ಐಟಿ ಪ್ರಾಜೆಕ್ಟ್​ ಕೊಡಿಸುತ್ತೇನೆಂದು 50 ಲಕ್ಷಕ್ಕೂ ಹೆಚ್ಚು ಹಣ ಪಡೆದು ಅಕ್ಕ ತಮ್ಮನಿಂದ ಮೋಸ; ತಮ್ಮನ ಬಂಧನ, ಅಕ್ಕನಿಗಾಗಿ ತಲಾಶ್

ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಗುಂಟೆ ಪೊಲೀಸರು ಆರೋಪಿ ರೂಪೇಶ್‌ ಎಂಬಾತನನ್ನು ವಶಕ್ಕೆ ಪಡೆದಿದ್ದು, ಆತನ ಸಹೋದರಿ ಕಾವ್ಯ ಎಂಬಾಕೆ ತಲೆ ತಪ್ಪಿಸಿಕೊಂಡು ಪರಾರಿಯಾಗಿದ್ದಾಳೆ.

ಐಟಿ ಪ್ರಾಜೆಕ್ಟ್​ ಕೊಡಿಸುತ್ತೇನೆಂದು 50 ಲಕ್ಷಕ್ಕೂ ಹೆಚ್ಚು ಹಣ ಪಡೆದು ಅಕ್ಕ ತಮ್ಮನಿಂದ ಮೋಸ; ತಮ್ಮನ ಬಂಧನ, ಅಕ್ಕನಿಗಾಗಿ ತಲಾಶ್
ಆರೋಪಿತ ಅಕ್ಕ ತಮ್ಮ
Follow us
TV9 Web
| Updated By: guruganesh bhat

Updated on:Sep 01, 2021 | 8:05 PM

ನೆಲಮಂಗಲ:  ಲಾಕ್‌ಡೌನ್‌ನಲ್ಲಿ ನೆಲಕಚ್ಚಿದ ಐಟಿ ಉದ್ಯಮ ಚೇತರಿಸಿಕೊಳ್ಳಲು ಅಮೇರಿಕಾ ಮೂಲದ ಪ್ರಾಜೆಕ್ಟ್‌ಗಳನ್ನು ಕೊಡಿಸುತ್ತೇವೆ ಎಂದು ನಂಬಿಸಿದ ಆರೋಪದಡಿ ಅಕ್ಕ ತಮ್ಮನ ಜೋಡಿಯೊಂದರ ಮೇಲೆ ಉದ್ಯಮಿಗಳಿಗೆ ಲಕ್ಷಾಂತರ ರೂಪಾಯಿ ಹಣ ವಂಚಿಸಿದ ಆರೋಪ ಕೇಳಿಬಂದಿದೆ. ಬೆಂಗಳೂರಿನ ಬಾಗಲಗುಂಟೆ MEI ಬಡಾವಣೆ ನಿವಾಸಿಗಳಾದ ರೂಪೇಶ್ ಮತ್ತು ಕಾವ್ಯಾ ಎಂಬ ಅಕ್ಕ ತಮ್ಮಂದಿರ ಮೇಲೆಯೇ ಈ ಆರೋಪ ಕೇಳಿಬಂದಿರುವುದು. ಲಾಕ್​ಡೌನ್ ವೇಳೆ ನೆಲ ಕಚ್ಚಿರುವ ಉದ್ಯಮಿಗಳನ್ನು ಹುಡುಕಿ ಅವರಿಗೆ ಅಮೇರಿಕಾ ದೇಶದ ಹೊಸ ಹೊಸ ಪ್ರಾಜೆಕ್ಟ್‌ಗಳನ್ನು ಕೊಡಿಸುವುದಾಗಿ ನಂಬಿಸಿ ವಂ‍ಚಿಸಿದ್ದಾರೆ ಎಂದು ದುರು ದಾಖಲಾಗಿದೆ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಗುಂಟೆ ಪೊಲೀಸರು ಆರೋಪಿ ರೂಪೇಶ್‌ ಎಂಬಾತನನ್ನು ವಶಕ್ಕೆ ಪಡೆದಿದ್ದು, ಆತನ ಸಹೋದರಿ ಕಾವ್ಯ ಎಂಬಾಕೆ ತಲೆ ತಪ್ಪಿಸಿಕೊಂಡು ಪರಾರಿಯಾಗಿದ್ದಾಳೆ.

ಆರ್‌ಕೆ ಎಂಟರ್‌ಪ್ರೈಸಸ್ ಹಾಗೂ ಐಟಿ ಟ್ರೀ ಕಂಪನಿ‌ ಹೆಸರಿನಲ್ಲಿ ಉದ್ಯಮಿಗಳನ್ನು ಸೆಳೆಯುತ್ತಿದ್ದ ಈ ಆರೋಪಿಗಳು ಯು‌ಎಸ್‌ಎ‌ ದಿಂದ ಗ್ರೂಪ್ ಆನ್ ಎಂಬ ಕಂಪನಿಯು ಕಾಮನ್ ಸರ್ವಿಸ್ ಪ್ರಾಜೆಕ್ಟ್ ಕೊಡಿಸುವುದಾಗಿ ತಿಳಿಸಿದ್ದರು. ಅಲ್ಲದೇ ಕಂಪನಿಗಳು ನಿಮಗೆ ಪ್ರಾಜೆಕ್ಟ್ ಕೊಡಬೇಕೆಂದರೆ ಮುಂಗಡವಾಗಿ ಹಣ ನೀಡಬೇಕು, ಹಾಗೂ ನಿಮ್ಮ ಕಚೇರಿಯನ್ನು ಸಿದ್ದಪಡಿಸಬೇಕು ಎನ್ನುತ್ತಿದ್ದರು. ಅದರಂತೆ ಉದ್ಯಮಿಗಳು ಕಚೇರಿಗಳನ್ನು ಸಿದ್ದಪಡಿಸಿಕೊಳ್ಳುವುದಷ್ಟೇ ಅಲ್ಲದೇ ಒಂದಷ್ಟು ಜನ‌ ನೌಕರರನನ್ನು ಸಹ ನೇಮಿಸಿಕೊಂಡಿದ್ದಾರೆ.

ಉದ್ಯಮಿ ಗಂಗಾಧರ್, ಹೈದರಬಾದ್ ಮೂಲದ ರಣಬೀರ್ ಸಿಂಗ್ ಸೇರಿದಂತೆ ಐದಾರು ಉದ್ಯಮಿಗಳಿಂದ ಹಂತ ಹಂತವಾಗಿ ಸುಮಾರು 50 ಲಕ್ಷಕ್ಕೂ ಹೆಚ್ಚು ಹಣವನ್ನ  ಪಡೆದು ಆರೋಪಿಗಳು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ ತಮ್ಮ ಮೇಲೆ ವಂಚನೆಯ ಆರೋಪ ಕೇಳಿಬಂದ ತಕ್ಷಣ ಅಲ್ಲಿಂದ ತಮ್ಮ ಕಚೇರಿಯನ್ನು ರಾತ್ರೋರಾತ್ರಿ ಸ್ಥಳಾಂತರಿಸುತ್ತಿದ್ದರು ಎಂದು ಸಹ ಹೇಳಲಾಗಿದೆ. ಸದ್ಯ ಇವರ ಮೇಲೆ 8ಕ್ಕೂ ಹೆಚ್ಚು ಉದ್ಯಮಿಗಳಿಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: 

ವಿಜಯನಗರ ಠಾಣಾ ವ್ಯಾಪ್ತಿಯಲ್ಲಿ ಅಪರಾಧ ಚಟುವಟಿಕೆ ಹೆಚ್ಚಳ; ಸರಸ್ವತಿ ನಗರಕ್ಕೆ ಹೊಸ ಪೊಲೀಸ್ ಠಾಣೆ ಮಂಜೂರು

ಬೆಂಗಳೂರು ಮೆಟ್ರೋ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣನೆ: ಎಂಡಿಗೆ ಸರ್ಕಾರದಿಂದ ನೋಟಿಸ್

(Bengaluru Nelamangala Sister and brother accused on IT Industry fraud more than 50 lakh in Lockdown)

Published On - 8:02 pm, Wed, 1 September 21