Summer Vacation: ಬೇಸಿಗೆಯಲ್ಲಿ ಹಿಮಾಚಲದ ಈ ತಾಣಗಳಿಗೆ ಭೇಟಿ ನೀಡಿ

|

Updated on: Apr 08, 2023 | 3:15 PM

ಮಕ್ಕಳಿಗೆ ಇನ್ನೇನು ರಜೆ ಪ್ರಾರಂಭವಾಗುತ್ತಿದೆ. ಆದರೆ ಈ ಬಿಸಿಲಿಗೆ ಎಲ್ಲೂ ಹೋಗಲು ಮನಸ್ಸಿಲ್ಲ ಅನ್ನುವವರೇ ಜಾಸ್ತಿ. ಆದ್ದರಿಂದ ಬೇಸಿಗೆಯಲ್ಲಿ ಭೇಟಿ ನೀಡಲು ಯೋಗ್ಯವಾದ ಪ್ರದೇಶಗಳ ಕುರಿತು ಮಾಹಿತಿ ಇಲ್ಲಿದೆ.

1 / 7
ಮಕ್ಕಳಿಗೆ ಇನ್ನೇನು ರಜೆ ಪ್ರಾರಂಭವಾಗುತ್ತಿದೆ. ಆದರೆ ಈ ಬಿಸಿಲಿಗೆ ಎಲ್ಲೂ ಹೋಗಲು ಮನಸ್ಸಿಲ್ಲ ಅನ್ನುವವರೇ ಜಾಸ್ತಿ. ಆದ್ದರಿಂದ ಬೇಸಿಗೆಯ ರಜಾ ದಿನಗಳಲ್ಲಿ ಹಿಮಾಚಲದ ಈ ತಾಣಗಳಿಗೆ ಭೇಟಿ ನೀಡಿ.

2 / 7
ತೀರ್ಥನ್​​ ಕಣಿವೆ: ಸಮುದ್ರ ಮಟ್ಟದಿಂದ 1600 ಮೀಟರ್ ಎತ್ತರದಲ್ಲಿರುವ ಈ ಕಣಿವೆ ಬೇಸಿಗೆಯ ಪ್ರವಾಸಕ್ಕೆ ಉತ್ತಮ ತಾಣವಾಗಿದೆ. ಪ್ರಕೃತಿ ಪ್ರಿಯರಿಗಂತೂ ಈ ಸ್ಥಳ ಖಂಡಿತವಾಗಿಯೂ ಇಷ್ಟವಾಗುತ್ತದೆ.

3 / 7
ಶೋಗಿ: ಶಿಮ್ಲಾದಿಂದ ಸುಮಾರು 13ಕಿ.ಮೀ ದೂರದಲ್ಲಿರುವ ಶೋಗಿಯು ಮತ್ತೊಂದು ರಮಣೀಯ ಸ್ಥಳವಾಗಿದೆ. ಇಲ್ಲಿ ನೀವು ವೈವಿಧ್ಯಮಯ ಸಸ್ಯ ಹಾಗೂ ಪ್ರಾಣಿಗಳನ್ನು ಕಾಣಬಹುದು. ಜೊತೆಗೆ ದೇವಾಲಯಗಳಿಗೂ ಭೇಟಿ ನೀಡಬಹುದು.

4 / 7
ಜಿಭಿ: ತೀರ್ಥನ್​​​ ಕಣಿವೆಯಲ್ಲಿ ನೆಲೆಗೊಂಡಿರುವ ಈ ಕಣಿವೆಯೂ ಸಣ್ಣ ಕುಗ್ರಾಮವಾಗಿದ್ದು, ಸಂಪೂರ್ಣವಾಗಿ ಹಚ್ಚ ಹಸಿರಿನಿಂದ ಕೂಡಿರುತ್ತದೆ. ಸಿಹಿನೀರಿನ ಸರೋವರಗಳು, ದಟ್ಟವಾದ ಕಾಡು ಮತ್ತು ಪ್ರಾಚೀನ ದೇವಾಲಯವನ್ನು ನೀವಿಲ್ಲಿ ಕಣ್ತುಂಬಿಸಿಕೊಳ್ಳಬಹುದು.

5 / 7
ಫಾಗು : ಈ ಪ್ರಶಾಂತ ಕುಗ್ರಾಮವು ಯಾವಾಗಲೂ ಹಿಮ ಮತ್ತು ಮಂಜಿನಿಂದ ಆವೃತವಾಗಿರುವುದನ್ನು ಕಾಣಬಹುದು. 2450 ಮೀ ಎತ್ತರದಲ್ಲಿರುವ ಈ ತಾಣದಲ್ಲಿ ರಮಣೀಯ ನೋಟಗಳನ್ನು ಆನಂದಿಸಬಹುದು. ಇಲ್ಲಿನ ಬಹುತೇಕ ರಸ್ತೆಗಳು ಸೇಬಿನಿಂದ ತುಂಬಿರುತ್ತದೆ.

6 / 7
ಕಸೌಲಿ: ಇಲ್ಲಿನ ಸುಂದರವಾದ ಪಾದಯಾತ್ರೆಯ ಹಾದಿಗಳು ಸಂಪೂರ್ಣವಾಗಿ ಹಿಮದಿಂದ ಆವೃತವಾಗಿರುವುದನ್ನು ಕಾಣಬಹುದು. ಅತ್ಯಂತ ಶಾಂತಿಯಿಂದ ಆವೃತವಾಗಿರುವ ಈ ಪ್ರದೇಶ ಹಿಮಾಚಲ ಪ್ರದೇಶದ ಅತ್ಯುತ್ತಮ ರಜಾ ತಾಣವಾಗಿದೆ.

7 / 7
ಚಿತ್ಕುಲ್​​: ಹಿಮಾಚಲಪ್ರದೇಶದ ಕಿನ್ನೌರ್​​ ಜಿಲ್ಲೆಯ ಒಂದು ಹಳ್ಳಿ ಇದಾಗಿದ್ದು, ಭಾರತ ಮತ್ತು ಚೀನಾ ಗಡಿಯಲ್ಲಿದೆ. ನೀವಿಲ್ಲಿ ಬೇಸಿಗೆಯಲ್ಲಿಯೂ ಕೂಡ ಹಚ್ಚಹಸಿರಿನ ಬೆಟ್ಟ ಗುಡ್ಡವನ್ನು ಕಣ್ತುಂಬಿಸಿಕೊಳ್ಳಬಹುದು.