ಬ್ರೇಕ್​ ಫೇಲ್​ ಆಗಿ ಹಳ್ಳಕ್ಕೆ ಉರುಳಿಬಿದ್ದ ಬಸ್: 25ಕ್ಕೂ ಹೆಚ್ಚು ಜನರಿಗೆ ಗಾಯ, ಹಲವರ ಸ್ಥಿತಿ ಗಂಭೀರ

Edited By:

Updated on: Apr 22, 2025 | 6:11 PM

ಬೆಂಗಳೂರಿನಿಂದ ಸಂಗಮ ನೋಡಲು ತೆರಳಿದ್ದ ಎರಡು ಖಾಸಗಿ ಬಸ್​ಗಳು ಅಪಘಾತಕ್ಕೀಡಾಗಿವೆ. ಮೊದಲ ಬಸ್​ ಬ್ರೇಕ್​ ಫೇಲ್​ ಆಗಿ ನಿಯಂತ್ರಣ ಕಳೆದುಕೊಂಡು ರಸ್ತೆ ಪಕ್ಕದ ಹಳ್ಳಕ್ಕೆ ಬಿದ್ದಿದೆ. ಇದರ ಹಿಂದೆ ಇದ್ದ ಮತ್ತೊಂದು ಬಸ್​ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದಿದೆ. ಆದ್ರೆ, ಹಳ್ಳಕ್ಕೆ ಬಿದ್ದ ಬಸ್​ನಲ್ಲಿದ್ದ 25ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿದ್ದು, ಈ ಪೈಕಿ ಹಲವರ ಸ್ಥಿತಿ ಚಿಂತಾಜನಕವಾಗಿದೆ. ಇನ್ನು ಹಳ್ಳಕ್ಕೆ ಬಸ್​ ಉರುಳಿಬಿದ್ದಿರುವ ಫೋಟೋಗಳು ಇಲ್ಲಿವೆ.

1 / 8
ಪ್ರವಾಸಿಗರ ಬಸ್​ವೊಂದು (private bus) ಹಳ್ಳಕ್ಕೆ ಬಿದ್ದಿದೆ. ಬ್ರೇಕ್​ ಫೇಲ್​ (Break fail) ಆಗಿ ಖಾಸಗಿ ಬಸ್ ರಸ್ತೆ ಪಕ್ಕದ ಹಳ್ಳಕ್ಕೆ ಉರುಳಿಬಿದ್ದಿರುವ ಘಟನೆ ರಾಮನಗರ (Ramanagara) ಜಿಲ್ಲೆಯ ಕನಕಪುರ ತಾಲೂಕಿನ ಸಂಗಮ (sangama )ಬಳಿ ನಡೆದಿದೆ

2 / 8
ಘಟನೆಯಲ್ಲಿ 25ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದೆ. ಪ್ರವಾಸಿಗರು ಬೆಂಗಳೂರಿನಿಂದ ಸಂಗಮ ನೋಡಲು ಬಂದಿದ್ದರು. ಈ ವೇಳೆ ರಸ್ತೆ ತಿರುವಿನಲ್ಲಿ ಬ್ರೇಕ್ ಫೇಲ್​ ಆಗಿ ಬಸ್ ಹಳ್ಳಕ್ಕೆ ಉರುಳಿಬಿದ್ದಿದೆ.

3 / 8
ಸದ್ಯ ಗಾಯಾಳುಗಳಿಗೆ ಕನಕಪುರದ ಸರ್ಕಾರಿ ಆಸ್ಪತ್ರೆಗೆ ಚಕಿತ್ಸೆ ನೀಡಲಾಗುತ್ತಿದ್ದು, ಕೆಲ ಗಾಯಾಳನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿವಿಧ ಆಸ್ಪತ್ರೆಗಳಿಗೆ ರವಾನೆ ಮಾಡಲಾಗಿದೆ.

4 / 8
ಕ್ರಿಶ್ಚಿಯನ್ನರ ಹಬ್ಬದ ಹಿನ್ನೆಲೆಯಲ್ಲಿ ಮೊದಲು ಬೆಟ್ಟದ ಹಲಸೂರು ಗ್ರಾಮಕ್ಕೆ ಬಂದಿದ್ದರು. ಹಬ್ಬದ ಊಟ ಮುಗಿಸಿಕೊಂಡು ಸಂಗಮ‌ ನೋಡಲು ತೆರಳುವ ವೇಳೆ ಈ ದುರಂತ ಸಂಭವಿಸಿದೆ. ಗಾಯಾಳುಗಳು ಬೆಂಗಳೂರಿನ ಈಜಿಪುರ ನಿವಾಸಿಗಳು ಎಂದು ತಿಳಿದುಬಂದಿದೆ.

5 / 8
ಸದ್ಯ ಗಾಯಾಳುಗಳಿಗೆ ಕನಕಪುರದ ಸರ್ಕಾರಿ ಆಸ್ಪತ್ರೆಗೆ ಚಕಿತ್ಸೆ ನೀಡಲಾಗುತ್ತಿದ್ದು, ಕೆಲ ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದೆ. ಹೀಗಾಗಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿವಿಧ ಆಸ್ಪತ್ರೆಗಳಿಗೆ ರವಾನೆ ಮಾಡಲಾಗಿದೆ.

6 / 8
ಎರಡು ಬಸ್​ಗಳಲ್ಲಿ ಬೆಂಗಳೂರಿನಿಂದ ಬೆಟ್ಟದ ಹಲಸೂರಿಗೆ ಬಂದಿದ್ದರು. ಹಬ್ಬ ಮುಗಿಸಿಕೊಂಡು ಬಳಿಕ ಸಂಗಮ ನೋಡಲು ತೆರಳುತ್ತಿದ್ದರು. ಈ ವೇಳೆ ಮೊದಲ ಬಸ್ ರಸ್ತೆ ತಿರುವಿನಲ್ಲಿ ಬ್ರೇಕ್​​ ಫೇಲ್​ ಆಗಿ ಹಳಕ್ಕೆ ಬಿದ್ದಿದ್ದರೆ, ಇದರ ಹಿಂದೆ ಇದ್ದ ಮತ್ತೊಂದು ಬಸ್​ ಕೂಡ ರಸ್ತೆ ತಿರುವಿನಲ್ಲಿ ಮರಕ್ಕೆ ಡಿಕ್ಕಿ ಹೊಡೆದಿದೆ.

7 / 8
ಮೊದಲ ಬಸ್ ರಸ್ತೆ ತಿರುವಿನಲ್ಲಿ ಬ್ರೇಕ್​​ ಫೇಲ್​ ಆಗಿ ಹಳಕ್ಕೆ ಬಿದ್ದಿದ್ದರೆ, ಇದರ ಹಿಂದೆ ಇದ್ದ ಮತ್ತೊಂದು ಬಸ್​ ಕೂಡ ರಸ್ತೆ ತಿರುವಿನಲ್ಲಿ ಮರಕ್ಕೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಎರಡನೇ ಬಸ್​ನಲ್ಲಿದ್ದವರಿಗೆ ಯಾವುದೇ ಗಾಯಗಳಾಗಿಲ್ಲ. ಆದರೆ, ಬಸ್​ನ ಮುಂಭಾಗ ಜಖಂ ಆಗಿದೆ.

8 / 8

ಬಸ್​ ಸಂಪೂರ್ಣವಾಗಿ ಉಲ್ಟಾ ಬಿದ್ದಿದೆ. ಪರಿಣಾಮ ಬಸ್​ನಲ್ಲಿದ್ದ ಕೆಲ ಪ್ರಯಾಣಿಕರಿಗೆ ಸ್ಥಿತಿ ಗಂಭೀರಗಳಾಗಿವೆ. ಇದರಿಂದ ಸ್ಥಳದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.