವ 1.399 ಕೆಜಿ ಚಿನ್ನವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ (Gold Theft). ಸದ್ಯ ಸಂಪಂಗಿರಾಮನಗರ ಪೊಲೀಸರು ಕಳ್ಳನಿಗಾಗಿ ಬಲೆ ಬೀಸಿ ಆರೋಪಿಯನ್ನು ಬಂಧಿಸಿದ್ದಾರೆ. ಹಾಗೂ ಆರೋಪಿಯಿಂದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ.
ಗೋಲ್ಡ್ ಡಿಸೈನರ್ ಆಗಿರುವ ಮೋಹನ್ ಲಾಲ್ಗೂ ಚಿನ್ನದ ವ್ಯಾಪಾರಿ ರಾಮ್ ಲಾಲ್ ನಡುವೆ ಹಲವು ವರ್ಷಗಳಿಂದಲೂ ವ್ಯವಹಾರ ನಡೆಯುತ್ತಿತ್ತು. ಚಿನ್ನದ ವ್ಯಾಪಾರಿ ರಾಮ್ ಲಾಲ್ ಗಟ್ಟಿ ಚಿನ್ನವನ್ನು ನೀಡಿ ಡಿಸೈನ್ ಮಾಡಲು ಮೋಹನ್ ಲಾಲ್ಗೆ ಹೇಳುತ್ತಿದ್ದರು. ಅದರಂತೆ ರಾಮ್ ಲಾಲ್ ಅವರು ಈ ಹಿಂದೆ ಮೋಹನ್ ಲಾಲ್ಗೆ ನೀಡಿದ್ದ 2.931 ಕೆಜಿ ಚಿನ್ನದ ಬಗ್ಗೆ ಮಾತನಾಡುವ ವಿಚಾರವಾಗಿ ಮನೆಗೆ ಕರೆಸಿದ್ದರು. ಈ ವೇಳೆ ರಾಮ್ ಲಾಲ್ ಬಾತ್ ರೂಂಗೆ ಹೋಗಿದ್ದು ಸಮಯ ನೋಡಿಕೊಂಡು ಮೋಹನ್ ಲಾಲ್ ಮನೆಯಲ್ಲಿದ್ದ 84 ಲಕ್ಷ ಬೆಲೆ ಬಾಳುವ 1.399 ಕೆ.ಜಿ. ಚಿನ್ನವನ್ನು ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದರು. ಬಾತ್ ರೂಂನಿಂದ ಹೊರಗೆ ಬಂದು ನೋಡಿದ ರಾಮ್ ಲಾಲ್ ಶಾಕ್ ಆಗಿದ್ದು ನಂಬಿಕೆ ದ್ರೋಹ ಮಾಡಿದ ಮೋಹನ್ ವಿರುದ್ಧ ಸಂಪಂಗಿರಾಮನಗರದಲ್ಲಿ ದೂರು ದಾಖಲಿಸಿದ್ದರು. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ 1.399 ಕೆಜಿ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಜಿಂಕೆ ಕೊಂಬು, ಆನೆ ದಂತ, ಎರಡು ತಲೆ ಹಾವು ಸೇಲ್ ಮಾಡುತ್ತಿದ್ದ ಐವರು ಅರೆಸ್ಟ್
ಗಾಂಜಾ ಸಾಗಾಟ ಮಾಡುತ್ತಿದ್ದ ನಾಲ್ವರು ಅರೆಸ್ಟ್
ತುಮಕೂರಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಮನ್, ಮುದಾಸೀರ್ ಅಹ್ಮದ್ ಷರೀಫ್, ಪ್ರಶಾಂತ್, ಮುಬಾರಕ್ ಪಾಷಾ ಬಂಧಿತರು. ಆರೋಪಿಗಳಿಂದ 1.20 ಲಕ್ಷ ಮೌಲ್ಯದ 4 ಕೆಜಿ 330 ಗ್ರಾಂ ಒಣಗಿದ ಗಾಂಜಾ ಹಾಗೂ ಒಂದು ಕಾರು ವಶಕ್ಕೆ ಪಡೆಯಲಾಗಿದೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ