ಜೊಮ್ಯಾಟೋ, ಸ್ವಿಗ್ಗಿಯಲ್ಲಿ ತಾಂತ್ರಿಕ ದೋಷ; ಆ್ಯಪ್​ನಲ್ಲಿ ಫುಡ್ ಆರ್ಡರ್ ಮಾಡಲಾಗದೆ ಗ್ರಾಹಕರ ಪರದಾಟ

| Updated By: ಸುಷ್ಮಾ ಚಕ್ರೆ

Updated on: Apr 06, 2022 | 4:04 PM

ಇಂದು ಮಧ್ಯಾಹ್ನದಿಂದ ಟ್ವಿಟ್ಟರ್​ನಲ್ಲಿ #Zomato ಮತ್ತು #Swiggy ಹ್ಯಾಶ್​ಟ್ಯಾಗ್​ ಟ್ರೆಂಡಿಂಗ್​ನಲ್ಲಿವೆ. ಭಾರತದಾದ್ಯಂತ ಅನೇಕ ಬಳಕೆದಾರರು ಈ ಎರಡು ಆ್ಯಪ್​ಗಳಲ್ಲಿ ಆಹಾರವನ್ನು ಆರ್ಡರ್ ಮಾಡಲು ಸಾಧ್ಯವಾಗುತ್ತಿಲ್ಲ.

ಜೊಮ್ಯಾಟೋ, ಸ್ವಿಗ್ಗಿಯಲ್ಲಿ ತಾಂತ್ರಿಕ ದೋಷ; ಆ್ಯಪ್​ನಲ್ಲಿ ಫುಡ್ ಆರ್ಡರ್ ಮಾಡಲಾಗದೆ ಗ್ರಾಹಕರ ಪರದಾಟ
ಜೊಮ್ಯಾಟೋ ಡೆಲಿವರಿ
Follow us on

ನವದೆಹಲಿ: ಆಹಾರ ವಿತರಣಾ ಅಪ್ಲಿಕೇಶನ್‌ಗಳಾದ ಜೊಮ್ಯಾಟೊ (Zomato) ಮತ್ತು ಸ್ವಿಗ್ಗಿ (Swiggy) ಇಂದು ತಾಂತ್ರಿಕ ದೋಷಗಳನ್ನು ಎದುರಿಸುತ್ತಿದೆ. ಭಾರತದಾದ್ಯಂತ ಅನೇಕ ಬಳಕೆದಾರರು ಈ ಎರಡು ಆ್ಯಪ್​ಗಳಲ್ಲಿ ಆಹಾರವನ್ನು ಆರ್ಡರ್ ಮಾಡಲು ಸಾಧ್ಯವಾಗುತ್ತಿಲ್ಲ. ಜೊಮ್ಯಾಟೊ ಮತ್ತು ಸ್ವಿಗ್ಗಿ ವಿರುದ್ಧ ಕಂಪ್ಲೇಂಟ್ ಮಾಡುತ್ತಿರುವ ಗ್ರಾಹಕರು ಸಾಮಾಜಿಕ ಜಾಲತಾಣಗಳಲ್ಲಿ (Social Media) ಈ ಎರಡು ಕಂಪನಿಗಳಿಗೆ ಟ್ಯಾಗ್ ಮಾಡಿ ತಮ್ಮ ಅಸಮಾಧಾನ ಹೊರಹಾಕುತ್ತಿದ್ದಾರೆ. ವಾರದ ದಿನಗಳಲ್ಲಿ ಊಟದ ಸಮಯದಲ್ಲಿಯೇ ಈ ಎರಡು ಆ್ಯಪ್​ಗಳು ಕ್ರ್ಯಾಶ್ ಆಗಿರುವುದರಿಂದ ಬಳಕೆದಾರರಿಗೆ ತೊಂದರೆ ಉಂಟಾಗುತ್ತಿದೆ.

ಜೊಮ್ಯಾಟೋ ಮತ್ತು ಸ್ವಿಗ್ಗಿ ಈ ಎರಡೂ ಅಪ್ಲಿಕೇಶನ್‌ಗಳು ಅರ್ಧ ಗಂಟೆಯೊಳಗೆ ಸರಿಯಾಗಿವೆ. ಆದರೆ ಸಾಮಾಜಿಕ ಮಾಧ್ಯಮವು ಆರ್ಡರ್‌ಗಳನ್ನು ಇರಿಸಲು ಅಥವಾ ಮೆನುಗಳು ಮತ್ತು ಪಟ್ಟಿಗಳನ್ನು ಬ್ರೌಸ್ ಮಾಡಲು ಸಾಧ್ಯವಾಗದ ಕಾರಣದಿಂದ ತೊಂದರೆಗೊಳಗಾಗಿದ್ದಾರೆ. ಈ ಎರಡೂ ಕಂಪನಿಗಳ ಗ್ರಾಹಕ ಬೆಂಬಲ ಹ್ಯಾಂಡಲ್‌ಗಳು ಗ್ರಾಹಕರಿಗೆ ಪ್ರತಿಕ್ರಿಯಿಸಿದ್ದು, “ತಾತ್ಕಾಲಿಕ ಗ್ಲಿಚ್ ಅನ್ನು ಪರಿಹರಿಸುವಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ” ಎಂದು ಹೇಳಿದ್ದಾರೆ.

ಜೊಮ್ಯಾಟೋ ಮತ್ತು ಸ್ವಿಗ್ಗಿ ಪ್ಲಾಟ್‌ಫಾರ್ಮ್‌ಗಳು ಸುಮಾರು 10 ಬಿಲಿಯನ್ ಮೌಲ್ಯದ ಭಾರತದ ಆನ್‌ಲೈನ್ ಆಹಾರ ವಿತರಣಾ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿದೆ. ಇಂದು ಮಧ್ಯಾಹ್ನದಿಂದ ಟ್ವಿಟ್ಟರ್​ನಲ್ಲಿ #Zomato ಮತ್ತು #Swiggy ಹ್ಯಾಶ್​ಟ್ಯಾಗ್​ ಟ್ರೆಂಡಿಂಗ್​ನಲ್ಲಿವೆ.

ಕಳೆದ ತಿಂಗಳು ಜೊಮಾಟೊ ಸಂಸ್ಥಾಪಕ ಮತ್ತು ಸಿಇಒ ದೀಪಿಂದರ್ ಗೋಯಲ್ 10 ನಿಮಿಷಗಳಲ್ಲಿ ಆನ್‌ಲೈನ್ ಆಹಾರ ವಿತರಣಾ ಸೇವೆಯನ್ನು ಗ್ರಾಹಕರಿಗೆ ತಲುಪಿಸುವ ಯೋಜನೆಯನ್ನು ಪ್ರಕಟಿಸಿದ್ದರು. ಇದರಿಂದಾಗಿ ಇನ್ನು ಆನ್​ಲೈನ್​ನಲ್ಲಿ ಆಹಾರಕ್ಕಾಗಿ 30 ಅರ್ಧ ಗಂಟೆ ಕಾಯಬೇಕಾದ ಅಗತ್ಯವಿಲ್ಲ ಎಂದು ಗ್ರಾಹಕರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಖುಷಿಯನ್ನು ಹಂಚಿಕೊಂಡಿದ್ದರು. ಹಾಗೇ, ಇಷ್ಟು ವೇಗವಾಗಿ ಆಹಾರವನ್ನು ಡೆಲಿವರಿ ನೀಡುವಾಗ ಡೆಲಿವರಿ ಬಾಯ್​ಗಳ ಸುರಕ್ಷತೆಯ ಕಡೆಯೂ ಗಮನ ನೀಡಬೇಕು ಎಂದಿದ್ದರು. ಈ ಹಿನ್ನೆಲೆಯಲ್ಲಿ ಮರುದಿನ ವಿವರವಾದ ಸ್ಪಷ್ಟೀಕರಣ ನೀಡಿದ್ದ ಗೋಯಲ್, ಡೆಲಿವರಿ ಏಜೆಂಟ್‌ಗಳ ಸುರಕ್ಷತೆಯು ನಮ್ಮ ಮುಖ್ಯ ಆದ್ಯತೆಯಾಗಿದೆ ಎಂದು ಸ್ಪಷ್ಟನೆ ನೀಡಿದ್ದರು.

ಇದನ್ನೂ ಓದಿ: ಬೆಂಗಳೂರಲ್ಲಿ ಜೊಮ್ಯಾಟೋ ಡೆಲಿವರಿ ಹುಡುಗರು ಮತ್ತು ಕೇರಳ ಮೂಲದ ಹೋಟೆಲ್ ಸಿಬ್ಬಂದಿ ನಡುವೆ ರಂಪಾಟ

Crime News: ಪಾರ್ಸಲ್ ಕೊಡಲು ತಡವಾಗಿದ್ದಕ್ಕೆ ರೆಸ್ಟೋರೆಂಟ್​ ಮಾಲೀಕನಿಗೆ ಗುಂಡಿಕ್ಕಿ ಕೊಂದ ಸ್ವಿಗ್ಗಿ ಡೆಲಿವರಿ ಬಾಯ್!

Published On - 3:59 pm, Wed, 6 April 22