Kannada News Photo gallery Aishwarya Rai's Dating History Hemant Trivedi to Salman Khan Finally married Abhishek Bachhan
ಮದುವೆಗೂ ಮುನ್ನ ಹಲವರ ಜೊತೆ ತಳುಕು ಹಾಕಿಕೊಂಡಿತ್ತು ಐಶ್ವರ್ಯಾ ಹೆಸರು
ನಟಿ ಐಶ್ವರ್ಯಾ ರೈ ಈಗ ತಮ್ಮ ಕುಟುಂಬದೊಂದಿಗೆ ಸಂತೋಷದ ಜೀವನ ನಡೆಸುತ್ತಿದ್ದಾರೆ. ಆದರೆ ಒಂದು ಕಾಲದಲ್ಲಿ ಐಶ್ವರ್ಯಾ ಹೀಗೆ ಇರಲಿಲ್ಲ. ಅವರು ತಮ್ಮ ಸಂಬಂಧಗಳ ಕಾರಣದಿಂದಲೇ ಸುದ್ದಿ ಆಗುತ್ತಿದ್ದರು. ಐಶ್ವರ್ಯಾ ಅವರು ಸಲ್ಮಾನ್ ಖಾನ್ ಮತ್ತು ವಿವೇಕ್ ಒಬೆರಾಯ್ ಮಾತ್ರವಲ್ಲದೆ ಇತರ ಶ್ರೀಮಂತ ಸೆಲೆಬ್ರಿಟಿಗಳೊಂದಿಗೆ ಡೇಟಿಂಗ್ ಮಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ಐಶ್ವರ್ಯಾ ರೈ ಅವರ ಹೆಸರು ಹೇಮಂತ್ ತ್ರಿವೇದಿ ಜೊತೆ ತಳುಕು ಹಾಕಿಕೊಂಡಿತ್ತು. ವಿಶ್ವ ಸುಂದರಿ ಪಟ್ಟ ಗೆಲ್ಲಲು ಐಶ್ವರ್ಯಾ ಧರಿಸಿದ್ದ ಗೌನ್ ಅನ್ನು ಹೇಮಂತ್ ವಿನ್ಯಾಸಗೊಳಿಸಿದ್ದರು. ಆದರೆ, ತಾವಿಬ್ಬರೂ ಒಳ್ಳೆಯ ಫ್ರೆಂಡ್ಸ್ ಅಷ್ಟೇ ಎಂದು ಇವರು ಹೇಳಿಕೊಂಡರು.
1 / 8
ಸಬೀರ್ ಹೆಸರಿನ ಉದ್ಯಮಿ ಬಿಲ್ ಗೇಟ್ಸ್ಗೆ ತನ್ನ ಕಂಪನಿಯನ್ನು ಮಾರಿದ್ದರು. ಸಬೀರ್ ಹಾಗೂ ಐಶ್ವರ್ಯಾ ರೈ ಸಂಬಂಧದಲ್ಲಿ ಇದ್ದರು ಎನ್ನಲಾಗಿತ್ತು. ಸಬೀರ್ ಕೂಡ ಐಶ್ವರ್ಯಾ ರೈ ಅವರನ್ನು ಮದುವೆಯಾಗಲು ಬಯಸಿದ್ದರು. ಆದರೆ, ಇದು ಸಾಧ್ಯವಾಗಲೇ ಇಲ್ಲ.
2 / 8
ಮಾರ್ಟಿನ್ ಹೆಂಡರ್ಸನ್ ಮತ್ತು ಐಶ್ವರ್ಯಾ ರೈ ಸಂಬಂಧದಲ್ಲಿದ್ದಾರೆ ಎಂದು ಹಲವಾರು ಮಾಧ್ಯಮ ವರದಿಗಳು ಹೇಳಿಕೊಂಡಿವೆ. 2004 ರಲ್ಲಿ ಬಿಡುಗಡೆಯಾದ ‘ಬ್ರೈಡ್ ಆ್ಯಂಡ್ ಪ್ರಿಜುಡೀಸ್’ ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡರು.
3 / 8
‘ಧೂಮ್ 2' ಚಿತ್ರದಲ್ಲಿ ಐಶ್ವರ್ಯಾ ರೈ ಮತ್ತು ಹೃತಿಕ್ ರೋಷನ್ ಒಟ್ಟಿಗೆ ನಟಿಸಿದರು. ಈ ಸಿನಿಮಾ 2006ರಲ್ಲಿ ರಿಲೀಸ್ ಆಯಿತು. ಚಿತ್ರದಲ್ಲಿ ಐಶ್ವರ್ಯಾ ರೈ ಮತ್ತು ಹೃತಿಕ್ ನಡುವೆ ಕಿಸ್ಸಿಂಗ್ ದೃಶ್ಯವೂ ಇತ್ತು. ಈ ಸಿನಿಮಾ ವೇಳೆ ಇಬ್ಬರ ಡೇಟಿಂಗ್ ವಿಚಾರ ಚರ್ಚೆಯ ಬಿಂದುವಾಯಿತು.
4 / 8
ಐಶ್ವರ್ಯಾ ರೈ ತಮ್ಮ ಮಾಡೆಲಿಂಗ್ ವೃತ್ತಿಜೀವನದ ಸಮಯದಲ್ಲಿ ರಾಜೀವ್ ಮುಲ್ಚಂದಾನಿ ಅವರನ್ನು ಭೇಟಿಯಾದರು. ಅವರ ಸ್ನೇಹ ಕಾಲಕ್ರಮೇಣ ಪ್ರೀತಿಗೆ ತಿರುಗಿತು. ನಂತರ, ಐಶ್ವರ್ಯಾ ಮತ್ತು ರಾಜೀವ್ ಅವರ ಸಂಬಂಧದ ಬಗ್ಗೆ ಮಾತುಗಳು ಜೋರಾಯಿತು. ಆದರೆ ಅವರ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ಐಶ್ವರ್ಯಾ ಪ್ರಸಿದ್ಧರಾದ ತಕ್ಷಣ ರಾಜೀವ್ ಅವರನ್ನು ಪಕ್ಕಕ್ಕೆ ತಳ್ಳಿದರು ಎಂದು ಹೇಳಲಾಗುತ್ತದೆ.
5 / 8
1999ರ ‘ಹಮ್ ದಿಲ್ ದೇ ಚುಕೆ ಸನಮ್’ ಚಿತ್ರದಲ್ಲಿ ಸಲ್ಮಾನ್ ಮತ್ತು ಐಶ್ವರ್ಯಾ ಜೋಡಿಯನ್ನು ಅಭಿಮಾನಿಗಳು ಇಷ್ಟಪಟ್ಟರು. ತೆರೆಯ ಹೊರಗೆಯೂ ಸಹ, ಅವರ ಜೋಡಿ ಅಭಿಮಾನಿಗಳಿಂದ ಅಪಾರ ಪ್ರೀತಿಯನ್ನು ಪಡೆಯಿತು. ಆದರೆ ಇಬ್ಬರ ನಡುವಿನ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ಬ್ರೇಕಪ್ ಸಮಯದಲ್ಲಿ, ಐಶ್ವರ್ಯಾ ಅವರು ಸಲ್ಮಾನ್ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದರು.
6 / 8
ಐಶ್ವರ್ಯಾ ರೈ ಹಾಗೂ ವಿವೇಕ್ ಒಬೆರಾಯ್ ಅವರ ಹೆಸರು ಸಾಕಷ್ಟು ಚಾಲ್ತಿಯಲ್ಲಿ ಇತ್ತು. ಸಲ್ಮಾನ್ ಖಾನ್ ಅವರಿಂದ ವಿಚ್ಛೇದನ ಪಡೆದ ನಂತರ ವಿವೇಕ್ಅವರು ಐಶ್ವರ್ಯಾ ಜೀವನದಲ್ಲಿ ಪ್ರವೇಶಿಸಿದರು. ಆದರೆ ಅವರ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ.
7 / 8
ಆ ಬಳಿಕ ಅಭಿಷೇಕ್ ಹಾಗೂ ಐಶ್ವರ್ಯಾ ಮಧ್ಯೆ ಪ್ರೀತಿ ಮೂಡಿತು. ಇವರ ಪ್ರೀತಿಗೆ ಯಾರೊಬ್ಬರೂ ಅಡ್ಡಿ ಆಗಲೇ ಇಲ್ಲ. ಈ ಕಾರಣಕ್ಕೆ ಇವರು ಮದುವೆ ಆದರು. ಇವರು ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. 2007ರಲ್ಲಿ ಇವರ ವಿವಾಹ ನೆರವೇರಿದೆ. ಈ ದಂಪತಿಗೆ ಆರಾಧ್ಯಾ ಹೆಸರಿನ ಮಗಳಿದ್ದಾಳೆ.