ಧಾರವಾಡ: ದೀಪಾವಳಿ ಹಬ್ಬದ ಮಧ್ಯೆ ಭರ್ಜರಿ ಜೂಜಾಟ; ಪೊಲೀಸ್​ ದಾಳಿ, 20 ಜನರ ಬಂಧನ

ಧಾರವಾಡ ತಾಲೂಕಿನ 3 ಜೂಜು ಅಡ್ಡೆಗಳ ಮೇಲೆ ಪೊಲೀಸರು ದಾಳಿ ಮಾಡಿದ ಘಟನೆ ಧಾರವಾಡ ತಾಲೂಕಿನ ಗರಗದಲ್ಲಿ ನಡೆದಿದೆ. ಇನ್ನು ಈ ವೇಳೆ ಪೊಲೀಸರಿಂದ ಒಟ್ಟು 20 ಜೂಜುಕೋರರನ್ನು ಬಂಧಿಸಲಾಗಿದ್ದು, 24 ಸಾವಿರ ರೂಪಾಯಿಯನ್ನು ವಶಕ್ಕೆ ಪಡೆಯಲಾಗಿದೆ.

ಧಾರವಾಡ: ದೀಪಾವಳಿ ಹಬ್ಬದ ಮಧ್ಯೆ ಭರ್ಜರಿ ಜೂಜಾಟ; ಪೊಲೀಸ್​ ದಾಳಿ, 20 ಜನರ ಬಂಧನ
ಪ್ರಾತಿನಿಧಿಕ ಚಿತ್ರ
Follow us
ಶಿವಕುಮಾರ್ ಪತ್ತಾರ್. ಹುಬ್ಬಳ್ಳಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 12, 2023 | 7:56 PM

ಧಾರವಾಡ, ನ.12: ದೀಪಾವಳಿ ಸಮಯದಲ್ಲಿ ಉತ್ತರ ಕರ್ನಾಟಕ ಭಾಗಗಳಲ್ಲಿ ಜೂಜು ಆಡುವ ಸಂಪ್ರದಾಯವಿತ್ತು. ಬಳಿಕ ಇದನ್ನು ಸಂಪೂರ್ಣ ನಿಷೇಧಿಸಲಾಯಿತು. ಆದರೆ, ಅಲ್ಲಲ್ಲಿ ಕೆಲವೊಂದು ಪ್ರಕರಣಗಳು ಕಂಡು ಬರುತ್ತವೆ. ಅದರಂತೆ ಇಂದು ಧಾರವಾಡ(Dharwad) ತಾಲೂಕಿನ 3 ಜೂಜು(Gambling) ಅಡ್ಡೆಗಳ ಮೇಲೆ ಪೊಲೀಸರು ದಾಳಿ ಮಾಡಿದ ಘಟನೆ ಧಾರವಾಡ ತಾಲೂಕಿನ ಗರಗದಲ್ಲಿ ನಡೆದಿದೆ. ಇನ್ನು ಈ ವೇಳೆ ಪೊಲೀಸರಿಂದ ಒಟ್ಟು 20 ಜೂಜುಕೋರರನ್ನು ಬಂಧಿಸಲಾಗಿದ್ದು, 24 ಸಾವಿರ ರೂಪಾಯಿಯನ್ನು ವಶಕ್ಕೆ ಪಡೆಯಲಾಗಿದೆ. ಶಿಂಗನಳ್ಳಿಯಲ್ಲಿ ನಾಲ್ವರು, ಕೊಟಬಾಗಿ ಹಾಗೂ ಲಕಮಾಪುರ ಗ್ರಾಮದಲ್ಲಿ ತಲಾ 8 ಜೂಜುಕೋರರನ್ನು ಬಂಧಿತರು, ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು‌ ಮಾಡಲಾಗಿದೆ.

ಕೆಜಿಎಫ್​​ ನಗರದ ಡಿಎಆರ್​​ ಮೈದಾನದಲ್ಲಿ ರೌಡಿಗಳ ಪರೇಡ್​​​

ಕೋಲಾರ: ಇತ್ತೀಚೆಗೆ ಜಿಲ್ಲೆಯಲ್ಲಿ ಕೊಲೆ, ಅಪರಾಧ ಪ್ರಕರಣ ಹೆಚ್ಚಳವಾಗುತ್ತಿದ್ದು, ಕೆಲ ದಿನಗಳ ಹಿಂದೆ ಅಪ್ರಾಪ್ತ ಬಾಲಕನನ್ನು ಹಿಂಸೆ ಕೊಟ್ಟು ಆತನ ಸ್ನೇಹಿತರೆ ಹತ್ಯೆ ಮಾಡಿದ್ದರು. ಇಂತಹ ಚಟುವಟಿಕೆಗಳಿಗೆ ಬ್ರೆಕ್​ ಹಾಕುವ ಹಿನ್ನೆಲೆ ಇಂದು ಜಿಲ್ಲೆಯ ಕೆಜಿಎಫ್​​ ನಗರದ ಡಿಎಆರ್​​ ಮೈದಾನದಲ್ಲಿ ರೌಡಿಗಳ ಪರೇಡ್​​​ ಹಮ್ಮಿಕೊಳ್ಳಲಾಗಿತ್ತು. ಹೌದು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ರೌಡಿಗಳಿಗೆ ಕೋಲಾರ ಎಸ್​​ಪಿ ಶಾಂತರಾಜು, ಡಿವೈಎಸ್​ಪಿ ಪಾಂಡುರಂಗ ​ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ:ಕೊಪ್ಪಳ: ಗ್ರಾ.ಪಂ ಅಧ್ಯಕ್ಷ ಸ್ಥಾನದ ಮೀಸಲಾತಿಗಾಗಿ ಗಲಾಟೆ ಪ್ರಕರಣಕ್ಕೆ ಟ್ವಿಸ್ಟ್​: ಜೂಜು ಅಡ್ಡೆ ಮೇಲೆ ದಾಳಿ ಮಾಡಿದ್ದರಿಂದ ಘರ್ಷಣೆ

ಕಾರಿನಲ್ಲಿದ್ದ ಚಿನ್ನಾಭರಣ ಕಳವು ಮಾಡಿರುವ ತೃತೀಯಲಿಂಗಿಗಳು

ಬೆಂಗಳೂರು: ಕಾರಿನಲ್ಲಿದ್ದ ಚಿನ್ನಾಭರಣವನ್ನು ತೃತೀಯಲಿಂಗಿಗಳು ಕಳವು ಮಾಡಿದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಮಾಕಳಿ ಬಳಿ ನಡೆದಿದೆ. ಬೇಗೂರಿನ ಮಂಜೇಶ್‌ ಎಂಬುವವರಿಗೆ ಸೇರಿದ ಕಾರು ಇದಾಗಿದ್ದು, ಅದರಲ್ಲಿದ್ದ ಬರೊಬ್ಬರಿ 4 ಲಕ್ಷ 50 ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಕದ್ದು ಪರಾರಿಯಾಗಿದ್ದಾರೆ. ಸಹನಾ, ಮಂಜುಳಾ, ಖುಷಿ, ರಿಷಿಕಾ ಎಂಬುವವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ರಾತ್ರಿ 11.30 ರಲ್ಲಿ ಮೂತ್ರ ವಿಸರ್ಜನೆಗಾಗಿ ಕಾರು ನಿಲ್ಲಿಸಿದ್ದಾಗ ಈ ಘಟನೆ ನಡೆದಿದೆ. ಈ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ