Organic Arecanut: ಸಾವಯವ ಅಡಿಕೆ ಎಂದರೇನು? ಗರಿಷ್ಠ, ಕನಿಷ್ಠ ಬೆಲೆ ಕುರಿತ ಮಾಹಿತಿ ಇಲ್ಲಿದೆ

| Updated By: ನಯನಾ ರಾಜೀವ್

Updated on: Dec 09, 2022 | 2:14 PM

ಸಾವಯವ ಅಡಿಕೆ ಎಂಬ ಶಬ್ದ ಕೇಳಿದ ಕೂಡಲೇ ಶಿರಸಿ ಮತ್ತು ಮಲೆನಾಡು ಭಾಗದ ರೈತರಿಗೆ ಆಶ್ಚರ್ಯ ಅನ್ನಿಸುತ್ತದೆ. ಸಾವಯವ ಆರ್ಗನಿಕ್ ಶಬ್ದ ಸಾಫ್ಟ್ವೇರ್ ಎಂಜಿನಿಯರ್ ಗಳಲ್ಲಿ ಬೆಂಗಳೂರು ತಲುಪಿದವರಿಗೆ ಅತ್ಯಂತ ಪ್ರಿಯ ಶಬ್ದ.

Organic Arecanut: ಸಾವಯವ ಅಡಿಕೆ ಎಂದರೇನು? ಗರಿಷ್ಠ, ಕನಿಷ್ಠ ಬೆಲೆ ಕುರಿತ ಮಾಹಿತಿ ಇಲ್ಲಿದೆ
Arecanut
Follow us on

ಸಾವಯವ ಅಡಿಕೆ ಎಂಬ ಶಬ್ದ ಕೇಳಿದ ಕೂಡಲೇ ಶಿರಸಿ ಮತ್ತು ಮಲೆನಾಡು ಭಾಗದ ರೈತರಿಗೆ ಆಶ್ಚರ್ಯ ಅನ್ನಿಸುತ್ತದೆ. ಸಾವಯವ ಆರ್ಗನಿಕ್ ಶಬ್ದ ಸಾಫ್ಟ್ವೇರ್ ಎಂಜಿನಿಯರ್ ಗಳಲ್ಲಿ ಬೆಂಗಳೂರು ತಲುಪಿದವರಿಗೆ ಅತ್ಯಂತ ಪ್ರಿಯ ಶಬ್ದ. ಅಡಿಕೆಗೂ ಸಾವಯುವ ಬಂತಾ ಎಂಬ ಪ್ರಶ್ನೆ ಅವರದ್ದಾಗಿರುತ್ತದೆ. ಹೌದು ಖಂಡಿತವಾಗಿಯೂ ಸಾವಯವ ಅಡಿಕೆ ಮುಂದೊಂದು ದಿನ ಎಲ್ಲ ಬೆಳೆಗಾರರಿಗೂ ಕಣ್ಣು ತೆರೆಸಲಿದೆ. ಸಾಮಾನ್ಯವಾಗಿ ಸಾವಯವ ಅಂದರೆ ಸಾಮಾನ್ಯ ಅರ್ಥದಲ್ಲಿ ರಾಸಾಯನಿಕ ಗಳ ಉಪಯೋಗ ಇಲ್ಲದೆ ಬೆಳೆದಂತಹ ಬೆಳೆ ಎಂದು ಅರ್ಥ.

ಇದು ಮುಂದೊಂದು ದಿನ ಅಡಿಕೆಗೂ ಬರಲಿದೆ, ಯಾಕೆಂದರೆ ರಾಸಾಯನಿಕಗಳ ಬಳಕೆ ಗರಿಷ್ಠ ತಲುಪಿದಾಗ ಸಾವಯವ ಅಡಿಕೆ ಹೇಳುವಂತಹ ಒಂದು ವಾದ ಬರುತ್ತದೆ. ಅಡಿಕೆಯ ದರ ಈಗ ಗರಿಷ್ಠ ಇದೆ ಎನ್ನಬಹುದು. ಗರಿಷ್ಠ ದರ ,ಗರಿಷ್ಠ ಬೆಳೆ, ಕನಿಷ್ಠ ವೇಳೆ, ಬಣ್ಣ ಹೇಳುವಂಥ ವಾದಗಳ ಮಧ್ಯ ಅಡಿಕೆ ತನ್ನ ಮಾನವನ್ನ ಹರಾಜು ಮಾಡಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.

ಗರಿಷ್ಠದರ
ಬಹಳಷ್ಟು ಜನರಿಗೆ ಗರಿಷ್ಠ ದರ ಅಂದರೆ ಏನು ಅಂತ ಪ್ರಶ್ನೆ ಬೀರಬಹುದು ಅಡಿಕೆಯ ಯಾವುದೇ ಭಾಗವೂ ಕೂಡ ದರಹಿತವಾಗಿ ಮಾರಾಟ ಆಗೋದಿಲ್ಲ, ಉತ್ತಮ ದರ್ಜೆಯ ಅಡಿಕೆಯಿಂದ ಹಿಡಿದು ಕೊಳೆಯಡಿಕೆಯವರೆಗೂ ಎಲ್ಲವೂ ಖರೀದಿದಾರರಿದ್ದಾರೆ ಹಾಗೂ ಮಾರಾಟ ಮಾಡುವವರಿಂದಲೂ ಮಾರಾಟವಾಗುತ್ತದೆ.

ಗರಿಷ್ಠ ಬೆಳೆ
ವರ್ಷದಲ್ಲಿ ಒಂದೇ ಬೆಳೆ ಬರುವ ಅಡಿಕೆ ರೈತನಿಗೆ ಜೀವನಾಡಿಯಾಗಿದೆ ಹಾಗಾಗಿ ಗರಿಷ್ಠ ಬೆಳೆ ಬರಬೇಕೆಂಬ ಹಾಗೂ ಬಂದಂತಹ ಬೆಳೆ ಉಳಿಯಬೇಕೆಂಬ ಪ್ರತಿಯೊಂದು ಪ್ರಯತ್ನವನ್ನು ಮಾಡಲು ಅವನು ಹಿಂಜರಿಯುವುದಿಲ್ಲ.ಈ ಪ್ರಕ್ರಿಯೆಯಲ್ಲಿ ಬೋರ್ಡೂ ಮಿಶ್ರಣವನ್ನು ಅಡಿಕೆಗೆ ಸಿಂಪಡಿಸಲಾಗುತ್ತದೆ .

ಕೆಲವು ತೋಟಗಾರಿಕಾ ಮತ್ತು ಕೃಷಿ ತಜ್ಞರ ಪ್ರಕಾರ ಇದು 1% ಆಗುವಂತೆ ಸಿಂಪಡಿಸಬೇಕು. 1% -5% ತಲುಪಬಹುದು ಎಂದು ಕೆಲವರು ಅನುಮಾನಿಸುತ್ತಿದ್ದಾರೆ. ಇನ್ನು ಉತ್ತಮ ದರ್ಜೆಯ ಬೋರ್ಡೂ ಮಿಶ್ರಣವಾದರೆ 45 ದಿನಗಳ ಕಾಲ ಇದರ ಪ್ರಭಾವ ಇರುತ್ತದೆ ಎಂದು ವಾಡಿಕೆಯ ತಿಳುವಳಿಕೆ. ಈ ದರ್ಜೆಯ ಇಳಿಕೆಯಿಂದಾಗಿ ಇದರ ಪ್ರಭಾವದ ದಿನಗಳು ಕಡಿಮೆಯಾಗುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳ ಅಭಿಪ್ರಾಯ. ಮಾರ್ಚ್ ತಿಂಗಳಲ್ಲಿ ಉಪಯೋಗಿಸುವ ರಾಸಾಯನಿಕಗಳು ಬೇರೆ ಇವೆ.

ಕನಿಷ್ಠ ಬೆಳೆ

ಹಸಿ ಅಡಿಕೆಯಿಂದ ಹಿಡಿದು ಪೂರ್ಣ ಪ್ರಮಾಣದಲ್ಲಿ ಪ್ರಕ್ರಿಯೆ ಮಾಡದಂತಹ ಅಡಿಕೆಯ ಖರೀದಿ ಆಗುತ್ತದೆ . ಖರೀದಿಸಿದ ವ್ಯಾಪಾರಸ್ಥರು ಅಡಿಕೆಗೆ ಆದಷ್ಟು ಬೇಗ ಪೇಟೆಗೆ ಪೂರ್ಣ ಪ್ರಮಾಣದಲ್ಲಿ ಮಾರಾಟಕ್ಕೆ ತರಲು ಯಾವ ಯಾವ ಪ್ರಯತ್ನ ಗಳಿವೆಯೋ ಅದನ್ನು ಪೂರ್ಣಗೊಳಿಸಿ ಕನಿಷ್ಠ ವೇಳೆಯಲ್ಲಿ ಪೇಟೆಗೆ ಮಾರಾಟಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ. ಅಂದರೆ ಆದಷ್ಟು ಬೇಗನೆ ಒಣಗಲು ಕೆಲವು ಕಳೆನಾಶಕಗಳನ್ನು ಬಳಸುತ್ತಾರೆ ಎಂದು ಸುದ್ದಿ ಇದೆ.

ಸುಂದರತೆ ಮತ್ತು ಬಣ್ಣ

ಅಡಿಕೆಯನ್ನು ವ್ಯಾಪಾರಸ್ಥರು ಚಲನಚಿತ್ರದ ನಾಯಕ ನಟಿಯಂತೆ ಅಡಿಕೆಯನ್ನು ವರ್ಣಿಸುತ್ತಾರೆ ಯಾವ ಪರಿಸ್ಥಿತಿಗೆ ಯಾವ ದೃಶ್ಯಕ್ಕೆ ಹೇಗೆ ನಾಯಕನಟಿಯನ್ನು ರೂಪಿಸಲಾಗುತ್ತಿದೆ ಅದೇ ರೀತಿ ಯಾವ ಭಾಗದಲ್ಲಿ ಯಾವ ಖರೀದಿದಾರರಿಂದ ಹೇಗೆ ಬೇಡಿಕೆ ಇರುತ್ತದೆ ಆ ರೀತಿ ಬಣ್ಣಗೊಳಿಸಲಾಗುತ್ತದೆ. ಬಣ್ಣಗೊಳಿಸುವ ಪ್ರಕ್ರಿಯೆಯಲ್ಲಿ ರಾಸಾಯನಿಕ ಬಣ್ಣಗಳನ್ನು ಕೂಡ ಬಳಸಲಾಗುತ್ತದೆ ಎಂದು ಕೇಳಿದ್ದೇನೆ. ಪಾರಂಪರಿಕವಾಗಿ ಅಡಿಕೆಯ ಜೋಗರು ಅಥವಾ ತೊಗರಿಂದಲೇ ಹೆಚ್ಚಿನ ಬಣ್ಣ ಬರುವಂತೆ ಮಾಡಲಾಗುತ್ತಿತ್ತು ಅಂತಹ ಕೆಲವೇ ಕೆಲವು ವ್ಯಾಪಾರಸ್ಥರು ಈಗ ಇದ್ದಾರೆ ಎಂದು ಕೇಳಲ್ಪಟ್ಟಿದ್ದೇನೆ. ಕೊಳೆಯಡಿಕೆಯೆಂದು ಹೇಳಲ್ಪಡುವಂತಹ ಅತ್ಯಂತ ಕೊಳೆ ಅಡಿಕೆಯು ಹೆಚ್ಚಿನ ಮಾನದಲ್ಲಿ ವ್ಯಾಪಾರ ಆಗುತ್ತದೆ. ಅಡಿಕೆ ಬಣ್ಣಕ್ಕೆ ಬಣ್ಣ ಬರುವಂತಹ ರೆಡ್ಡಒಕ್ಸಾಯಿಡನ ಉಪಯೋಗ ನಡೆಯುತ್ತದೆಯೋ ಎಂಬ ಅನುಮಾನ ಹಲವರಿಂದ.

ಮೇಲ್ಕಂಡ ವಿಷಯಗಳ ಜೊತೆಗೆ ಪಾರಂಪರಿಕ ಅಡಿಕೆ ಬೆಳೆಗಾರರಿಂದ ಅಡಿಕೆ ಬೆಳೆಯುವ ತೋಟಗಳು ಪಾರಂಪರಿಕ ಅಡಿಕೆಬೆಳೆಗಾರರಲ್ಲದವರಿಂದ ಖರೀದಿಯಾಗುತ್ತಿರುವುದು, ಹಣದ ನಿವೇಶಕ್ಕಾಗಿ ಕೃಷಿ ಭೂಮಿ ಖರೀದಿಯಾಗುತ್ತಿರುವುದು ಕಾರಣ.
ಅಡಿಕೆ ವ್ಯವಹಾರಕ್ಕೂ ದೇಶ ಮೊದಲು ಎಂಬ ಮಾನಸಿಕತೆಯ ಅವಶ್ಯಕತೆ ಇಂದು ತೀವ್ರವಾಗಿದೆ, ತೆರಿಗೆ ತಪ್ಪಿಸಿ ನಡೆಯುವ ಅಡಿಕೆ ವ್ಯವಹಾರ ನಿಲ್ಲಬೇಕೆಂದು ಕೆಲವು ಪಾರಂಪರಿಕ ಅಡಿಕೆ ವ್ಯಾಪಾರಸ್ಥರು ಮುಖ್ಯವಾಗಿ ನೀಡುವ ಕಾರಣವಾಗಿದೆ

ಇದೇ ರೀತಿ ಮುಂದುವರೆದರೆ ಈಗೀರುವ ದರ ಇರುವಂತಹ ಅಡಿಕೆ ಪಾತಾಳಕ್ಕೆ ಮುಟ್ಟಲು ಬಹಳ ದಿನ ದೂರವಿಲ್ಲ.ಈ ಜಾಗೃತೆಯನ್ನು ಬೆಳೆಗಾರರು, ಖರೀದಿದಾರರು ಗಮನದಲ್ಲಿ ಇರಿಸಿ ಅಡಿಕೆಯ ಮಾನಕ್ಕೆ ಮಾನ ಬರುವಂತೆ ಯೋಚಿಸುವ ಯೋಜಿಸುವ ಅವಶ್ಯಕತೆ ಅಡಿಕೆ ಬೆಳೆಗಾರ ರೈತರು ವ್ಯಾಪಾರಸ್ಥರು ಹಾಗೂ ಅಡಿಕೆಯ ಸಂಬಂಧಿತ ಸಂಸ್ಥೆಗಳ ಹೆಗಲ ಮೇಲಿದೆ ಎಂಬ ಅಭಿಪ್ರಾಯ ಕೆಲವು ಬುದ್ಧಿ ಜೀವಿಗಳದ್ದು.

ಕೊನೆಯ ಮಾತು ಗರಿಷ್ಠ ದರ ,ಗರಿಷ್ಠ ಬೆಳೆ, ಕನಿಷ್ಠ ಬೆಳೆ,ಸುಂದರತೆ ಮತ್ತು ಬಣ್ಣ ಇವೆಲ್ಲವುಗಳ ಗಡಿಬಿಡಿ ಯ ಮಧ್ಯ ಅಡಿಕೆ ತನ್ನ ಸಾವಯವತೆಯನ್ನು ಕಳೆದುಕೊಳ್ಳುತ್ತಿದೆಯೋ ಎಂಬ ಅನುಮಾನ ಹಲವರಿಂದ,ಬೋರ್ಡೂ ಮಿಶ್ರಣ, ಕಳೆನಾಶಕ,ರೆಡ್ಡಒಕ್ಸಾಯಿಡ ಇನ್ನಿತರ ರಾಸಾಯನಿಕಗಳಿಂದ ಅಡಿಕೆಯ ಮಾನ ಮುಂದೊಂದು ದಿನ ಹರಾಜು ಆಗಬಹುದೇ ಎಂಬ ಪ್ರಶ್ನೆ ಕೆಲವು ಅಡಿಕೆ ಬೆಳೆಗಾರರಲ್ಲಿ.

 

ಮಾಹಿತಿ: ಡಾ. ರವಿಕಿರಣ ಪಟವರ್ಧನ, ಶಿರಸಿ, ಆಯುರ್ವೇದ ವೈದ್ಯರು

Published On - 2:00 pm, Fri, 9 December 22