ಉತ್ತರ ಪ್ರದೇಶದ (Uttar Pradesh) ಹಾಪುರ್‌ನಲ್ಲಿ (Hapur) ಯುವಕರು ಕಾರು ಮತ್ತು ಬೈಕ್‌ಗಳಲ್ಲಿ ಶಾರ್ಟ್ ವಿಡಿಯೊ ಮಾಡಿದ್ದು ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವ್ಯಾಪಕವಾಗಿ ಶೇರ್ ಆಗಿರುವ ವಿಡಿಯೊಗಳು ಹಾಪುರ್ ಎಸ್ಪಿ ಅಭಿಷೇಕ್ ವರ್ಮಾ ಅವರ ಕಣ್ಣಿಗೆ ಬಿದ್ದಿದೆ. ವರ್ಮಾ ಈ ಪ್ರದೇಶದಲ್ಲಿ ಸಂಚಾರ ಉಲ್ಲಂಘನೆಗಳನ್ನು ಪರಿಶೀಲಿಸುವ ಅಭಿಯಾನವನ್ನು ನಡೆಸುತ್ತಿದ್ದರು. ಇದೀಗ ಈ ವೈರಲ್ ಆಗಿರುವ ವಿಡಿಯೊ ಮಾಡಿದ ಯುವಕರಿಗೆ 77,000 ರೂಪಾಯಿ ದಂಡ ವಿಧಿಸಲಾಗಿದೆ.
“ರಾಜ್ಯ ಸರ್ಕಾರದ ರೇಸಿಂಗ್ ಮತ್ತು ಸಾರ್ವಜನಿಕ ಸ್ಥಳದಲ್ಲಿ ವೇಗದ ಪ್ರಯೋಗಗಳ ಲಿಖಿತ ಅನುಮತಿಯಿಲ್ಲದೆ,” ಸೆಕ್ಷನ್ 184 a, b, d, e, f ನಲ್ಲಿ ಉಲ್ಲೇಖಿಸಲಾದ ಅಪರಾಧಗಳನ್ನು ಹೊರತುಪಡಿಸಿ, ಎಂವಿ ಕಾಯಿದೆ 1988 ರ ಅಡಿಯಲ್ಲಿ ಪ್ರಾಧಿಕಾರವು ಕಾನೂನುಬದ್ಧವಾಗಿ ನೀಡಿದ ಯಾವುದೇ ನಿರ್ದೇಶನದ ಅಸಹಕಾರ” ಮತ್ತು “ವಿಮೆ ಇಲ್ಲದೆ ಚಾಲನೆ ಮಾಡುವುದು ಹೀಗೆ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ದಂಡ ವಿಧಿಸಲಾಗಿದೆ.
ಇದನ್ನೂ ಓದಿ:Pariksha Pe Charcha 2023: ಪರೀಕ್ಷಾ ಪೆ ಚರ್ಚಾ ಆರಂಭ: ಇದು ನನ್ನ ಪರೀಕ್ಷೆ ಎಂದ ಪ್ರಧಾನಿ ಮೋದಿ
ಅಲ್ಲದೆ, ಕಾನೂನಿಗೆ ವಿರುದ್ಧವಾದ ಕೃತ್ಯಗಳಿಂದ ದೂರವಿರಬೇಕು ಎಂದು ಹಾಪುರ್ ಪೊಲೀಸರು ಜಿಲ್ಲೆಯ ನಿವಾಸಿಗಳಿಗೆ ಮನವಿ ಮಾಡಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ