ಚುನಾವಣೆ ಕರ್ತವ್ಯ ನಿರ್ವಹಿಸಲು ಬಂದಿರುವ ಯೋಧರಿಗೆ ಆ ಊರಿನ ಜನರು ನೀಡಿದ ಸ್ವಾಗತ ಹೇಗಿತ್ತು ಗೊತ್ತಾ? ಇಲ್ಲಿದೆ ನೋಡಿ

ಅವರೆಲ್ಲಾ ದೇಶದ ಗಡಿಯಲ್ಲಿದ್ದು ತಮ್ಮ ಪ್ರಾಣದ ಹಂಗನ್ನು ತೊರೆದು ದೇಶ ಕಾಯೋ ಸೈನಿಕರು, ಸದ್ಯ ಕರ್ನಾಟಕದಲ್ಲಿ ನಡೆಯುವ ಚುನಾವಣೆ ಹಿನ್ನೆಲೆ ಅಕ್ರಮ, ಅನ್ಯಾಯ, ಕಾನೂನು ಸುವ್ಯವಸ್ಥೆ ತಡೆಯಲು ದೇಶದ ಒಳಗೆ ಕರ್ತವ್ಯ ನಿರ್ವಹಿಸಲು ಬಂದಿರುವ ಯೋಧರು. ಆ ಯೋಧರಿಗೆ ಆ ಊರಿನ ಜನರು ನೀಡಿದ ಸ್ವಾಗತ ಹೇಗಿತ್ತು ಗೊತ್ತಾ? ಇಲ್ಲಿದೆ ನೋಡಿ

ಕಿರಣ್ ಹನುಮಂತ್​ ಮಾದಾರ್
|

Updated on: Apr 08, 2023 | 1:41 PM

ನಗರದ ಪ್ರಮುಖ ಬೀದಿಗಳಲ್ಲಿ ಗನ್​ ಹಿಡಿದು ಹೆಜ್ಜೆ ಹಾಕುತ್ತಿರುವ ಯೋಧರಿಗೆ, ಪೊಲೀಸರಿಗೆ, ಅಧಿಕಾರಿಗಳಿಗೆ ತಿಲಕ ಇಟ್ಟು ಹೂವಿನ ಮಳೆ ಸುರಿಸಿ ಸ್ವಾಗತ ಕೋರುತ್ತಿರುವ ಮಹಿಳೆಯರು, ಮಕ್ಕಳು, ಬೂದುಕುಂಬಳ ಕಾಯಿಯಿಂದ ದೃಷ್ಟಿ ತೆಗೆದು ಈಡುಗಾಯಿ ಹೊಡೆದು ಸ್ವಾಗತ ಕೋರುತ್ತಿರುವ ಯುವಕರು. ಇನ್ನೊಂದೆಡೆ ಹಣ್ಣು, ಪಾನಕ, ನೀರು ಮಜ್ಜಿಗೆ, ನೀಡಿ ಅಭಿಮಾನ ಪ್ರದರ್ಶಿಸುತ್ತಿರುವ ಸಾರ್ವಜನಿಕರು ಇದೆಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೋಲಾರ ನಗರದಲ್ಲಿ.

1 / 9
ಹೌದು ಚುನಾವಣೆ ಹಿನ್ನಲೆ ಐದು ಕಂಪನಿ ಗಡಿ ಭದ್ರತಾ ಸಿಬ್ಬಂದಿ ಹಾಗೂ ಯೋಧರ ಟೀಂ ಕೋಲಾರಕ್ಕೆ ಬಂದಿಳಿದಿದೆ. ಈ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲಾಡಳಿತ ನಗರದಲ್ಲಿ ರೂಟ್ ಮಾರ್ಚ್ ಮಾಡಿ ಜಾಗೃತಿ ಮೂಡಿಸಲು ಮುಂದಾಗಿತ್ತು. ಜಿಲ್ಲಾಧಿಕಾರಿ ವೆಂಕಟರಾಜಾ, ಎಸ್ಪಿ ನಾರಾಯಣ, ಸಿಇಓ ಯುಕೇಶ್ ಕುಮಾರ್ ಖುದ್ದು ರೋಡ್ ಮಾರ್ಚ್ ನಲ್ಲಿ ಭಾಗವಹಿಸಿ ಕೋಲಾರ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ್ರು. ಬಿಎಸ್‌ಎಫ್ ಯೋಧರು, ಪೊಲೀಸರೊಂದಿಗೆ ಹೆಜ್ಜೆ ಹಾಕಿದ ಅಧಿಕಾರಿಗಳಿಗೆ ದಾರಿಯುದ್ದಕ್ಕೂ ಜನರು ಹೂವಿನ ಮಳೆಗರೆದು ಸ್ವಾಗತ ಕೋರಿದರು.

2 / 9
ವಿವಿಧ ಸಂಘಟನೆಗಳ ಮುಖಂಡರು, ವಿದ್ಯಾರ್ಥಿಗಳು, ಪುಟಾಣಿ ಮಕ್ಕಳು ಕೂಡ ಯೋಧರಿಗೆ ಹಾಗೂ ಅಧಿಕಾರಿಗಳಿಗೆ ಅದ್ದೂರಿ ಸ್ವಾಗತ ಕೋರಿ ತಮ್ಮ ಅಭಿಮಾನ ಮೆರೆದರು. ಇನ್ನು ಅಮ್ಮವಾರಿಪೇಟೆ ವೃತ್ತದಲ್ಲಿ ಮಜ್ಜಿಗೆ ಪಾನಕ ವಿತರಣೆ ಮಾಡಿದ್ರೆ, ಹೊಸ ಬಸ್ ನಿಲ್ದಾಣ ವೃತ್ತದಲ್ಲಿ ಮಹಿಳೆಯರು ಯೋಧರಿಗೆ ತಿಲಕವಿಟ್ಟು, ಹಣ್ಣು ಕೊಟ್ಟು ಸ್ವಾಗತ ಕೋರಿದರು.

3 / 9
ನಗರದ ಕ್ಲಾಕ್ ಟವರ್ ವೃತ್ತದಲ್ಲಿ ಮುಸ್ಲಿಂ ಸಮುದಾಯದ ಜನರು ಹೂಚೆಲ್ಲಿ ಗುಲಾಬಿ ಹೂವು ನೀಡಿ ಸ್ವಾಗತ ಕೋರಿ, ಯೋಧರಿಗೆ ತಂಪು ಪಾನೀಯ ನೀಡಿದ್ರು. ಇನ್ನು ಡೂಂ ಲೈಟ್ ವೃತ್ತದಲ್ಲಿ ರೆಡ್ ಕಾರ್ಪೆಟ್ ಹಾಕಿ, ಬೂದಕುಂಬಳಕಾಯಿ ಹಾಗೂ ಈಡುಗಾಯಿ ಹೊಡೆದು ಹೂ ಗುಚ್ವ ನೀಡಿ ಸ್ವಾಗತ ಕೋರಲಾಯಿತು.

4 / 9
ಕಾನೂನುಬದ್ಧವಾಗಿ ಚುನಾವಣೆ ನಡೆಸಲು ಮತದಾರರಲ್ಲಿ ಭರವಸೆ ತುಂಬುವ ಕೆಲಸ ಮಾಡುತ್ತಿದ್ದೇವೆ. ಯಾರೂ ಭಯ ಪಡುವ ಅಗತ್ಯ ಇಲ್ಲ. ಎಲ್ಲರೂ ಚುನಾವಣೆಯಲ್ಲಿ ನಿರ್ಭೀತಿಯಿಂದ ಪಾಲ್ಗೊಳ್ಳಿ ಎನ್ನುವ ಸಂದೇಶವನ್ನು ನೀಡಲಾಯಿತು.

5 / 9
ಇನ್ನು ಪಥಸಂಚಲನವು ಅರಹಳ್ಳಿ ಗೇಟ್ ನಿಂದ ಪ್ರಾರಂಭವಾಗಿ ಅಮ್ಮವಾರಿಪೇಟೆ ಸರ್ಕಲ್, ಹೊಸಬಸ್ ನಿಲ್ದಾಣ, ಕ್ಲಾಕ್ ಟವರ್, ಡೂಂಲೈಟ್, ಗಾಂಧಿವನ, ಎಂಜಿ ರಸ್ತೆ ಮೂಲಕ ಕಾಲೇಜು ಸರ್ಕಲ್, ಮೆಕ್ಕೆ ವೃತ್ತದಲ್ಲಿ ಕೊನೆಗೊಂಡಿತು.

6 / 9
ಪಂಥಸಂಚಲನದ ಉದ್ದಕ್ಕೂ ಅಧಿಕಾರಿಗಳು ಹಾಗೂ ಬಿಎಸ್‌ಎಫ್ ಯೋಧರಿಗೆ ಸಾರ್ವಜನಿಕರು ಹೂವ ಮಳೆ ಸುರಿಸಿ ಭವ್ಯ ಸ್ವಾಗತ ನೀಡಿದರು. ಚುನಾವಣೆ ಸಂದರ್ಭದಲ್ಲಿ ಸೂಕ್ಷ್ಮ ಜಿಲ್ಲೆಯಾಗಿರುವ ಕೋಲಾರದಲ್ಲಿ ಚುನಾವಣೆಯನ್ನು ಸುಗಮವಾಗಿ ನಡೆಸುವ ನಿಟ್ಟಿನಲ್ಲಿ ಜಿಲ್ಲೆಗೆ ಐದು ಬಿಎಸ್‌ಎಫ್ ತುಗಡಿಗಳು ಬಂದಿವೆ.

7 / 9
ಒಂದು ತುಕಡಿಯಲ್ಲಿ ಸುಮಾರು 120 ಜನ ಯೋಧರಿರುತ್ತಾರೆ. ಸದ್ಯ ಎಲ್ಲರೂ ಚುನಾವಣೆ ಮುಗಿಯವವರೆಗೂ ಕೋಲಾರ ಜಿಲ್ಲೆಯಲ್ಲೇ ಬಿಡಾರ ಹೂಡಲಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಜನರು ಮುಕ್ತ ಹಾಗೂ ನಿರ್ಭಿತಿಯಿಂದ ಮತದಾನ ಮಾಡಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ತೋಳ್ಬಲ, ಜಾತಿ, ಹಣ ಬಲದಿಂದ ಭಯ ಬೀಳಿಸುವವರಿಗೆ ಇದು ಎಚ್ಚರಿಕೆ ಸಂದೇಶ ಎನ್ನುವಂತೆ ನಗರದಲ್ಲಿ ಪೊಲೀಸರು ಹಾಗೂ ಯೋಧರು ಅಧಿಕಾರಿಗಳು ಶಕ್ತಿ ಪ್ರದರ್ಶನ ಮಾಡಿ ಜನರಿಗೆ ಮಾನಸಿಕ ಸ್ಥೈರ್ಯ ತುಂಬಿದರು.

8 / 9
ಒಟ್ಟಾರೆ ದೇಶದ ಗಡಿ ಕಾಯೋ ಯೋಧರು ಕೋಲಾರದಲ್ಲಿ ಚುನಾವಣಾ ಕರ್ತವ್ಯಕ್ಕೆ ಬಂದಿದ್ದು, ಯೋಧರನ್ನು ಕೋಲಾರದ ಜನರು ದೇವರಂತೆ ತಿಲಕವಿಟ್ಟು ಹೂವು ಹಾಕಿ ಹಣ್ಣು ಕಾಯಿ ಹೊಡೆದು ಪೂಜೆ ಸಲ್ಲಿಸುವ ಮೂಲಕ ಯೋಧರಿಗೆ ಅದ್ದೂರಿ ಸ್ವಾಗತ ನೀಡಿದ್ದಾರೆ. ಈ ಮೂಲಕ ದೇಶ ಕಾಯುವ ಯೋಧರಿಗೆ ಕೋಲಾರದ ಜನ ತಮ್ಮ ಜೀವ ಕಾಯೋ ದೇವರಂತೆ ಗೌರವಿಸಿದ್ದು ನಿಜಕ್ಕೂ ಶ್ಲಾಘನೀಯ.

9 / 9
Follow us
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ