ರಿಚ್​ಮಂಡ್ ಟೌನ್​ನಲ್ಲಿ ಹಾಡಹಗಲೇ ಚಾಕು ತೋರಿಸಿ ದರೋಡೆಗೆ ಯತ್ನ: ದುಷ್ಕರ್ಮಿ ಸ್ಥಳೀಯರ ಕಣ್ಣೆದುರೇ ಪರಾರಿ

ಇಡೀ ಘಟನೆಯ ದೃಶ್ಯಾವಳಿ ಸ್ಥಳೀಯರ ಮೊಬೈಲ್​ನಲ್ಲಿ ಸೆರೆಯಾಗಿದೆ. ಈಕುರಿತು ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ರಿಚ್​ಮಂಡ್ ಟೌನ್​ನಲ್ಲಿ ಹಾಡಹಗಲೇ ಚಾಕು ತೋರಿಸಿ ದರೋಡೆಗೆ ಯತ್ನ: ದುಷ್ಕರ್ಮಿ ಸ್ಥಳೀಯರ ಕಣ್ಣೆದುರೇ ಪರಾರಿ
ವಿಡಿಯೋದ ದೃಶ್ಯ
Follow us
TV9 Web
| Updated By: guruganesh bhat

Updated on:Sep 01, 2021 | 6:36 PM

ಬೆಂಗಳೂರು: ನಗರದ ರಿಚ್ಮಂಡ್ ಟೌನ್​ನಲ್ಲಿ ಅಪರಿಚಿತನೋರ್ವ ಹಾಡಹಗಲೇ ಚಾಕು ತೋರಿಸಿ ಸುಲಿಗೆಗೆ ಪ್ರಯತ್ನಿಸಿದ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆಗಿದೆ. ಕ್ಯಾಬ್ ಒಂದಕ್ಕೆ ನುಗ್ಗಿ ಚಾಲಕನಿಗೆ ಚಾಕು ತೋರಿಸಿ ಯುವಕನೋರ್ವ ಸುಲಿಗೆ ಮಾಡಲು ಯತ್ನಿಸಿದ್ದಾನೆ. ಚಾಕು ಕಂಡು ಕ್ಯಾಬ್ ಚಾಲಕ ಗಾಬರಿಯಿಂದ ಕಿರುಚಾಡಿದ್ದಾನೆ. ಇದೇ ವೇಳೆ ಡ್ರೈವರ್​ಗೆ ಚಾಕುವಿನಿಂದ ಇರಿಯಲು ದುಷ್ಕರ್ಮಿ ಯತ್ನಿಸಿದ್ದಾನೆ. ಈ ವೇಳೆ ಹತ್ತಿರದಲ್ಲೇ ಇದ್ದ ಸ್ಥಳೀಯರು ದರೋಡೆಕೋರನನ್ನು ಹಿಡಿದು ಥಳಿಸಿದ್ದಾರೆ. ಆದರೆ ಹಿಡಿಯಲು ಯತ್ನಿಸಿದ ಸ್ಥಳೀಯರಿಗೂ ದುಷ್ಕರ್ಮಿ ಚಾಕು ತೋರಿಸಿ ಧಮ್ಕಿ ಹಾಕಿದ್ದಾನೆ. ಹಿಡಿಯಲು ಯತ್ನಿಸಿದವರಿಂದ ತಪ್ಪಿಸಿಕೊಳ್ಳಲು ನಡುರಸ್ತೆಯಲ್ಲೇ ಅಡ್ಡಾದಿಡ್ಡಿ ಓಡಿದ್ದಾನೆ. ಕೊನೆಗೂ ಸ್ಥಳೀಯರಿಂದ ತಪ್ಪಿಸಿಕೊಂಡು ಓಡಿ ಪಾರಾಗಿದ್ದಾನೆ. ಇಡೀ ಘಟನೆಯ ದೃಶ್ಯಾವಳಿ ಸ್ಥಳೀಯರ ಮೊಬೈಲ್​ನಲ್ಲಿ ಸೆರೆಯಾಗಿದೆ. ಈಕುರಿತು ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯನಗರ ಠಾಣಾ ವ್ಯಾಪ್ತಿಯಲ್ಲಿ ಅಪರಾಧ ಚಟುವಟಿಕೆ ಹೆಚ್ಚಳ; ಸರಸ್ವತಿ ನಗರಕ್ಕೆ ಹೊಸ ಪೊಲೀಸ್ ಠಾಣೆ ಮಂಜೂರು ಬೆಂಗಳೂರು ನಗರದ ಪಶ್ಚಿಮ ವಿಭಾಗ ವಿಜಯನಗರ ಠಾಣಾ ವ್ಯಾಪ್ತಿಯಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿರುವ ಕಾರಣ ಗೋವಿಂದರಾಜ ನಗರದ ಸರಸ್ವತಿ ನಗರದಲ್ಲಿ ನೂತನ ಪೊಲೀಸ್ ಠಾಣೆ ಸ್ಥಾಪಿಸಲು ಸರ್ಕಾರ ಅನುಮತಿ ನೀಡಿ ಆದೇಶ ಪ್ರಕಟಿಸಿದೆ. ಅಪರಾಧ ಪ್ರಕರಣಗಳಾದ ಮೊಬೈಲ್ ಅಪಹರಣ, ಸರಗಳ್ಳತನ, ವಾಹನ ಕಳವು ಪ್ರಕರಣಗಳು ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚುತ್ತಿವೆ. ವಿಜಯನಗರದಲ್ಲಿ A ಪಟ್ಟಿ ರೌಡಿಶೀಟರ್ 42 ಜನ, ಬಿ ಪಟ್ಟಿ ರೌಡಿಶೀಟರ್ 51, ಒಟ್ಟು 93 ರೌಡಿಶೀಟರ್​ಗಳಿದ್ದಾರೆ. ಹಾಗಾಗಿ ವಿಜಯನಗರ ಠಾಣೆಯನ್ನ ವಿಭಜಿಸಿ ನೂತನ ಪೊಲೀಸ್ ಠಾಣೆ ತೆರೆಯಲು ಮನವಿ ಮಾಡಲಾಗಿತ್ತು. ಮನವಿಯನ್ನು ಪುರಸ್ಕರಿಸಿದ ಸರ್ಕಾರ ಅಪರಾಧ ಪ್ರಕರಣಗಳನ್ನು ತಡೆಯುವ ಕಾರಣದಿಂದ ಹೊಸ ಪೊಲೀಸ್ ಠಾಣೆ ತೆರೆಯಲು ಆದೇಶ ನೀಡಿದೆ.

ಹೆಬ್ಬಗೋಡಿ ಪೊಲೀಸ್ ಠಾಣೆಯ ಗೋಡೆಯಲ್ಲಿ ಬಿರುಕು ಮೆಟ್ರೋ ಕಾಮಗಾರಿಯ ಕಾರಣದಿಂದ ಬೆಂಗಳೂರಿನ ಹೆಬ್ಬಗೋಡಿ ಪೊಲೀಸ್ ಠಾಣೆಯ ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಕಾಮಗಾರಿ ನಡೆಸುತ್ತಿರುವ ಬಿಎಂಆರ್​ಸಿಎಲ್ ಈಗಾಗಲೇ ಪೊಲೀಸ್ ಠಾಣೆಯನ್ನು ತೆರವುಗೊಳಿಸುವಂತೆ ಸೂಚಿಸಿದೆ. ಆದರೆ ಪೊಲೀಸ್ ಠಾಣೆಯ ಬಳಿಯ ಕಾಮಗಾರಿಯನ್ನು ಮುಂಚಿತವಾಗಿ ಮುಗಿಸಿಕೊಡಲು ಪೊಲೀಸ್ ಸಿಬ್ಬಂದಿ ಮನವಿ ಮಾಡಿದ್ದಾರೆ. ಮೆಟ್ರೋ ಪಿಲ್ಲರ್ ಮಧ್ಯೆಯೇ ಹೆಬ್ಬಗೋಡಿ ಉಪ ವಿಭಾಗ ಪೊಲೀಸ್ ಠಾಣೆಯಿದ್ದು, ಶಬ್ದ ಮಾಲಿನ್ಯದ ಮಧ್ಯೆ ಕೆಲಸ ಮಾಡಲು ಪೊಲೀಸರಿಗೆ ಕಿರಿಕಿರಿಯಾಗುತ್ತಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ:

Afghanistan Crisis: ಅಫ್ಘಾನಿಸ್ತಾನದಲ್ಲಿ ಇಂದು ಅಥವಾ ನಾಳೆ ತಾಲಿಬಾನ್ ಸರ್ಕಾರ ರಚನೆ ಸಾಧ್ಯತೆ

ವರ್ಷಪೂರ್ತಿ ಆಗುವ ಮಾಲಿನ್ಯ ಗಣೇಶ ಹಬ್ಬದಂದೇ ನೆನಪಾಗುವುದೇಕೆ? ಬೆಂಗಳೂರು ಮಹಾನಗರ ಗಣೇಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಶ್ನೆ

(Bengaluru Richmond Town a man shows knife and try to rob cab driver video viral)

Published On - 6:32 pm, Wed, 1 September 21

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ