- Kannada News Photo gallery some creative watermelon recipe that can be prepared in summer Lifestyle News in kannada
ಬೇಸಿಗೆಯಲ್ಲಿ ತಯಾರಿಸಿ ಕಲ್ಲಂಗಡಿ ಹಣ್ಣಿನ ಸೃಜನಾತ್ಮಕ ಪಾಕವಿಧಾನ
ಕಲ್ಲಂಗಡಿ ಬೇಸಿಗೆಯಲ್ಲಿ ಸೇವಿಸುವ ಪ್ರಧಾನ ಹಣ್ಣಾಗಿದೆ. ಆದರೆ ಈ ಹಣ್ಣನ್ನು ಕತ್ತರಿಸಿ ಸರಳವಾಗಿ ತಿನ್ನುವುದಕ್ಕಿಂತ, ಆ ಹಣ್ಣಿನಿಂದ ವಿಶಿಷ್ಟ ಪಾಕವಿಧಾನವನ್ನು ಮಾಡಿ ಸವಿಯಬಹುದು. ಕಲ್ಲಂಗಡಿ ಹಣ್ಣಿನ ಸೃಜನಾತ್ಮಕ ಪಾಕವಿಧಾನ ಇಲ್ಲಿದೆ.
Updated on:Apr 08, 2023 | 3:27 PM

ಬೇಸಿಗೆಯಲ್ಲಿ ಹೆಚ್ಚಿನ ಜನರು ಕಲ್ಲಂಗಡಿ ಹಣ್ಣನ್ನು ಸೇವನೆ ಮಾಡುತ್ತಾರೆ. ಇದು ನಮ್ಮ ದೇಹದಲ್ಲಿ ನೀರಿನಾಂಶವನ್ನು ಹೆಚ್ಚಿಸುವುದರ ಜತೆಗೆ ತಂಪಾಗಿರಿಸುತ್ತದೆ. ಆದರೆ ಈ ಕಲ್ಲಂಗಡಿ ಹಣ್ಣನ್ನು ಸರಳವಾಗಿ ಕತ್ತರಿಸಿ ತಿನ್ನುವುದಕ್ಕಿಂತ ಸರಳವಾಗಿ ಆ ಹಣ್ಣಿನಿಂದ ವಿಶಿಷ್ಟ ಪಾಕವಿಧಾನವನ್ನು ಮಾಡಿ ಸವಿಯಬಹುದು. ಈ ರೀತಿ ಮಾಡುವುದರಿಂದ ಮಕ್ಕಳು ಕೂಡಾ ಹಣ್ಣುಗಳನ್ನು ಹೆಚ್ಚಾಗಿ ಸೇವನೆ ಮಾಡಿದಂತಾಗುತ್ತದೆ. ಸಾಮಾನ್ಯವಾಗಿ ಮಕ್ಕಳು ಹಣ್ಣುಗಳನ್ನು ಹಾಗೆಯೇ ತಿನ್ನಲು ಇಷ್ಟ ಪಡುವುದಿಲ್ಲ. ಅವುಗಳಿಂದ ವಿಶೇಷವಾಗಿ ಏನನ್ನಾದರೂ ತಯಾರಿಸಿದರೆ ಅವರು ಸೇವಿಸುತ್ತಾರೆ. ಎಲ್ಲರಿಗೂ ಇಷ್ಟವಾಗುವ ಕಲ್ಲಂಗಡಿ ಹಣ್ಣಿನ ಸೃಜನಾತ್ಮಕ ಪಾಕವಿಧಾನಗಳು ಇಲ್ಲಿವೆ.

ಕಲ್ಲಂಗಡಿ ಸಾಲ್ಸಾ: ಕಲ್ಲಂಗಡಿ ಸಾಲ್ಸಾ ಬೇಸಿಗೆಯಲ್ಲಿ ಸೇವಿಸಲು ಪರಿಪೂರ್ಣವಾಗಿದೆ. ಚಿಪ್ಸ್, ಗ್ರಿಲ್ಡ್ ಚಿಕನ್ ಅಥವಾ ಮೀನಿನ ಸಿಹಿ ಮತ್ತು ಮಸಾಲೆಯುಕ್ತ ಸಾಲ್ಸಾವನ್ನು ಚೌಕಾಕಾರದಲ್ಲಿ ಕತ್ತರಿಸಿದ ಕಲ್ಲಂಗಡಿ ಹಣ್ಣು, ಜಲಪೆನೊ, ಈರುಳ್ಳಿ ಮತ್ತು ನಿಂಬೆ ರಸವನ್ನು ಸೇರಿಸಿ. ಇದರ ಮೂಲಕ ಕಲ್ಲಂಗಡಿ ಹಣ್ಣಿನಿಂದ ಹೊಸ ರುಚಿಯನ್ನು ಸವಿಯಬಹುದು.

ಕಲ್ಲಂಗಡಿ ಸಲಾಡ್: ಬೇಸಿಗೆಯಲ್ಲಿ ಒಂದು ಕಪ್ ಫ್ರುಟ್ಸ್ ಸಲಾಡ್ ಇರಲೇಬೇಕು. ಮತ್ತು ಕಲ್ಲಂಗಡಿ ಹಣ್ಣಿನಿಂದ ವಿಶೇಷವಾದ ಸಲಾಡ್ ಮಾಡಿಕೊಳ್ಳಬಹುದು. ಕಲ್ಲಂಗಡಿ ತುಂಡುಗಳು, ಫೆಟಾ ಚೀಸ್ ಮತ್ತು ತಾಜಾ ಪುದೀನಾ ಎಲೆಗಳನ್ನು ಸೇರಿಸಿ ಸಲಾಡ್ ತಯಾರಿಸಿಕೊಳ್ಳಿ. ಮತ್ತು ಅದರ ರುಚಿಯನ್ನು ಹೆಚ್ಚಿಸಲು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ.

ಕಲ್ಲಂಗಡಿ ಸ್ಮೂಥಿ: ರಿಫ್ರೆಶ್ ಮತ್ತು ಆರೋಗ್ಯಕರ ಬೇಸಿಗೆ ಸ್ಮೂಥಿಯನ್ನು ಕಲ್ಲಂಗಡಿ ಹಣ್ಣಿನಿಂದ ತಯಾರಿಸಿಕೊಳ್ಳಿ. ಕಲ್ಲಂಗಡಿ ತುಂಡುಗಳು, ಮೊಸರು ಮತ್ತು ಐಸ್‌ಕ್ಯೂಬ್‌ಗಳನ್ನು ಮಿಶ್ರಣ ಮಾಡಿ ಈ ರುಚಿಕರವಾದ ಸ್ಮೂಥಿ ತಯಾರಿಸಿ ಕುಡಿಯಿರಿ. ಇದು ರುಚಿಕರ ಮಾತ್ರವಲ್ಲದೆ ನಿಮ್ಮ ದೇಹಕ್ಕೆ ಉತ್ತಮವಾದ ಮಿಟಮಿನ್‌ಗಳು ಮತ್ತು ಪೋಷಕಾಂಶಗಳನ್ನು ನೀಡುತ್ತದೆ.

ಕಲ್ಲಂಗಡಿ ಪಾನಕ: ಕಲ್ಲಂಗಡಿ ಹಣ್ಣಿನ ರಸವನ್ನು ರೆಫ್ರಿಜರೆಟರ್‌ನಲ್ಲಿ ಇಟ್ಟು ಐಸ್‌ಕ್ಯೂಬ್‌ಗಳಾಗಿ ತಯಾರಿಸಿಕೊಳ್ಳಿ. ಮತ್ತು ಅವುಗಳನ್ನು ಮನೆಯಲ್ಲಿಯೇ ತಯಾರಿಸಬಹುದಾದ ನಿಂಬೆ ಪಾನಕದ ಜೊತೆ ಮಿಶ್ರಣ ಮಾಡಿ ಕುಡಿಯಿರಿ.

ಕಲ್ಲಂಗಡಿ ಮಾರ್ಗರಿಟಾಸ್: ತಾಜಾ ಕಲ್ಲಂಗಡಿ ಹಣ್ಣಿನ ರಸ, ನಿಂಬೆ ರಸ, ಟಕೀಲಾವನ್ನು ಮಿಶ್ರಣ ಮಾಡಿ ಕಾಕ್ಟೆಲ್ ರೂಪದಲ್ಲಿ ಸೇವಿಸಬಹುದು. ಈ ಪಾನೀಯವು ಬೇಸಿಗೆಯ ಪಾರ್ಟಿಗಳಿಗೆ ಪರಿಪೂರ್ಣವಾಗಿದೆ.

ಕಲ್ಲಂಗಡಿ ಕೆಗ್: ದೊಡ್ಡ ಕಲ್ಲಂಗಡಿ ಹಣ್ಣನ್ನು ಮೇಲ್ಭಾಗದಿಂದ ಸ್ವಲ್ಪ ಕತ್ತರಿಸಿ ಹಣ್ಣನ್ನು ಸ್ಕೂಪ್ ಮಾಡಿ ಅದಕ್ಕೆ ಕಾಕ್ಟೆಲ್‌ನ್ನು ಸೇರಿಸಿ, ಸವಿಯಿರಿ. ಇದು ಕೂಡಾ ಬೇಸಿಗೆಯಲ್ಲಿ ಪಾರ್ಟಿಗಳಿಗೆ ಸೂಕ್ತವಾದ ಪಾನೀಯವಾಗಿದೆ.

ಕಲ್ಲಂಗಡಿ ಪಾಪ್ಸಿಕಲ್ಸ್: ಈ ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣನ್ನು ಆನಂದಿಸಲು ಇದು ಇನ್ನೊಂದು ಸೃಜನಾತ್ಮಕ ಮಾರ್ಗವಾಗಿದೆ. ಕಲ್ಲಂಗಡಿ ಹಣ್ಣನ್ನು ಜೇನುತುಪ್ಪ, ನಿಂಬೆರಸ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಆ ಮಿಶ್ರಣವನ್ನು ಪಾಪ್ಸಿಕಲ್ ಅಚ್ಚುಗಳಲ್ಲಿ ಸುರಿಯಿರಿ. ಅವುಗಳನ್ನು ಕನಿಷ್ಟ 4 ಗಂಟೆಗಳ ಕಾಲ ರೆಫ್ರಿಜರೇಟರ್‌ನಲ್ಲಿ ಇಟ್ಟು ನಂತರ ಸವಿಯಿರಿ.
Published On - 3:27 pm, Sat, 8 April 23




