Updated on: Apr 21, 2023 | 6:15 AM
ಆಪಲ್ ಸೈಡರ್ ವಿನೆಗರ್(Apple Cider Vinegar): ಆಪಲ್ ಸೈಡರ್ ವಿನೆಗರ್ ಅನ್ನು ನೀರಿನೊಂದಿಗೆ ಸೇರಿಸಿ ಮತ್ತು ಹತ್ತಿ ಉಂಡೆಯಿಂದ ಸಮಸ್ಯೆಯಾದ ಪ್ರದೇಶಕ್ಕೆ ಹಚ್ಚಬೇಕು. ಆಪಲ್ ಸೈಡರ್ ವಿನೆಗರ್ ತುರಿಕೆ ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಓಟ್ ಮೀಲ್ ಸ್ನಾನ(Oatmeal baths): ಓಟ್ ಮೀಲ್ನಲ್ಲಿ ಸ್ನಾನ ಮಾಡುವುದರಿಂದ ತುರಿಕೆ, ಊತ ಚರ್ಮವನ್ನ ಶಮನಗೊಳಿಸಲು ಸಹಾಯ ಮಾಡುತ್ತದೆ. ಒಂದು ಕಪ್ ನುಣ್ಣಗೆ ಅರೆದ ಓಟ್ ಮೀಲ್ ಅನ್ನು ಬೆಚ್ಚಗಿನ ನೀರಿಗೆ ಸೇರಿಸಿ ಮತ್ತು 15-20 ನಿಮಿಷಗಳ ಬಿಟ್ಟು ಸ್ನಾನ ಮಾಡಬೇಕು.
ಕ್ಯಾಮೊಮೈಲ್(Chamomile): ಕ್ಯಾಮೊಮೈಲ್ ಇದು ಉರಿಯೂತದ ಮತ್ತು ತುರಿಕೆಯನ್ನ ನಿವಾರಿಸುವ ಗುಣಗಳನ್ನು ಹೊಂದಿದೆ. ಒಂದು ಕಪ್ ಕ್ಯಾಮೊಮೈಲ್ ಟೀಯನ್ನ ಕುದಿಸಿ ಮತ್ತು ಅದನ್ನು ತಣ್ಣಗಾಗಲು ಬಿಡಿ. ಬಳಿಕ ಹತ್ತಿಯಿಂದ ಸಮಸ್ಯೆಯಾದ ಪ್ರದೇಶಕ್ಕೆ ಅದನ್ನ ಲೇಪಿಸಿ.
ಅಲೋವೆರಾ(Aloe vera): ಅಲೋವೆರಾ ನೈಸರ್ಗಿಕ ಉರಿಯೂತ ನಿವಾರಕವಾಗಿದೆ ಮತ್ತು ಕಿರಿಕಿರಿಗೊಂಡ ಚರ್ಮವನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. ಅಲೋವೆರಾ ಜೆಲ್ ಅನ್ನು ನೇರವಾಗಿ ಪೀಡಿತ ಪ್ರದೇಶಕ್ಕೆ ಅನ್ವಯಿಸಿ.
ತೆಂಗಿನ ಎಣ್ಣೆ: ಪೀಡಿತ ಪ್ರದೇಶಕ್ಕೆ ತೆಂಗಿನ ಎಣ್ಣೆಯನ್ನು ಅನ್ವಯಿಸುವುದರಿಂದ ಚರ್ಮವನ್ನು ತೇವಗೊಳಿಸಲು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.