ರಾಜ್ಯಸಭೆಯಲ್ಲಿ ಗಂಜಲ, ಯೋಗಾಸನಗಳ ಪ್ರಾಮುಖ್ಯತೆ ಬಗ್ಗೆ ಮಾತನಾಡಿದ್ದ ಆಸ್ಕರ್ ಫರ್ನಾಂಡಿಸ್​ಗೆ ವಾಜಪೇಯಿ ಆರೋಗ್ಯದ ಬಗ್ಗೆಯೂ ಕಾಳಜಿಯಿತ್ತು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 13, 2021 | 9:47 PM

ಎರಡು ಪ್ರತ್ಯೇಕ ಪಕ್ಷಗಳಲ್ಲಿರುವವರು ಪರಸ್ಪರರನ್ನು ಪ್ರೀತಿಸುವುದಿರಲಿ, ಗೌರವದಿಂದ ಮಾತನಾಡುವುದೂ ಅಪರೂಪದಲ್ಲಿ ಅಪರೂಪವಾಗುತ್ತಿದೆ. ಆದರೆ ಇಂದು ನಿಧನರಾದ ಕಾಂಗ್ರೆಸ್​ ನಾಯಕ ಆಸ್ಕರ್ ಫರ್ನಾಂಡಿಸ್ ಅವರ ವ್ಯಕ್ತಿತ್ವ ಇಂಥ ನ್ಯೂನತೆಗಳಿಂದ ಮುಕ್ತವಾಗಿತ್ತು.

ರಾಜ್ಯಸಭೆಯಲ್ಲಿ ಗಂಜಲ, ಯೋಗಾಸನಗಳ ಪ್ರಾಮುಖ್ಯತೆ ಬಗ್ಗೆ ಮಾತನಾಡಿದ್ದ ಆಸ್ಕರ್ ಫರ್ನಾಂಡಿಸ್​ಗೆ ವಾಜಪೇಯಿ ಆರೋಗ್ಯದ ಬಗ್ಗೆಯೂ ಕಾಳಜಿಯಿತ್ತು
ರಾಜ್ಯಸಭೆಯಲ್ಲಿ ಆಸ್ಕರ್ ಫರ್ನಾಂಡಿಸ್
Follow us on

ಗಂಜಲ, ಯೋಗಾಸನಗಳನ್ನು ಒಪ್ಪುವವರನ್ನು ಬಲಪಂಥೀಯರು ಎಂದು ಸಾರಾಸಗಟಾಗಿ ವ್ಯಾಖ್ಯಾನಿಸುವುದು ಈಗಿನ ರೂಢಿ. ರಾಜಕಾರಿಣಿಗಳಂತೂ ಈ ಎರಡೂ ಪದಗಳನ್ನು ಬಳಸುವಾಗ ಎಚ್ಚರಿಕೆ ವಹಿಸುತ್ತಾರೆ. ಇನ್ನು ಎರಡು ಪ್ರತ್ಯೇಕ ಪಕ್ಷಗಳಲ್ಲಿರುವವರು ಪರಸ್ಪರರನ್ನು ಪ್ರೀತಿಸುವುದಿರಲಿ, ಗೌರವದಿಂದ ಮಾತನಾಡುವುದೂ ಅಪರೂಪದಲ್ಲಿ ಅಪರೂಪವಾಗುತ್ತಿದೆ. ಆದರೆ ಇಂದು ನಿಧನರಾದ ಕಾಂಗ್ರೆಸ್​ ನಾಯಕ ಆಸ್ಕರ್ ಫರ್ನಾಂಡಿಸ್ ಅವರ ವ್ಯಕ್ತಿತ್ವ ಇಂಥ ನ್ಯೂನತೆಗಳಿಂದ ಮುಕ್ತವಾಗಿತ್ತು. ಹೀಗಾಗಿಯೇ ಆಸ್ಕರ್ ಅವರನ್ನು ಅವರ ರಾಜಕೀಯ ವಿರೋಧಿಗಳೂ ಅಜಾತಶತ್ರು ಎಂದು ಗೌರವಿಸುತ್ತಿದ್ದರು.

ಕಳೆದ ವರ್ಷ ಮಾರ್ಚ್​ 18ರಂದು ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರ ಹೋಮಿಯೋಪತಿ ಹಾಗೂ ಭಾರತೀಯ ವೈದ್ಯ ಪದ್ಧತಿಗಳ ಅನುಷ್ಠಾನಕ್ಕಾಗಿ ರಾಷ್ಟ್ರೀಯ ಆಯೋಗ ಸ್ಥಾಪನೆ ಕುರಿತು ಎರಡು ಮಸೂದೆಗಳನ್ನು ಮಂಡಿಸಿತ್ತು. ಅಂದು ಆಸ್ಕರ್ ಫರ್ನಾಂಡಿಸ್ ಮಾಡಿದ್ದ ಭಾಷಣ ಅವರ ವ್ಯಕ್ತಿತ್ವ ಹೇಗಿತ್ತು ಎಂಬುದಕ್ಕೆ ಉದಾಹರಣೆಯಾಗುತ್ತದೆ. ಗೋಮೂತ್ರದ ಲಾಭಗಳ ಬಗ್ಗೆ ಮಾತನಾಡಿದ್ದ ಅವರು, ವ್ಯಕ್ತಿಯೊಬ್ಬ ಗಂಜಲ ಬಳಕೆಯಿಂದ ಕ್ಯಾನ್ಸರ್ ಕಾಯಿಲೆಯಿಂದ ಮುಕ್ತವಾದ ನೆನಪು ಹಂಚಿಕೊಂಡಿದ್ದರು.

ಆಸ್ಕರ್ ಮಾತಿಗೆ ನಿಲ್ಲುವ ಮೊದಲು ಮಾತನಾಡಿದ್ದ ಕೆಲ ಬಿಜೆಪಿ ನಾಯಕರು ಗೋಮೂತ್ರದ ಪ್ರಾಮುಖ್ಯತೆ ಬಗ್ಗೆ ಉದಾಹರಣೆಗಳನ್ನು ಹೇಳಿದ್ದರು. ಆಗ ಕಾಂಗ್ರೆಸ್​ ಸದಸ್ಯರು ಬಿಜೆಪಿ ಸದಸ್ಯರ ವಿರುದ್ಧ ಹರಿಹಾಯ್ದಿದ್ದರು. ಆದರೆ ಸ್ವತಃ ಕಾಂಗ್ರೆಸ್ ನಾಯಕನೇ ಎದ್ದು ನಿಂತು ಗೋಮೂತ್ರದ ಬಗ್ಗೆ ಮಾತು ಆರಂಭಿಸಿದಾಗ ಹೇಗೆ ಪ್ರತಿಕ್ರಿಯಿಸಬೇಕು ಎಂಬ ಬಗ್ಗೆ ಕಾಂಗ್ರೆಸ್ ಸದಸ್ಯರಿಗೆ ಕೆಲಕ್ಷಣ ಗೊಂದಲವಾಯಿತು.

ಆಸ್ಕರ್ ಫರ್ನಾಂಡಿಸ್ ಅವರ ಭಾಷಣದ ಕನ್ನಡ ಅನುವಾದ ಇಲ್ಲಿದೆ…
ನಾನು ಗೋಮೂತ್ರದ ಬಗ್ಗೆ ಏನೇ ಮಾತಾಡಿದರು ನನ್ನ ಗೆಳೆಯ ಜೈರಾಮ್ ರಮೇಶ್​ ಕಾಲೆಳೆಯುತ್ತಾರೆ. ಮೀರತ್ ಸಮೀಪದ ಆಶ್ರಮವೊಂದಕ್ಕೆ ಹೋಗಿದ್ದೆ. ಅಲ್ಲಿ ಭೇಟಿಯಾದ ವ್ಯಕ್ತಿಯೊಬ್ಬ ಗೋಮೂತ್ರ ಸೇವನೆಯಿಂದ ತನ್ನ ಕ್ಯಾನ್ಸರ್ ಗುಣವಾಯಿತು ಎಂದು ಹೇಳಿದ್ದರು. ನನಗೆ ಮೊಣಕಾಲು ನೋವು ತೀವ್ರವಾಗಿ ಬಾಧಿಸುತ್ತಿತ್ತು. ವೈದ್ಯರು ಕೀಲು ಬದಲಿಸುವ ಶಸ್ತ್ರಚಿಕಿತ್ಸೆಗೆ ಸಲಹೆ ಮಾಡಿದ್ದರು. ಆದರೆ ನಾನು ಒಪ್ಪಲಿಲ್ಲ. ಯೋಗದ ಮೊರೆ ಹೋದೆ. ನಿಯಮಿತವಾಗಿ ವಜ್ರಾಸನವನ್ನು ಅಭ್ಯಾಸ ಮಾಡುತ್ತಾ ಆರೋಗ್ಯ ಸುಧಾರಿಸಿಕೊಂಡೆ. ಈಗ ನನಗೆ ಓಡಾಡಲು ಯಾವುದೇ ಸಮಸ್ಯೆಯಿಲ್ಲ.

ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರು ಮೊಣಕಾಲು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ವಿಷಯ ನನಗೆ ತಡವಾಗಿ ತಿಳಿಯಿತು. ಮೊದಲೇ ಗೊತ್ತಾಗಿದ್ದರೆ ಅವರ ಬಳಿಗೆ ಹೋಗಿ ವಜ್ರಾಸನ ಮಾಡಿ ಎಂದು ಮನವೊಲಿಸುತ್ತಿದ್ದೆ. ನಾನೇ ಹೇಳಿಕೊಡುತ್ತಿದ್ದೆ. ಅವರ ಸಮಸ್ಯೆಯೂ ಪರಿಹಾರವಾಗುತ್ತಿತ್ತೋನೋ.

ಅಮೆರಿಕದಲ್ಲಿ 104 ವರ್ಷದ ವ್ಯಕ್ತಿಯೊಬ್ಬನನ್ನು ಭೇಟಿಯಾಗಿದ್ದೆ. ಅವರು ಯುವಕನಂತೆ ಚಟುವಟಿಕೆಯಿಂದ ಓಡಾಡುತ್ತಿದ್ದರು. ಯೋಗ ಪದ್ಧತಿ ನಮ್ಮ ದೇಶದ ದೊಡ್ಡ ಆಸ್ತಿ. ನೀವು ಯೋಗಾಭ್ಯಾಸ ಆರಂಭಿಸಿದರೆ ಆರೋಗ್ಯದ ವಿಚಾರದಲ್ಲಿ ನೀವು ಮಾಡುವ ವೆಚ್ಚ ಅರ್ಧಕ್ಕರ್ಧ ಕಡಿಮೆಯಾಗುತ್ತದೆ. ಯೋಗ ಎನ್ನುವುದು ಒಂದು ಜೀವನ ಪದ್ಧತಿ. ವೈದ್ಯರ ಬಳಿಗೆ ಹೋಗುವ ಮೊದಲ ಮನೆ ವೈದ್ಯ ಮಾಡಿನೋಡಬೇಕು. ಅನೇಕ ಸಂದರ್ಭಗಳಲ್ಲಿ ನಮ್ಮ ಭಾರತೀಯ ವೈದ್ಯಕೀಯ ಪರಂಪರೆಯು ಸಾಕಷ್ಟು ಪರಿಹಾರಗಳನ್ನು ಒದಗಿಸುತ್ತದೆ.

ಹೋಮಿಯೋಪತಿ ಮತ್ತು ಭಾರತೀಯ ವೈದ್ಯಪದ್ಧತಿಯನ್ನು ಪ್ರೋತ್ಸಾಹಿಸುವ ಪ್ರಯತ್ನಗಳಿಗೆ ನನ್ನ ಬೆಂಬಲವಿದೆ. ಆದರೆ ಯೋಗ ಮತ್ತು ನಿಸರ್ಗ ಚಿಕಿತ್ಸೆಯನ್ನು ಸರ್ಕಾರ ನಿರ್ಲಕ್ಷಿಸುತ್ತಿರುವುದಕ್ಕೆ ನನ್ನ ವಿರೋಧವಿದೆ. ಯೋಗ ಮತ್ತು ನಿಸರ್ಗ ಚಿಕಿತ್ಸೆಗೂ ಪ್ರೋತ್ಸಾಹ ಸಿಗುವಂತೆ ಈ ಮಸೂದೆಗಳಲ್ಲಿ ಬದಲಾವಣೆ ಮಾಡಬೇಕು. ಅಥವಾ ಅವರೆಡೂ ಒಳಗೊಳ್ಳುವಂತೆ ಪ್ರತ್ಯೇಕ ಮಸೂದೆ ಮಂಡಿಸಬೇಕು. ಇದು ನನ್ನ ಆಗ್ರಹ.

(Congress leader Oscar Fernandes Is in Favor of Cow Urine Yogasana Naturopathy)

ಇದನ್ನೂ ಓದಿ: Obitury: ಕಾಂಗ್ರೆಸ್​ ಪಕ್ಷದ ಆಪದ್ಬಾಂಧವ, ಸೋನಿಯಾ ಗಾಂಧಿಯ ಆಪ್ತ ಆಸ್ಕರ್ ಫರ್ನಾಂಡಿಸ್

ಇದನ್ನೂ ಓದಿ: ಪೋತು ಬಲೆ ಆಸ್ಕರಣ್ಣ, ಕಾಲನ ಗರ್ಭ ಸೇರಿದ ಆಸ್ಕರ್‌ ಫರ್ನಾಂಡಿಸ್: ಪುರುಷೋತ್ತಮ ಬಿಳಿಮಲೆ ಬರಹ

Published On - 8:24 pm, Mon, 13 September 21