‘ಕಾಟೇರ’, ‘ಸಲಾರ್’ ಮೊದಲು ‘ಡಂಕಿ’ ಟಿಕೆಟ್ ವಾಪಸ್ ಕೊಟ್ಟೆ: ದುನಿಯಾ ವಿಜಯ್

‘ಕಾಟೇರ’, ‘ಸಲಾರ್’ ಮೊದಲು ‘ಡಂಕಿ’ ಟಿಕೆಟ್ ವಾಪಸ್ ಕೊಟ್ಟೆ: ದುನಿಯಾ ವಿಜಯ್

ಮಂಜುನಾಥ ಸಿ.
|

Updated on:Dec 20, 2023 | 10:52 PM

Duniya Vijay: ದರ್ಶನ್ ನಟನೆಯ ‘ಕಾಟೇರ’, ಕನ್ನಡಿಗರು ನಿರ್ಮಾಣ ಮಾಡಿರುವ ‘ಸಲಾರ್’ ಸಿನಿಮಾ ನನ್ನ ಮೊದಲ ಆದ್ಯತೆ ಎಂದಿದ್ದಾರೆ ದುನಿಯಾ ವಿಜಯ್.

ಹೊಂಬಾಳೆ ಫಿಲ್ಮ್ಸ್ (Hombale Films)​ ನಿರ್ಮಿಸಿರುವ ‘ಸಲಾರ್’ (Salaar) ಹಾಗೂ ಶಾರುಖ್ ಖಾನ್ ನಟನೆಯ ‘ಡಂಕಿ’ ಸಿನಿಮಾ ಒಟ್ಟಿಗೆ ಬಿಡುಗಡೆ ಆಗುತ್ತಿದೆ. ಅದರ ಮುಂದಿನ ವಾರ ದರ್ಶನ್ ನಟನೆಯ ‘ಕಾಟೇರ’ ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಬಗ್ಗೆ ಮಾತನಾಡಿರುವ ನಟ ದುನಿಯಾ ವಿಜಯ್, ಶಾರುಖ್ ಖಾನ್ ಅಭಿಮಾನಿಗಳು ಬಂದು ‘ಡಂಕಿ’ ಸಿನಿಮಾದ ಟಿಕೆಟ್ ಕೊಟ್ಟರು, ನಾನು ಕನ್ನಡದ ‘ಕಾಟೇರ’ ಮತ್ತು ಕನ್ನಡದವರೇ ನಿರ್ಮಿಸಿರುವ ‘ಸಲಾರ್’ ಸಿನಿಮಾ ಬಿಡುಗಡೆ ಆಗುತ್ತಿದೆ. ಅದು ನನ್ನ ಮೊದಲ ಆದ್ಯತೆ, ನಾನು ಸಹ ಶಾರುಖ್ ಖಾನ್ ಅಭಿಮಾನಿ ಆದರೆ ನಾನು ನಮ್ಮ ಸಿನಿಮಾ ಮೊದಲು ನೋಡುತ್ತೀನಿ ಎಂದು ಟಿಕೆಟ್ ವಾಪಸ್ ಕೊಟ್ಟೆ’’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published on: Dec 20, 2023 10:52 PM