ಸಾವಿರಾರು ಬಾಯ್‌ಫ್ರೆಂಡ್‌ಗಳು! ಒಬ್ಬ ಹುಡುಗಿಗೆ ಒಂದಲ್ಲ, ಎರಡಲ್ಲ ಸಾವಿರ ಗೆಳೆಯರಿರುತ್ತಾರೆ ಎಂದು ಹೇಳಿದರೆ ಆಶ್ಚರ್ಯಪಡುತ್ತೀರಾ? ಇದು ನಿಜ. ನೀವು ಓದಿದ್ದು ಸರಿಯಾಗಿಯೇ ಇದೆ. ಜಾರ್ಜಿಯಾದ ಕರಿನ್ ಮಾರ್ಜೋರಿ (Caryn Marjorie) ಎಂಬ ಬೆಡಗಿ ಸಾಮಾಜಿಕ ಮಾಧ್ಯಮದ ಪ್ರಭಾವಶಾಲಿಯಾಗಿದ್ದಾರೆ. ತನಗೆ 1,000 ಗೆಳೆಯರಿದ್ದಾರೆ (1,000 Boyfriends) ಎಂದು ಕ್ಯಾರೀನ್ ಹೇಳಿಕೊಂಡಿದ್ದಾಳೆ. ಅವಳು ತನ್ನ ಎಲ್ಲಾ ಗೆಳೆಯರಿಗೆ ಸಮಾನ ಸಮಯವನ್ನು ನೀಡುತ್ತಾಳಂತೆ. ಆದರೆ ಅದು ಹೇಗೆ ಎಂಬುದೇ ತುಂಬಾ ಆಸಕ್ತಿದಾಯಕ ವಿಷಯವಾಗಿದೆ. ಇದಕ್ಕಾಗಿ ಈ ಸಾಮಾಜಿಕ ಜಾಲತಾಣದ ಇನ್ಫ್ಲೂಯೆನ್ಸರ್ ಇಂತಹ ಜುಗಾಡ್ ಮಾಡಿದ್ದಾಳೆ. ಜೊತೆಗೆ, ಅದರಿಂದಲೇ ಈಗ ಕೈತುಂಬಾ ಹಣವನ್ನೂ ಗಳಿಸುತ್ತಿದ್ದಾಳಂತೆ.
ಜಾರ್ಜಿಯಾದ ಕಮ್ಮಿಂಗ್‌ನಿಂದ 1.8 ಮಿಲಿಯನ್‌ಗಿಂತಲೂ ಹೆಚ್ಚು ಜನರು 23 ವರ್ಷದ ಕ್ಯಾರಿನ್ ಳನ್ನು ಫಅಲೋ ಮಾಡ್ತಿದಾರೆ. ಕರೀನ್ ಅವರ ಗೆಳೆಯನಾಗಲು ಇನ್ನೂ ಅನೇಕ ಅಭಿಮಾನಿಗಳು ಹಾತೊರೆಯುತ್ತಿದ್ದಾರಂತೆ! ಏಕೆಂದರೆ, ಕರಿನ್‌ಗೆ ಎಲ್ಲರೊಂದಿಗೆ ಡೇಟಿಂಗ್‌ಗೆ ಹೋಗಲು ಸಾಧ್ಯವಿಲ್ಲ. ಹಾಗಾಗಿ ಪರಿಸ್ಥಿತಿ ಅರ್ಥೈಸಿಕೊಂಡು ಅದಕ್ಕೊಂದು ಮಾರ್ಗವನ್ನು ಕಂಡುಕೊಂಡಿದ್ದಾಳೆ. ಇದರಿಂದ ಸಾಕಷ್ಟು ಹಣವೂ ಬರುತ್ತಿದೆ.
ಯುನೈಟೆಡ್ ಕಿಂಗ್ಡಮ್ನ ಡೈಲಿ ಸ್ಟಾರ್ ವರದಿಯ ಪ್ರಕಾರ ಇತ್ತೀಚೆಗೆ ಕ್ಯಾರಿನ್ ತನ್ನ ಸ್ವಂತ ಕೃತಿಕ ಬುದ್ಧಿಮತ್ತೆ (Artificial Intelligence -AI) ಆವೃತ್ತಿಯಾದ CarynAI ಅನ್ನು ಬಿಡುಗಡೆ ಮಾಡಿದ್ದಾಳೆ. ಇದ ಮೂಲಕ ತನ್ನ ಅಭಿಮಾನಿ ಅನುಯಾಯಿಗಳು ಕ್ಯಾರಿನ್ ಳನ್ನು ತಮ್ಮ ಗೆಳತಿಯನ್ನಾಗಿ ಮಾಡಿಕೊಳ್ಳಲು ಒಂದು ನಿಮಿಷಕ್ಕೆ 82.18 ರೂ ನಿಗದಿ ಮಾಡಿದ್ದಾಳೆ. ಈ ಒಂದು ಟ್ರಿಕ್‌ನಿಂದ ಈ ಹುಡುಗಿ ಎಷ್ಟು ಸಂಪಾದಿಸುತ್ತಾಳೆ ಗೊತ್ತಾ?
ಸ್ವತಃ ಬೋಟ್ ಆವೃತ್ತಿಯನ್ನು ರಚಿಸಲು AI ಸಾಫ್ಟ್‌ವೇರ್‌ನಲ್ಲಿ ತನ್ನ ಸಾವಿರಾರು ಗಂಟೆಗಳ ಸಂಭಾಷಣೆಗಳನ್ನು ರೆಕಾರ್ಡ್ ಮಾಡಿದ್ದೇನೆ ಎಂದು ಸಾಮಾಜಿಕ ಮಾಧ್ಯಮದ ಇನ್ಫ್ಲೂಯೆನ್ಸರ್ ಕ್ಯಾರಿನ್ ಹೇಳಿದರು. ಕ್ಯಾರಿನ್ ಪ್ರಕಾರ ಭವಿಷ್ಯದಲ್ಲಿ, ಅವಳು ತನ್ನ ಪ್ರೀತಿಪಾತ್ರರ ಜೊತೆಗೆ ಲೈಂಗಿಕ ರಹಸ್ಯಗಳು, ಒಂದಷ್ಟು ಉಪ್ಪು ಹುಳಿ ಖಾರದ ಸಿಹಿ ಮಾತುಕತೆಗಳನ್ನು ಹಂಚಿಕೊಳ್ಳುತ್ತಾಳಂತೆ.
ಪ್ರಸ್ತುತ ಒಂದು ಸಾವಿರ 'ಬಾಯ್‌ಫ್ರೆಂಡ್ಸ್' AI ಸಾಫ್ಟ್‌ವೇರ್ ಮೂಲಕ ತನ್ನೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಕ್ಯಾರಿನ್ ಹೇಳಿಕೊಂಡಿದ್ದಾಳೆ. ಇದಕ್ಕಾಗಿ ಅವರು ಗಂಟೆಗೆ ಒಂದು ಡಾಲರ್ ನೀಡುತ್ತಿದ್ದಾರೆ. ಅವರ 1.8 ಮಿಲಿಯನ್ ಅನುಯಾಯಿಗಳಲ್ಲಿ 20,000 ಮಂದಿ CarynAl ಗೆ ಸೈನ್ ಅಪ್ ಮಾಡಿದರೆ, ಅವರ AI ಬೋಟ್ ತಿಂಗಳಿಗೆ $5 ಮಿಲಿಯನ್ (ರೂ. 41 ಕೋಟಿಗೂ ಹೆಚ್ಚು) ಗಳಿಸಬಹುದು.