Opinion: ಪೆಟ್ರೋಲ್ ವಿತರಣಾ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಅವಶ್ಯ: ಡಾ ರವಿಕಿರಣ

| Updated By: ನಯನಾ ರಾಜೀವ್

Updated on: Nov 15, 2022 | 11:33 AM

ಪೆಟ್ರೋಲ್ ದರದ ನಿಗದಿಯೂ ಕೂಡ ಅತ್ಯಂತ ಸಮೀಪವಿರುವ ಸಂಗ್ರಹಾಲಯ ಸ್ಥಳದಿಂದಲೇ ಆಗಬೇಕು.. ಪೆಟ್ರೋಲ್ ಮಾರ್ಕೆಟಿಂಗ್ ಕಂಪನಿಗಳು ವ್ಯವಸ್ಥಿತವಾದ ಅಂತಹ ಪುನರ್ವಿಂಗಡನೆ ಪುನರ್ ವಿಮರ್ಶೆಯ ನಂತರ ಹೊಸ ದರ ನಿಗದಿ ವ್ಯವಸ್ಥೆ ಜಾರಿಗೆ ಆಗಬೇಕು.

Opinion: ಪೆಟ್ರೋಲ್ ವಿತರಣಾ ವ್ಯವಸ್ಥೆಯಲ್ಲಿ ಆಮೂಲಾಗ್ರ  ಬದಲಾವಣೆ ಅವಶ್ಯ: ಡಾ ರವಿಕಿರಣ
Dr Ravikiran
Follow us on

ಆಗಸ್ಟ್ 27 ರಂದು ಕರ್ನಾಟಕದಲ್ಲಿ ಅತ್ಯಂತ ಗರಿಷ್ಠ ಇರುವಂತಹ ಇಂಧನ ದರ ಶಿರಸಿಯಲ್ಲಿ ಒಂದು ಲೀಟರ್​ಗೆ ಒಂದು ರೂಪಾಯಿನಷ್ಟು ಇಳಿದಿದ್ದು ಸರ್ವಕಾಲಿಕ ದಾಖಲೆ ಎಂದು ಪತ್ರಕರ್ತರ ಮಿತ್ರರೊಬ್ಬರು ನನ್ನಲ್ಲಿ ತಿಳಿಸಿದರು, ಅನಂತರ ಹಲವಷ್ಟು ಕಡೆಗಳಲ್ಲಿ ಹಲವು ವ್ಯವಸ್ಥೆಗಳಲ್ಲಿ ಈ ಕುರಿತು ಮಾಹಿತಿ ಸಂಗ್ರಹಕ್ಕೆ ಅಣಿಯಾದೆ.

ಆಗ ಆನಂತರ ನನ್ನ ಅನಿಸಿಕೆ ಏನೆಂದರೆ ಸಂಪೂರ್ಣ ಪೆಟ್ರೋಲ್ ಮಾರ್ಕೆಟಿಂಗ್ ವ್ಯವಸ್ಥೆಯನ್ನು ಪುನರ್ವಿಮರ್ಶಿಸಿ ಹೊಸ ತಾರ್ಕಿಕ ವ್ಯವಸ್ಥೆಗೆ ಸರ್ಕಾರ ಮುಂದಾಗಬೇಕು. ಪೆಟ್ರೋಲ್ ಮಾರ್ಕೆಟಿಂಗ್ ಕಂಪನಿಗಳ ವಿಭಾಗಗಳ ವಿಂಗಡಣೆಯನ್ನು ಬದಲಾಯಿಸಬೇಕು , ಆಯಾ ಊರುಗಳಿಗೆ ಅತ್ಯಂತ ಸಮೀಪವಿರುವ ಪೆಟ್ರೋಲ್ ಸಂಗ್ರಹಾಲಯದಿಂದ ಪೆಟ್ರೋಲ್ ತಲುಪುವಂತಾಗಬೇಕು.

ಅಲ್ಲದೆ ಪೆಟ್ರೋಲ್ ರೇಟ್ ದರದ ನಿಗದಿಯೂ ಕೂಡ ಅತ್ಯಂತ ಸಮೀಪವಿರುವ ಸಂಗ್ರಹಾಲಯ ಸ್ಥಳದಿಂದಲೇ ಆಗಬೇಕು.. ಪೆಟ್ರೋಲ್ ಮಾರ್ಕೆಟಿಂಗ್ ಕಂಪನಿಗಳು ವ್ಯವಸ್ಥಿತವಾದ ಅಂತಹ ಪುನರ್ವಿಂಗಡನೆ ಪುನರ್ ವಿಮರ್ಶೆಯ ನಂತರ ಹೊಸ ದರ ನಿಗದಿ ವ್ಯವಸ್ಥೆ ಜಾರಿಗೆ ಆಗಬೇಕು.

ಜೊತೆಗೆ ಕ್ರೂಡ್ ಆಯಿಲ್ ಆಮದಿನಿಂದ ಗ್ರಾಹಕನಿಗೆ ಇಂಧನ ತಲುಪುವ ವ್ಯವಸ್ಥೆಯ ಬೆಲೆ ನಿಗಧಿಕರಣ ಪುನರ್ ವಿಮರ್ಶೆ ಯಾಗಬೇಕು. ಕ್ರೂಡ್ ಆಯಿಲ್ ವಾಹನಕ್ಕೆ ಬೇಕಾಗುವ ಇಂಧನದ ರೂಪಕ್ಕೆ ತರಲು ಬರುವಂತಹ ಖರ್ಚಿನ ವಿವರಗಳು ಪುನರ್ ವಿಮರ್ಶೆ ಯಾಗಬೇಕು. ಜೊತೆಗೆ ವಿತರಣಾ ವ್ಯವಸ್ಥೆಯ ಪುನರ್ವಿಂಗಡನೆ ಮಹತ್ವದ್ದು. ಅಂದರೆ ಗ್ರಾಹಕ ಸ್ನೇಹಿಯಾಗಿ.

ಅಷ್ಟೇ ಅಲ್ಲದೆ ಎಲ್ ಪಿ ಜಿ ಅಂದರೆ ಅಡುಗೆ ಅನಿಲ ಇದರ ವಿತರಣಾ ವ್ಯವಸ್ಥೆ, ದರನಿಗತಿ ವ್ಯವಸ್ಥೆಯು ಕೂಡ ಪುನರ್ವಿಮರ್ಶೆಗೆ ಒಳಪಡಬೇಕು. ಅಂದರೆ ತಾರ್ಕಿಕ ಆಂಗ್ಲ ಭಾಷೆಯಲ್ಲಿ ಲಾಜಿಕಲ್ .ಇದು ಕೂಡ ದೊಡ್ಡ ಪ್ರಮಾಣದಲ್ಲಿ ಎಲ್ಪಿಜಿ ದರ ಇಳಿಕೆಗೆ ಸಹಾಯವಾಗಬಹುದು.
ಅಲ್ಲದೆ ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆಯ ಅಡಿಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ತರುವ ವಿಚಾರ ಮಾಡುತ್ತಿರುವುದು ಅತ್ಯಂತ ಮಹತ್ವದ ಸಂಗತಿ.

ಅಂದರೆ ಒಟ್ಟಾರೆಯಲ್ಲಿ ದರ ನಿಗದಿ ಪ್ರಕ್ರಿಯೆ ಗ್ರಾಹಕರ ಸ್ನೇಹಿ ಆಗುವಂತೆ ದೊಡ್ಡ ಭಗೀರಥ ಪ್ರಯತ್ನಕ್ಕೆ ಹಣಕಾಸು ಇಲಾಖೆ ಇಂಧನ ಇಲಾಖೆ, ಕೇಂದ್ರ ಸರ್ಕಾರ ಒಟ್ಟಾಗಿ ಇಂತಹ ಒಂದು ಮಹತ್ವದ ಹೆಜ್ಜೆಗೆ ಅಣಿಯಾಗಬೇಕು. ಪೆಟ್ರೋಲಿಯಂ ದರಗಳ ಇಳಿಕೆ ಇನ್ಫ್ಲೇಶನ್ ದರ ಇಳಿಕೆಗೆ ಮಹತ್ವದ ಕಾರಣವಾಗುವಂತಹ ಅಂಶ.

ಗ್ರಾಹಕರು ಅಷ್ಟೇ ಪೆಟ್ರೋಲಿಯಂ ಉತ್ಪನ್ನಗಳ ದರ ಇಳಿದಿದೆ ಎಂದು ಗರಿಷ್ಠ ಪ್ರಮಾಣದಲ್ಲಿ ಇಂಧನವನ್ನು ಬಳಸದೆ ಕನಿಷ್ಠ ಪ್ರಮಾಣದಲ್ಲಿ ಇಂಧನ ಬಳಕೆಗೆ ಪ್ರಯತ್ನಿಸಬೇಕು. ಕನಿಷ್ಠ ಪ್ರಮಾಣದಲ್ಲಿ ಇಂಧನ ಬಳಸುವುದು ಒಂದು ದೊಡ್ಡ ದೇಶಭಕ್ತಿಯ ಸಂಗತಿ. ಇದು ಭಾರತ್ ಸರ್ಕಾರದ ವಿದೇಶಿ ವಿನಿಮಯ ಹಣ ಉಳಿಕೆಗೆ ನಮ್ಮೆಲ್ಲರ ಅಳಿಲು ಸೇವೆ ಅವಶ್ಯ.

ಮಾಹಿತಿ: ಡಾ. ರವಿಕಿರಣ ಪಟವರ್ಧನ ಶಿರಸಿ, ಆಯುರ್ವೇದ ವೈದ್ಯರು

Published On - 11:30 am, Tue, 15 November 22