Crime News: ಪಾರ್ಸಲ್ ಕೊಡಲು ತಡವಾಗಿದ್ದಕ್ಕೆ ರೆಸ್ಟೋರೆಂಟ್ ಮಾಲೀಕನಿಗೆ ಗುಂಡಿಕ್ಕಿ ಕೊಂದ ಸ್ವಿಗ್ಗಿ ಡೆಲಿವರಿ ಬಾಯ್!
Murder News Today: ಆರ್ಡರ್ ನೀಡಲಾಗಿದ್ದ ಪಾರ್ಸಲ್ ಕೊಡುವುದು ತಡವಾಯಿತು ಎಂಬ ಕಾರಣಕ್ಕೆ ರೆಸ್ಟೋರೆಂಟ್ ಮಾಲೀಕನ ಹಣೆಗೆ ಗುಂಡು ಹಾರಿಸಿ ಹತ್ಯೆ ಮಾಡಿದ ಸ್ವಿಗ್ಗಿ ಡೆಲಿವರಿ ಬಾಯ್ ಪರಾರಿಯಾಗಿದ್ದಾನೆ.
ದೆಹಲಿ: ಊಟ ತಡವಾಗಿ ತಂದುಕೊಟ್ಟಿದ್ದಕ್ಕೆ, ಆರ್ಡರ್ ಸರಿಯಾಗಿ ತಂದುಕೊಡದಿದ್ದಕ್ಕೆ ಹೀಗೆ ನಾನಾ ಕಾರಣಗಳಿಂದ ಗ್ರಾಹಕರು ಆನ್ಲೈನ್ ಫುಡ್ ಡೆಲಿವರಿ (Food Delivery Boy) ಬಾಯ್ಗಳ ಮೇಲೆ ಹಲ್ಲೆ ನಡೆಸುವ ಪ್ರಕರಣಗಳು ಇತ್ತೀಚೆಗೆ ಹೆಚ್ಚು ಬೆಳಕಿಗೆ ಬರುತ್ತಿದೆ. ಆದರೆ, ದೆಹಲಿಯಲ್ಲಿ ಸ್ವಿಗ್ಗಿ (Swiggy) ಫುಡ್ ಡೆಲಿವರಿ ಏಜೆಂಟ್ ಒಬ್ಬ ಪಾರ್ಸಲ್ ನೀಡುವುದು ತಡವಾಯಿತು ಎಂಬ ಕಾರಣಕ್ಕೆ ರೆಸ್ಟೋರೆಂಟ್ ಮಾಲೀಕನಿಗೆ ಗುಂಡು ಹಾರಿಸಿ, ಹತ್ಯೆ (Murder) ಮಾಡಿದ್ದಾನೆ. ಡೆಲಿವರಿ ಬಾಯ್ ನಾಪತ್ತೆಯಾಗಿದ್ದು, ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಮಿತ್ರ ಎಂಬ ಸ್ವಂತ ರೆಸ್ಟೋರೆಂಟ್ ಹೊಂದಿದ್ದ ಸುನಿಲ್ ಅಗರ್ವಾಲ್ ಮಂಗಳವಾರ ರಾತ್ರಿ ಸ್ವಿಗ್ಗಿ ಡೆಲಿವರಿ ಬಾಯ್ನಿಂದ ಕೊಲೆಯಾಗಿದ್ದಾರೆ. ಮಿತ್ರ ರೆಸ್ಟೋರೆಂಟ್ಗೆ ಸ್ವಿಗ್ಗಿಯಿಂದ ಚಿಕನ್ ಬಿರಿಯಾನಿ ಹಾಗೂ ಪೂರಿ ಸಬ್ಜಿ ಆರ್ಡರ್ ಬಂದಿತ್ತು. ಆ ಆರ್ಡರ್ ಅನ್ನು ತೆಗೆದುಕೊಂಡು ಹೋಗಲು ಮಂಗಳವಾರ ರಾತ್ರಿ ಡೆಲಿವರಿ ಬಾಯ್ ಬಂದಿದ್ದ. ಆತ ಬರುವ ವೇಳೆಗೆ ಬಿರಿಯಾನಿ ರೆಡಿಯಾಗಿತ್ತು. ಆದರೆ, ಪೂರಿ, ಸಬ್ಜಿ ಪಾರ್ಸಲ್ ರೆಡಿ ಮಾಡಲು ಇನ್ನೂ ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಹೋಟೆಲ್ನವರು ಹೇಳಿದ್ದರು. ಇದೇ ವಿಷಯಕ್ಕೆ ಡೆಲಿವರಿ ಬಾಯ್ ಮತ್ತು ರೆಸ್ಟೋರೆಂಟ್ ಸಿಬ್ಬಂದಿ ನಡುವೆ ಜಗಳವಾಗಿತ್ತು.
ಈ ವೇಳೆ ರೆಸ್ಟೋರೆಂಟ್ ಸಿಬ್ಬಂದಿಗೆ ಸ್ವಿಗ್ಗಿ ಡೆಲಿವರಿ ಬಾಯ್ ಮನಬಂದಂತೆ ಬೈದಿದ್ದ. ಇದರಿಂದ ಕೋಪಗೊಂಡ ಆ ಸಿಬ್ಬಂದಿ ರೆಸ್ಟೋರೆಂಟ್ ಮಾಲೀಕರಿಗೆ ವಿಷಯ ತಿಳಿಸಿದ್ದ. ಜಗಳ ನಿಲ್ಲಿಸಲು ಅಲ್ಲಿಗೆ ಬಂದ ಸುನಿಲ್ ಹಣೆಗೆ ಈ ವೇಳೆ ಸ್ವಿಗ್ಗಿ ಡೆಲಿವರಿ ಏಜೆಂಟ್ ಗುಂಡು ಹಾರಿಸಿದ್ದಾನೆ. ತಕ್ಷಣ ರೆಸ್ಟೋರೆಂಟ್ ಸಿಬ್ಬಂದಿ ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ, ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದರು. ಡೆಲಿವರಿ ಬಾಯ್ ನಾಪತ್ತೆಯಾಗಿದ್ದು, ಆತನನ್ನು ಹಿಡಿಯಲು ಮೂರು ಪೊಲೀಸರ ತಂಡ ರಚಿಸಲಾಗಿದೆ.
ಇದನ್ನೂ ಓದಿ: Murder: ಗೆಳೆಯನನ್ನೇ ಬರ್ಬರವಾಗಿ ಕೊಂದು, ರೂಮ್ ಕ್ಲೀನ್ ಮಾಡಿ ಮಲಗಿದ ಕೊಲೆಗಾರ
Crime News: ಅಕ್ರಮ ಸಂಬಂಧದ ಶಂಕೆ; ಹೆಂಡತಿಯ ಗುಪ್ತಾಂಗಕ್ಕೆ ಹೊಲಿಗೆ ಹಾಕಿ ಮುಚ್ಚಿದ ಪತಿರಾಯ!
(Crime News: Swiggy Food Delivery Boy Murders Restaurant Owner Near Delhi Over Delay In Order)