ಸೈಬರ್ ಅಪರಾಧ ತಡೆಗೆ ಸೈಬರ್ ಪೊಲೀಸರಿಗೆ ಆಧುನಿಕ ವಿಶೇಷ ಕ್ರಮಗಳು ಬೇಕಾಗಿವೆ: ಡಾ. ರವಿಕಿರಣ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 09, 2022 | 11:23 AM

ಸೈಬರ್ ಶಬ್ದ ಎಲ್ಲರನ್ನು ಈಗಾಗಲೇ ಆವರಿಸಿದೆ. ಅದರಲ್ಲೂ ನಗದುರಹಿತ ವಹಿವಾಟು ಪ್ರಾರಂಭವಾದ ನಂತರ ಈ ಶಬ್ದದ ಅವಶ್ಯಕತೆ ಹಾಗೂ ಅದರ ಪೊಲೀಸರ ಅವಶ್ಯಕತೆ ಹೆಚ್ಚಾಗಿದೆ.

ಸೈಬರ್ ಅಪರಾಧ ತಡೆಗೆ ಸೈಬರ್ ಪೊಲೀಸರಿಗೆ ಆಧುನಿಕ  ವಿಶೇಷ ಕ್ರಮಗಳು ಬೇಕಾಗಿವೆ: ಡಾ. ರವಿಕಿರಣ್
Dr Ravikiran Patwardhan
Follow us on

ಸೈಬರ್ ಶಬ್ದ ಎಲ್ಲರನ್ನು ಈಗಾಗಲೇ ಆವರಿಸಿದೆ. ಅದರಲ್ಲೂ ನಗದುರಹಿತ ವಹಿವಾಟು ಪ್ರಾರಂಭವಾದ ನಂತರ ಈ ಶಬ್ದದ ಅವಶ್ಯಕತೆ ಹಾಗೂ ಅದರ ಪೊಲೀಸರ ಅವಶ್ಯಕತೆ ಹೆಚ್ಚಾಗಿದೆ. ದಯಮಾಡಿ ಸರ್ಕಾರದ ನಿರ್ದೇಶನದಂತೆ, RBI ನಿರ್ದೇಶನಂತೆ ಯಾವುದೇ OTP ಯನ್ನು, CVVಯನ್ನು ,ಅಧಿಕೃತ ಕಾರ್ಡುಗಳ ವಿವರವನ್ನು ಇತರರೊಂದಿಗೆ ಹಂಚಿಕೊಳ್ಳುವುದು ಬೇಡ.

ಈ ರೀತಿಯ ಅಪರಾಧದ ತಡೆಗೆ ವಿಜ್ಞಾಪನೆಯನ್ನು ಮಾನ್ಯ ಶ್ರೀಅಮಿತಾಭ್ ಬಚ್ಚನ್ ಅವರು ಮಾಡಿ ಮಾಡಿ ದಣಿದಿದ್ದಾರೆ. ಆದರೆ ಆಘಾತಕರ ಸಂಗತಿ ಎಂದರೆ ಈ ತಪ್ಪನ್ನು ಮಾಡುತ್ತಿದ್ದವರು ಅತ್ಯಂತ ಗರಿಷ್ಠ ಶಿಕ್ಷಣವನ್ನು ಹೊಂದಿದವರು! ಎನ್ನುವುದು ವಿಶೇಷ ಬೇಸರದ ಸಂಗತಿಯಾಗಿದೆ.

“ಈ ರೀತಿಯ ಅಪರಾಧಿಗಳನ್ನು ಬೇಟೆಯಾಡಲು ಒಂದಿಷ್ಟು ವಿಶೇಷ ಕ್ರಮಗಳು ಹಾಗೂ ವಿಶೇಷ ಸವಲತ್ತುಗಳು ಈ ಸೈಬರ್ ಕ್ರೈಂ ಪೊಲೀಸರಿಗೆ ಬೇಕು.”
1 ಮುಖ್ಯವಾಗಿ ಸೈಬರ್ ಠಾಣೆಗಳನ್ನು ಪ್ರತಿ ತಾಲೂಕಿಗೆ ಒಂದರಂತೆ ಮಾಡಬೇಕು.

2 ಸೈಬರ್ ಅಪರಾಧ ತಡೆಗೆ ಸೈಬರ್ ಪೊಲೀಸರ ಸಂಖ್ಯೆಯನ್ನು ಹೆಚ್ಚಿಸಬೇಕು.

3 ಸೈಬರ್ ಪೊಲೀಸರು ಅಂತರ್ – ರಾಜ್ಯ ಪ್ರಯಾಣಕ್ಕೆ ಬಸ್ಸು ಅಥವಾ ರೈಲಿನ ಮೇಲೆ ಹೋಗುವ ಬದಲಿಗೆ ವಿಮಾನದಲ್ಲೂ ಇವರಿಗೆ ಪ್ರಯಾಣಿಸುವ ಅಧಿಕಾರ ನೀಡಬೇಕು.

4 ಆಯಾರಾಜ್ಯದ ಸಿಬ್ಬಂದಿ ಇನ್ನೊಂದು ರಾಜ್ಯಕ್ಕೆ ತೆರಳಿ ಅಲ್ಲಿ ಅಪರಾಧಿಯನ್ನು ಹಿಡಿಯುವಂತಹ ನೀತಿಗಿಂತ; ಇಲ್ಲಿಯ ಮಾಹಿತಿಯನ್ನು ಆಧಾರವಾಗಿರಿಸಿ ಕೊಂಡು, ಇತರ ರಾಜ್ಯದ ಸೈಬರ್ ಪೊಲೀಸರು ತಕ್ಷಣ ಅಪರಾಧಿಯನ್ನು ಹುಡುಕುವ ಮತ್ತು ಬಂಧಿಸುವ ನೀತಿ ಜಾರಿಗೆ ಬರಬೇಕು.

5 ಇತರ ರಾಜ್ಯದ ಪೊಲೀಸರು ಸಂಪೂರ್ಣ ಸಹಕಾರ ನೀಡುವುದನ್ನು ಕಡ್ಡಾಯಗೊಳಿಸಬೇಕು.

6 ಅಂತರ್ ರಾಜ್ಯ ವ್ಯಕ್ತಿಗಳಲ್ಲಿ ಬ್ಯಾಂಕ್-ವ್ಯವಹಾರ ನಡೆದಾಗ ಮೊಬೈಲ್ಗಳಿಗೆ ಎಚ್ಚರದ ಸಂದೇಶ ಅಥವಾ ಕರೆ ಬರುವ ವ್ಯವಸ್ಥೆಯನ್ನು RBI ಕಡ್ಡಾಯಗೊಳಿಸಬೇಕು.

7 ನಿರಂತರವಾಗಿ ಹಣತೆಗೆಯಲು ಬಳಸುವ ಎಟಿಎಂ ಬಿಟ್ಟು, ಇತರ ಲೊಕೇಶನ್ ಗಳಲ್ಲಿ ಹಣ ತೆಗೆದದ್ದು ಕಂಡು ಬಂದಾಗಲೂ ವಿಶೇಷ ಮೊಬೈಲ್ ಸಂದೇಶವೋ, ಕರೆಯೋ ಬರುವಂತೆ ಮಾಡಬೇಕಿದೆ.

8 ಸೈಬರ್ ಅಪರಾಧಿಗಳಿಗೆ ಈಗಾಗಲೇ ಇರುವ ಶಿಕ್ಷೆಯ ಪ್ರಮಾಣವನ್ನು 3 ವರ್ಷದಿಂದ ಗರಿಷ್ಠ 10 ವರ್ಷಕ್ಕಾದರೂ ಏರಿಕೆ ಮಾಡಬೇಕು.

9 ಸೈಬರ್ ಅಪರಾಧದ ನ್ಯಾಯ ನಿರ್ವಹಣಾ ಕ್ರಮಗಳನ್ನು ಆರು ತಿಂಗಳ ಒಳಗಾಗಿ ಮುಗಿಸುವ ವಿಶೇಷ ನೀತಿ ಜಾರಿಗೆ ಬರಬೇಕು.

10 ಮೊಬೈಲ್ ಸಿಮ್ ವಿತರಣೆ ಮಾಡುವಾಗ ದಾಖಲೆಗಳನ್ನು ಸ್ವೀಕರಿಸಿಯೇ ಕೊಡಬೇಕು. ಈ ಕಡ್ಡಾಯವನ್ನು ಕೇಂದ್ರ ಮಟ್ಟದಿಂದ ನಿಖರ ಆದೇಶ ಹೊರಡಿಸಿ ಮಾಡಬೇಕು. ಕೆಲವು ರಾಜ್ಯಗಳಲ್ಲಿ ದಾಖಲೆ ರಹಿತವಾಗಿ ಪ್ರಸಾದ ಹಂಚಿದಂತೆ ಸಿಮ್ಮುಗಳನ್ನು ಹಂಚುತ್ತಿದ್ದಾರೆ ಎಂಬ ಸುದ್ದಿ ಇದೆ.

11 RBI small Bank account (basic account) [ವಲಸೆ ಜನರಿಗಾಗಿ ಮಾಡಿದಂತಹ ಖಾತೆ] ಯನ್ನು ತಕ್ಷಣದಿಂದಲೇ ನಿಲ್ಲಿಸಬೇಕು. ಈ ಅಪರಾಧಿಗಳಿಗೆ ಹಣವರ್ಗಾಯಿಸಲು ಈ ಖಾತೆಗಳ ಬಳಕೆ ಹೆಚ್ಚಾಗಿ ಆಗುತ್ತದೆ ಎಂದು ಸುದ್ದಿ ಇದೆ.

13 ಈ ರೀತಿ ಸೈಬರ್ ಅಪರಾಧಗಳು ತಿಂಗಳ 2ನೇ ಮತ್ತು 4ನೇ ವಾರದ ಬುಧವಾರ ಗುರುವಾರ ಆಗುವ ಸಾಧ್ಯತೆ ಹೆಚ್ಚು! ಎಂಬ ಅಂಶ ಗಮನಾರ್ಹ ಅಥವಾ ಸಾಲು ಸಾಲು ಸರಕಾರಿ ರಜೆಗಳು ಬಂದಾಗ ಇವುಗಳ ಸಾಧ್ಯತೆ ಹೆಚ್ಚಾಗುತ್ತದೆಯಂತೆ.

ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿ ಆಗಿದ್ದರೂ ಕೂಡ ಈ ಸೈಬರ್ ಅಪರಾಧದ ಅಪರಾಧಿಗಳ ಮೂಲ ದೆಹಲಿ, ಉತ್ತರ ಪ್ರದೇಶ್, ಬಿಹಾರ್, ಪಶ್ಚಿಮ ಬಂಗಾಳ ರಾಜ್ಯಗಳೇ ಆಗಿವೆ ಎಂಬ ಅಂಬೋಣ ಸೈಬರ್ ತಜ್ಞರದ್ದು.

 

Published On - 11:08 am, Sun, 9 October 22