Salman Khan: ಮಮತಾ ಬ್ಯಾನರ್ಜಿ ಪಕ್ಕ ನಿಂತು ರಾಜಕಾರಣಿ ರೀತಿ ಕೈ ಬೀಸಿದ ನಟ ಸಲ್ಮಾನ್ ಖಾನ್
Salman Khan Meets Mamata Banerjee: ಸಲ್ಮಾನ್ ಖಾನ್ ಅವರು ರಾಜಕಾರಣಿ ರೀತಿಯಲ್ಲಿ ಪೋಸ್ ನೀಡಿದ್ದಾರೆ. ತಮ್ಮನ್ನು ನೋಡಲು ನೆರೆದಿದ್ದ ಜನರ ಕಡೆಗೆ ಅವರು ಕೈ ಬೀಸಿದ್ದಾರೆ. ಎಲ್ಲರಿಗೂ ನಮಸ್ಕಾರ ಮಾಡಿ ಮುಂದೆ ಸಾಗಿದ್ದಾರೆ.
Updated on: May 14, 2023 | 3:07 PM

ಸಲ್ಮಾನ್ ಖಾನ್ ಅವರು ಬಾಲಿವುಡ್ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಹಲವು ಸಿನಿಮಾಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ಇದರ ನಡುವೆಯೂ ಮಮತಾ ಬ್ಯಾನರ್ಜಿ ಅವರನ್ನು ಸಲ್ಮಾನ್ ಖಾನ್ ಭೇಟಿ ಆಗಿದ್ದಾರೆ.

ಕೊಲ್ಕತ್ತಾದಲ್ಲಿ ‘ದಬಂಗ್ ಟೂರ್’ ನಡೆಸುವ ಸಲುವಾಗಿ ಸಲ್ಮಾನ್ ಖಾನ್ ಅವರು ಪಶ್ಚಿಮ ಬಂಗಾಳಕ್ಕೆ ತೆರಳಿದ್ದರು. ಕಾರ್ಯಕ್ರಮಕ್ಕೂ ಮುನ್ನ ಅವರು ಮಮತಾ ಬ್ಯಾನರ್ಜಿ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ.

ತಮ್ಮನ್ನು ನೋಡಲು ಬಂದ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರನ್ನು ಮಮತಾ ಬ್ಯಾನರ್ಜಿ ಅವರು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಸಲ್ಲುಗೆ ಶಾಲು ಹೊದಿಸಿ ಅವರು ಸ್ವಾಗತ ಕೋರಿದ್ದಾರೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಪಕ್ಕ ನಿಂತ ಸಲ್ಮಾನ್ ಖಾನ್ ಅವರು ಪಕ್ಕಾ ರಾಜಕಾರಣಿ ರೀತಿಯಲ್ಲಿ ಪೋಸ್ ನೀಡಿದ್ದಾರೆ. ತಮ್ಮನ್ನು ನೋಡಲು ನೆರೆದಿದ್ದ ಜನರ ಕಡೆಗೆ ಅವರು ಕೈ ಬೀಸಿದ್ದಾರೆ. ಎಲ್ಲರೂ ನಮಸ್ಕಾರ ಮಾಡಿ ಮುಂದೆ ಸಾಗಿದ್ದಾರೆ.

ಸಲ್ಮಾನ್ ಖಾನ್ ಅವರಿಗೆ ಬೆದರಿಕೆ ಇರುವ ವಿಚಾರ ಗೊತ್ತೇ ಇದೆ. ಆದ್ದರಿಂದ ಕೊಲ್ಕತ್ತಾದಲ್ಲಿ ಅವರು ಉಳಿದುಕೊಂಡ ಹೋಟೆಲ್ ಸುತ್ತಮುತ್ತ ಬಿಗಿ ಭದ್ರತೆ ಒದಗಿಸಲಾಗಿತ್ತು. ಸೋನಾಕ್ಷಿ ಸಿನ್ಹಾ, ಪೂಜಾ ಹೆಗ್ಡೆ ಮುಂತಾದ ತಾರೆಯರು ಕೂಡ ‘ದಬಂಗ್ ಟೂರ್’ನಲ್ಲಿ ಭಾಗಿ ಆಗಿದ್ದರು.




