ಜೆಎನ್.1ಗೆ ಕೊವಿಡ್ನ ಆಸಕ್ತಿಯ ರೂಪಾಂತರಿ ಎಂದು ಹೆಸರು; ಇದರ ಲಕ್ಷಣಗಳೇನು?
ಕೊವಿಡ್ ಹೊಸ ರೂಪಾಂತರಿ ಜೆಎನ್.1 ಸೋಂಕಿನಿಂದ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಭಾರತದಲ್ಲೂ ಕೊವಿಡ್ ರೂಪಾಂತರಿಯ ಪ್ರಕರಣಗಳು ಹೆಚ್ಚುತ್ತಿದ್ದು, ಅದರ ರೋಗ ಲಕ್ಷಣಗಳ ಬಗ್ಗೆ ಮಾಹಿತಿ ಇಲ್ಲಿದೆ.
2 ವರ್ಷಗಳಿಗೂ ಹೆಚ್ಚು ಕಾಲ ಬಹುತೇಕ ಕೊವಿಡ್-19 ಮುಕ್ತ ಜೀವನದ ನಂತರ ಕಳೆದ ಕೆಲವು ದಿನಗಳಿಂದ ಮತ್ತೆ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ. ಅಮೆರಿಕಾ, ಚೀನಾ, ಕೇರಳದಲ್ಲಿ ಮತ್ತೆ ಕೊವಿಡ್ ರೂಪಾಂತರಿ ಆತಂಕ ಸೃಷ್ಟಿಸಿದೆ. ಹೊಸ COVID-19 ರೂಪಾಂತರಿಯನ್ನು ವಿಶ್ವ ಆರೋಗ್ಯ ಸಂಸ್ಥೆಯು ಕೊವಿಡ್ನ “ಆಸಕ್ತಿಯ ರೂಪಾಂತರಿ” ಎಂದು ವರ್ಗೀಕರಿಸಿದೆ. ಈ ರೂಪಾಂತರಿ ಸಾರ್ವಜನಿಕರ ಆರೋಗ್ಯಕ್ಕೆ ಹೆಚ್ಚಿನ ಅಪಾಯವನ್ನುಂಟುಮಾಡುವುದಿಲ್ಲ ಎಂದು ಅದು ಹೇಳಿದೆ. JN.1 ರೂಪಾಂತರವು ಭಾರತದ ಆರೋಗ್ಯ ವೃತ್ತಿಪರರು, ತಜ್ಞರು, ಅಧಿಕಾರಿಗಳು ಮತ್ತು ಸಾರ್ವಜನಿಕರಲ್ಲಿ ಕಳವಳವನ್ನು ಹುಟ್ಟುಹಾಕಿದೆ.
JN.1 ಕೋವಿಡ್ ಸಬ್‌ವೇರಿಯಂಟ್ ಆರಂಭದಲ್ಲಿ ಲಕ್ಸೆಂಬರ್ಗ್‌ನಲ್ಲಿ ಗುರುತಿಸಲ್ಪಟ್ಟಿತ್ತು. ಇದು ಪಿರೋಲಾ ರೂಪಾಂತರದ (BA.2.86) ವಂಶದಿಂದ ಬಂದಿದ್ದು, ಇದು ಓಮಿಕ್ರಾನ್ ಉಪ-ವ್ಯತ್ಯಯದಲ್ಲಿ ತನ್ನ ಮೂಲವನ್ನು ಹೊಂದಿದೆ. ಭಾರತದಲ್ಲಿ ಕೊವಿಡ್ ರೂಪಾಂತರಿಯಾದ JN.1ರ ಮೊದಲ ಪ್ರಕರಣವನ್ನು 2023ರ ಡಿಸೆಂಬರ್ 8ರಂದು ಕೇರಳದ ತಿರುವನಂತಪುರಂ ಜಿಲ್ಲೆಯ ಕರಕುಲಂನಲ್ಲಿ ಪತ್ತೆಹಚ್ಚಲಾಯಿತು. ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 260 ಹೊಸ ಕೊರೋನಾವೈರಸ್ ಸೋಂಕಿನ ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ: ಕೇರಳದಲ್ಲಿ ಕೊವಿಡ್ ರೂಪಾಂತರಿ ಜೆಎನ್.1 ಪತ್ತೆ; ಏನಿದರ ಲಕ್ಷಣ? ತಡೆಗಟ್ಟುವುದು ಹೇಗೆ?
ಹೆಚ್ಚಿನ ಸಂಖ್ಯೆಯ ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಡೆಸಲು ಕೇಂದ್ರ ಸರ್ಕಾರವು ತ್ವರಿತವಾಗಿ ಕಾರ್ಯನಿರ್ವಹಿಸಿದೆ. ಈ ಬಗ್ಗೆ ರಾಜ್ಯಗಳಿಗೆ ಎಚ್ಚರಿಕೆಯನ್ನೂ ನೀಡಿದೆ. ಪತ್ತೆಯಾಗಿರುವ ಕೊವಿಡ್ ಪಾಸಿಟಿವ್ ಮಾದರಿಗಳನ್ನು INSACOG ಪ್ರಯೋಗಾಲಯಗಳಿಗೆ ಕಳುಹಿಸಲಾಗುತ್ತಿದೆ.
ಕೊವಿಡ್ ವೇರಿಯಂಟ್ JN. 1 ಹೆಚ್ಚಿನ ಟ್ರಾನ್ಸ್ಮಿಸಿಬಿಲಿಟಿ ಮತ್ತು ಸೌಮ್ಯ ರೋಗಲಕ್ಷಣಗಳನ್ನು ಹೊಂದಿರುತ್ತದೆ. ಇದು ಹಿಂದಿನ ಒಮಿಕ್ರಾನ್ ತಳಿಯದ್ದೇ ರೋಗಲಕ್ಷಣಗಳನ್ನು ಹೊಂದಿದೆ. ಆದರೆ, ದುರ್ಬಲ ಆರೋಗ್ಯ ಸ್ಥಿತಿ ಹೊಂದಿರುವವರಿಗೆ, ಗರ್ಭಿಣಿಯರಿಗೆ, ವೃದ್ಧರಿಗೆ, ಮಕ್ಕಳಿಗೆ ಈ ಸೋಂಕಿನ ಅಪಾಯ ಹೆಚ್ಚು.
JN.1 ಅಮೆರಿಕಾದಲ್ಲಿ ಸುಮಾರು ಶೇ. 15ರಿಂದ ಶೇ. 29ರಷ್ಟು ಪ್ರಕರಣಗಳನ್ನು ಹೊಂದಿದೆ. ಹೆಚ್ಚಿದ ಸೋಂಕು ಮತ್ತು ಹರಡುವಿಕೆ ಇದ್ದರೂ JN.1ನ ರೋಗಲಕ್ಷಣಗಳು ಸೌಮ್ಯವಾಗಿರುತ್ತವೆ. ಈ ಸೋಂಕು ಕಾಣಿಸಿಕೊಂಡರೆ ಆಸ್ಪತ್ರೆಗೆ ದಾಖಲಾಗಲೇಬೇಕೆಂದೇನೂ ಇಲ್ಲ. ಮನೆಯಲ್ಲೇ ಕ್ವಾರಂಟೈನ್ ಆಗಿ ರೋಗವನ್ನು ಕಡಿಮೆ ಮಾಡಿಕೊಳ್ಳಬಹುದು.
ಇದನ್ನೂ ಓದಿ: ದೇಶದಲ್ಲಿ 20 ಕೊರೊನಾ ಜೆಎನ್1 ಪ್ರಕರಣ, ಕರ್ನಾಟಕದಲ್ಲಿ ಒಂದು ಸಾವು: ದಿನೇಶ್ ಗುಂಡೂರಾವ್ ಮಾಹಿತಿ
ಕೋವಿಡ್ ರೂಪಾಂತರಿ JN.1 ಲಕ್ಷಣಗಳು:
ಕಳೆದ ಕೆಲವು ವರ್ಷಗಳಲ್ಲಿ ಕಂಡುಬಂದ ಇತರ ಕೋವಿಡ್ ರೂಪಾಂತರಿಗಳಂತೆ JN.1 ರೂಪಾಂತರಿ ಸಹ ಹಿಂದಿನ ತಳಿಗಳಿಂದ ಉಂಟಾದ ರೋಗಲಕ್ಷಣಗಳನ್ನು ಹೊಂದಿದೆ. ಕೊವಿಡ್ ರೂಪಾಂತರಿ JN.1ನಿಂದ ಉಂಟಾಗುವ ಸೋಂಕಿನ ಸಾಮಾನ್ಯ ಲಕ್ಷಣಗಳು ಇಲ್ಲಿವೆ:
– ಜ್ವರ
– ವಿಪರೀತ ಶೀತ
– ಗಂಟಲು ಕೆರೆತ
– ತಲೆನೋವು
– ಕಿಬ್ಬೊಟ್ಟೆಯ ನೋವು ಮತ್ತು ಅತಿಸಾರ
– ಕೆಲವರಿಗೆ ಉಸಿರಾಟದ ತೊಂದರೆ ಕೂಡ ಉಂಟಾಗಬಹುದು
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ