ಬೆಂಗಳೂರು: ವಂಚಕ ಯುವರಾಜ್ ಅಲಿಯಾಸ್ ಸ್ವಾಮಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ವಂಚನೆ ಪ್ರಕರಣದಲ್ಲಿ ಯುವರಾಜ್‌ನನ್ನು ಮತ್ತೇ ಸಿಸಿಬಿ ಕಸ್ಟಡಿಗೆ ಪಡೆಯಲಾಗಿದೆ.
ಆಂಧ್ರಪ್ರದೇಶದ ಕಾಳಹಸ್ತಿ ದೇವಾಸ್ಥಾನದ ಮುಖ್ಯಸ್ಥರಾದ ಆನಂದಕಾಳ ಎಂಬುವವರಿಗೆ 1.5 ಕೋಟಿ ವಂಚಿಸಿರುವ ಪ್ರಕರಣದಲ್ಲಿ ಪೊಲೀಸರು ಯುವರಾಜ್‌ನನ್ನು ವಶಕ್ಕೆ ಪಡೆದಿದ್ದಾರೆ. ಕಾಳಹಸ್ತಿ ದೇವಾಸ್ಥಾನದ ಮುಖ್ಯಸ್ಥನನ್ನು ಬೋರ್ಡ್ ಚೇರ್ಮೆನ್ ಮಾಡೋದಾಗಿ ಹೇಳಿ 1.5 ಕೋಟಿ ಹಣ ಪಡೆದು ವಂಚನೆ ಮಾಡಿದ್ದಾನೆ ಎಂದು ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ಆನಂದಕಾಳ ದೂರು ನೀಡಿದ್ದರು.
ಆಂಧ್ರಪ್ರದೇಶದ ಕಾಳಹಸ್ತಿ ದೇವಾಸ್ಥಾನಕ್ಕೆ ಹೋಗಿದ ಸ್ವಾಮಿ, ಅಲ್ಲಿ ದೇವಾಸ್ಥಾನದ ಮುಖ್ಯಸ್ಥರಾದ ಆನಂದಕಾಳರನ್ನು ಪರಿಚಯ ಮಾಡಿಕೊಂಡಿದ್ದ. ಬೋರ್ಡ್ ಚೆರ್ಮನ್ ಮಾಡೋದಾಗಿ ಬೆಂಗಳೂರಿಗೆ ಕರೆಸಿದ್ದ ಸ್ವಾಮಿ, ಸ್ಟಾರ್ ಹೋಟೆಲ್ನಲ್ಲಿ ಡೀಲ್ ಕುದುರಿಸಿ ಹಣ ಪಡೆದಿದ್ದ ಎಂದು ದೂರು ನೀಡಿದ್ದರು. ಹೀಗಾಗಿ ದೂರಿನನ್ವಯ ಈ ಪ್ರಕರಣದ ವಿಚಾರಣೆಗೆ ಫೆಬ್ರವರಿ 2 ರವರೆಗೂ ಯುವರಾಜ್‌ನನ್ನು ಸಿಸಿಬಿ ಕಸ್ಟಡಿಗೆ ಪಡೆಯಲಾಗಿದೆ.
ವಂಚಕ ಯುವರಾಜ್ ವಿರುದ್ಧ ಮತ್ತೊಂದು FIR.. B.L.ಸಂತೋಷ್ ಹೆಸರಲ್ಲಿ 30 ಲಕ್ಷ ವಂಚನೆ