ಭಾರತೀಯ ನೃತ್ಯಕ್ಕೆ ಮನಸೋತ ವಿದೇಶಿ ಜೋಡಿಯೊಂದು, ಇಲ್ಲಿನ ನೃತ್ಯ ಪ್ರಕಾರದ ಕಲೆಗಳ ಪ್ರದರ್ಶನವನ್ನ ವೀಕ್ಷಣೆ ಮಾಡಿದ್ದು, ಅದರ ಝಲಕ್​ ಇಲ್ಲಿದೆ ನೋಡಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 17, 2023 | 11:28 AM

ಜಾಗತೀಕರಣದ ರೇಸ್​ನಲ್ಲಿ ಓಡುತ್ತಿರುವ ನಾವು ಪಾಶ್ಚಿಮಾತ್ಯ ಆಚರಣೆಗಳನ್ನು ಮೈದುಂಬಿಸಿಕೊಳ್ಳುತ್ತಾ ದೇಶಿ ಸಂಸ್ಕೃತಿಯನ್ನು ಅಳಿಸಿ ಹಾಕುತ್ತಿದ್ದೇವೆ. ಇದಕ್ಕೆ ತದ್ವಿರುದ್ದ ಎಂಬಂತೆ ಭಾರತೀಯ ಪದ್ದತಿಗಳ ನೃತ್ಯಕ್ಕೆ ಮಾರು ಹೋದ ವಿದೇಶಿ ಜೋಡಿ ಇಲ್ಲಿಗೆ ಬಂದು ಭಾರತೀಯ ನೃತ್ಯ ಪ್ರಕಾರದ ಕಲೆಗಳ ಪ್ರದರ್ಶನವನ್ನ ವೀಕ್ಷಣೆ ಮಾಡಿದ್ದಾರೆ.

1 / 8
ಕಥಕ್ ಹಾಗೂ ಭರತನಾಟ್ಯ ವೀಕ್ಷಣೆ ಮಾಡುತ್ತಿರುವ ವಿದೇಶಿ ಜೋಡಿ ತಾಳಕ್ಕೆ ತಕ್ಕಂತೆ ಹಾಕೋ ಹೆಜ್ಜೆಗಳಿಗೆ ಚಪ್ಪಾಳೆ ಹಾಕುತ್ತಿರೋ ಕಪಲ್. ತಬಲಾ ನುಡಿಸುವ ಮೂಲಕ ನೃತ್ಯಕ್ಕೆ ಸಾಥ್ ನೀಡಿದ ವಿದೇಶಿಗ. ಹಾಡು ಹಾಡೋ ಮೂಲಕ ನಾನೇನು ಕಮ್ಮಿ ಎಂದ ವಿದೇಶಿ ಲೇಡಿ. ಇಂದಿನ ಭರಾಟೆಯ ಜೀವನದಲ್ಲಿ ನಮ್ಮ ನೆಲದ ಸೊಗಡಿನ ವಿವಿಧ ಕಲೆಗಳು ಇತಿಹಾಸದ ಪುಟ ಸೇರುತ್ತಿವೆ. ಆದರೆ ದೂರದ ಲಂಡನ್ ನಗರದ  ನಿವಾಸಿಗಳಾದ ಕ್ರಿಸ್  ಹಿಲ್ಸ್ ಹಾಗೂ ರಾಚಿಲ್ ಹಿಲ್ಸ್ ದಂಪತಿಗೆ ನಮ್ಮ ಭಾರತೀಯ ನೃತ್ಯ ಪ್ರಕಾರಗಳು ಎಂದರೆ ಎಲ್ಲಿಲ್ಲದ ಹಿಗ್ಗು.

2 / 8
ಮೊದಲಿನಿಂದಲೂ ಹಿಲ್ಸ್ ದಂಪತಿಗೆ ಸಂಗೀತ ಹಾಗೂ ನೃತ್ಯವೆಂದರೆ ಪಂಚಪ್ರಾಣ. ಅದರಲ್ಲೂ ಭಾರತೀಯ ವಿವಿಧ ಸಂಗೀತ ಹಾಗೂ ನೃತ್ಯವೆಂದರೆ ಇನ್ನೂ ಇಷ್ಟ. ಅದಕ್ಕಾಗಿಯೇ ಇವರು 18 ವರ್ಷಗಳ ಹಿಂದೆ ಶ್ರೀ ರವಿಶಂಕರ ಗುರೂಜಿ ಅವರು ಬಳಿ ಸಂಗೀತ ಕಲಿತಿದ್ದಾರೆ. ಇನ್ನು ಕ್ರಿಸ್ ಹಿಲ್ಸ್ ತಬಲಾ, ಡೋಲಕ್, ಮೃದಂಗ್, ಸಿತಾರ್, ಹಾರ್ಮೋನಿಯಂ ನುಡಿಸೋದರಲ್ಲಿ ಪ್ರವೀಣರಾಗಿದ್ದಾರೆ.

3 / 8
ಈ ರೀತಿ ಭಾರತೀಯ ಸಂಗೀತ ಹಾಗೂ ನೃತ್ಯವನ್ನು ಆರಾಧಿಸೋ ಈ ದಂಪತಿ ಪ್ರತಿ ವರ್ಷ ಭಾರತಕ್ಕೆ ಭೇಟಿ ನೀಡಿ ವಿವಿಧ ಪ್ರದೇಶಗಳಲ್ಲಿನ ನೃತ್ಯ ಹಾಗೂ ಸಂಗೀತವನ್ನು ವೀಕ್ಷಿಸಿ ಆಲಿಸಿ ಕಲಿಯುತ್ತಾರೆ. ಕೊರೊನಾ ಕಾರಣದಿಂದ ಮೂರು ವರ್ಷಗಳಿಂದ ಎಲ್ಲಿಯೂ ಪ್ರವಾಸ ಮಾಡದ ಇವರು ಇದೀಗ ವಿಜಯಪುರ ನಗರಕ್ಕೆ ಆಗಮಿಸಿದ್ದಾರೆ.

4 / 8
ನಗರದ ನವರಸ ನೃತ್ಯ ಕಲಾ ಸಂಸ್ಥೆಗೆ ಭೇಟಿ ನೀಡಿ ಭರತ ನಾಟ್ಯ ಹಾಗೂ ಕಥಕ್ ನೃತ್ಯವನ್ನು ಆಸ್ವಾಧಿಸಿದ್ದಾರೆ. ಇನ್ನು ಕ್ರಿಸ್ ಹಿಲ್ಸ್ ಭರತ ನಾಟ್ಯಕ್ಕೆ ತಬಲಾ ನುಡಿಸೋ ಮೂಲಕ ಸಾಥ್ ನೀಡಿ ಎಲ್ಲರೂ ಬೆರಗಾಗುವಂತೆ ಮಾಡಿದರು, ಕ್ರಿಸ್ ಪತ್ನಿ ರಾಚಿಲ್ ನಾನೇನು ಕಮ್ಮಿಯಿಲ್ಲಾ ಎಂಬಂತೆ ಪತಿಯ ತಬಲಾ ವಾದನಕ್ಕೆ ಇಂಗ್ಲೀಷ್​ನಲ್ಲಿ ಹಾಡು ಹಾಡಿ ಎಲ್ಲರೂ ಆಶ್ಚರ್ಯಚಕಿತರಾಗುವಂತೆ ಮಾಡಿದರು.

5 / 8
ಇದೇ ವೇಳೆ ಮಾತನಾಡಿದ ಹಿಲ್ಸ್ ದಂಪತಿ ಲಂಡನ್ನಿನ ಆಕ್ಸಫರ್ಡ್​ನಲ್ಲಿ ಭಾರತೀಯ ನೃತ್ಯ ಕಲಾ ಸಂಸ್ಥೆಯನ್ನು ಸ್ಥಾಪಿಸಿದ್ದೇವೆ, ಅಲ್ಲಿನ ಭಾರತೀಯರಿಗೆ ಹಾಗೂ ನಮ್ಮ ದೇಶದ ಜನರಿಗೆ ಭಾರತೀಯ ನೃತ್ಯಪ್ರಕಾರಗಳನ್ನು ಸಂಗೀತವನ್ನು ಕಲಿಸುತ್ತೇವೆ. ಭಾರತೀಯ ನೃತ್ಯ ಹಾಗೂ ಸಂಗೀತ ವೀಕ್ಷಿಸುವುದೇ ಒಂದು ಸಂತಸ. ಹಾಗಾಗಿ ಭಾರತಕ್ಕೆ ಬಂದು ನಾವು ವಿಭಿನ್ನ ಪ್ರದೇಶಗಳಲ್ಲಿ ಸುತ್ತಾಡಿ ಸಂಗೀತ ಹಾಗೂ ನೃತ್ಯದ ಕುರಿತು ಮಾಹಿತಿ ಪಡೆದು ಕಲಿಯುತ್ತೇವೆ. ಅದನ್ನೇ ಆಕ್ಸಫರ್ಡ್​ನಲ್ಲಿರೋ ಭಾರತೀಯ ನೃತ್ಯ ಕಲಾ ಸಂಸ್ಥೆಯಲ್ಲಿ ಕಲಿಸುತ್ತೇ ಎಂದರು.

6 / 8
ಕ್ರಿಸ್ ಹಾಗೂ ರಾಚಿಲ್ ದಂಪತಿ ನವರಸ ಕಲಾ ಸಂಸ್ಥೆಯಲ್ಲಿನ ಕಲಾವಿದರ ಜೊತೆ ಕಲಾವಿದರಾಗಿ ಹಾಗೂ ಪುಟ್ಟ ಪುಟ್ಟ ಮಕ್ಕಳೊಂದಿಗೆ ಮಕ್ಕಳಾಗಿ ಕಂಡು ಬಂದರು. ಕಥಕ್ ಹಾಗೂ ಭರತ ನಾಟ್ಯ ನೃತ್ಯ ಪ್ರಕಾರಗಳನ್ನು ತನ್ಮಯತೆಯಿಂದ ವೀಕ್ಷಣೆ ಮಾಡಿದರು. ಬಳಿಕ ನೆರೆದ ಎಲ್ಲಾ ಕಲಾವಿದರೂ ಮಾಡಿದ ಭರತ ನಾಟ್ಯ ನೃತ್ಯಕ್ಕೆ ತಬಲಾ ನುಡಿಸಿ ಮನದುಂಬಿಸಿಕೊಂಡರು.

7 / 8
ಒಂದೆಡೆ ಭಾರತೀಯ ಕಲೆ ನೃತ್ಯಗಳ ಮೇಲೆ ವಿದೇಶಿಗರ ಪ್ರೀತಿ. ಮತ್ತೊಂದಡೆ ಅವರೇ ಖುದ್ದಾಗಿ ತಬಲಾ ನುಡಿಸಿ ಭರತ ನಾಟ್ಯಕ್ಕೆ ಸಾಥ್ ನೀಡಿದ್ದು ಕಲಾವಿದರ ಸಂತಸಕ್ಕೆ ಕಾರಣವಾಗಿದೆ. ದೇಶಿ ಕಲೆ ನೃತ್ಯ ಪದ್ದತಿಗಳ ಸಂಸ್ಕೃತಿ ಮೇಲೆ ವಿದೇಶಿಗರ ಅಭಿಮಾನ ಪ್ರೀತಿ ನಮ್ಮ ಮನಸ್ಸಿನಲ್ಲಿಯೂ ಬರಬೇಕಿದೆ. ನಮ್ಮ ದೇಶದ ಕಲೆ ನೃತ್ಯ ಪ್ರಕಾರಗಳು ಪದ್ದತಿ ಸಂಸ್ಕೃತಿಯನ್ನು ಉಳಿಸಲು ನಮ್ಮ ಯುವ ಸಮೂಹ ಮುಂದಾಗಬೇಕಿದೆ.

8 / 8
ಪ್ರತಿ ವರ್ಷ ನಮ್ಮ ನೃತ್ಯ ಕಲಾ ಸಂಸ್ಥೆಗೆ ಹಿಲ್ಸ್ ದಂಪತಿ ಭೇಟಿ ನೀಡುತ್ತಿರೋದು ನಮಗೆ ಹೆಮ್ಮ ಎನಿಸಿದೆ. ಇಲ್ಲಿಗೆ ಬಂದು ಎಲ್ಲರೊಂದಿಗೆ ಮುಕ್ತಾವಾಗಿರುತ್ತಾರೆ. ಐತಿಹಾಸಿಕ ಸ್ಮಾರಕಗಳ ತವರೂರಾದ ವಿಜಯಪುರ ಎಂದರೆ ಇವರಿಗೆ ಹೆಚ್ಚು ಪ್ರೀತಿ. ಇಲ್ಲಿಯ ಕಲೆಗಳನ್ನು ಯುಕೆನಲ್ಲಿ ಪ್ರಚುರ ಪಡಿಸುತ್ತರೋದು ಸಹ ನಮಗೆ ಹೆಮ್ಮೆಯ ವಿಚಾರವಾಗಿದೆ ಎಂದು ನವರಸ ನೃತ್ಯ ಕಲಾ ಸಂಸ್ಥೆಯವರು ಹೇಳಿದ್ದಾರೆ.