ಬೀದರ್ ಜಿಲ್ಲೆಯಲ್ಲಿ ನವರಾತ್ರಿ ಆಚರಣೆಯನ್ನ ವಿಶೇವಾಗಿ ಆಚರಿಸಲಾಗುತ್ತದೆ. ಬಹುತೇಕ ಭಾಗದಲ್ಲಿ ನವರಾತ್ರಿ ಸಮಯದಲ್ಲಿ ಮಹಿಳೆಯರು ಒಂಬತ್ತು ದಿನಗಳ ಕಾಲ ದೇವರ ಆರಾಧನೆಯಲ್ಲಿ ತೊಡಗುತ್ತಾರೆ. ಅದರಲ್ಲಿಯೂ ವಿಶೇಷವಾಗಿ, ಮಹಿಳೆಯರು ತೊಡೆಯ ಮೇಲೆ ಘಟ ಹಾಕಿಕೊಂಡು ದೇವಿಯ ಗರ್ಭ ಗುಡಿಯ ಕೋಣೆಯಲ್ಲಿ 5 ದಿನಗಳ ಕಾಲ ದೇವಿಯನ್ನ ಆರಾಧಿಸುತ್ತಾ ಕೂರುತ್ತಾರೆ.
ಬೀದರ್ ನಗರದ ಕುಂಬಾರವಾಡಾ ಬಡಾವಣೆಯಲ್ಲಿರುವ ಮಾತಾನ ಕಾಳಿಕಾದೇವಿ ಭವಾನಿ ಮಂದಿರದಲ್ಲಿ ಪುಣ್ಯವಂತಿ ವೈಜನಾಂಥ್ ಕೊಂಡಿಯವರು ಕಾಳಿಕಾದೇವಿಯ ಗರ್ಭಗುಡಿಯಲ್ಲಿ ತಮ್ಮ ಕೈಯಲ್ಲಿ ಬುಟ್ಟಿಹಿಡಿದುಕೊಂಡು (ಘಟ) ಹಿಡಿದುಕೊಂಡು ಕುಳಿತುಕೊಳ್ಳುತ್ತಾರೆ. ಈ ಸಮಯದಲ್ಲಿ ಅವರು ಅನ್ನ, ನೀರು, ಸೇವನೆ ಮಾಡದೆ ಕೇವಲ ಒಂದು ಬಾಳೆ ಹಣ್ಣು, ಸ್ವಲ್ಪ ಹಾಲು ಕುಡಿದು 5 ದಿನಗಳ ವೆರೆಗೆ ಕುಳಿತುಕೊಳ್ಳುತ್ತಾರೆ.
ಈ ಸಮಯದಲ್ಲಿ ಒಂಬತ್ತು ದಿನಗಳ ಕಾಲ ಭಕ್ತರು ಹೊರಗಡೆ ಭಜನೆ ಮಾಡುತ್ತಾ ದೇವಿಯ ಸ್ಮರಣೆ ಮಾಡುತ್ತಾರೆ. ಜೊತೆಗೆ 9 ದಿನಗಳ ಕಾಲ ದೇವಿಯ ಆರಾಧನೆ ಮಾಡುವುದರಿಂದ ಇವರಿಗೆ ವಿಶೇಷ ಶಕ್ತಿಗಳು ದೇವಿ ಕರುಣಿಸುತ್ತಾಳೆ ಎನ್ನುವ ಪ್ರತೀತಿ ಇದೆ. ಬೀದರ್‌ನ ಕುಂಬಾರವಾಡಾ ಬಡಾವಣೆಯ ನಿವಾಸಿ ಪುಣ್ಯವತಿ ಕೊಂಡೆ, ಸೇರಿದಂತೆ ಈ ವಿಶೇಷ ವ್ರತ ಆಚರಣೆಯಲ್ಲಿ ಜಿಲ್ಲೆಯ ಹತ್ತಾರು ಕಡೆಗಳಲ್ಲಿ ನಿರತರಾಗುತ್ತಾರೆ.
ಅದರಂತೆ ಭವಾನಿ ಮಂದಿರದಲ್ಲಿ ಪ್ರತಿವರ್ಷದಂತೆ ದೇವಿಯ ಘಟ ಸ್ಥಾಪನೆ ಮಾಡಲಾಗಿದೆ. ಇದರೊಂದಿಗೆ ದೇವಿಯ ಆರಾಧಕಿ ಪುಣ್ಯವತಿ 5 ದಿನಗಳವರೆಗೆ ತಮ್ಮ ತೊಡೆಯ ಮೇಲೆ ದೇವಿಯ ಘಟ ಸ್ಥಾಪನೆ ಮಾಡಿಕೊಂಡು, ಭಕ್ತಿಯ ಪರಾಕಾಷ್ಠೆ ಮೆರೆದಿದ್ದಾರೆ. ದೇವಿಯ ಆರಾಧಕರು ಮನೆಯಲ್ಲಿನ ದೇವರ ಜಗುಲಿಯ ಮೇಲೆ ಘಟ ಸ್ಥಾಪನೆ ಮಾಡುವುದು ವಾಡಿಕೆ. ಆದರೆ, ಇವರು ತಮ್ಮ ಶರೀರದ ಮೇಲೆ ಘಟ ಸ್ಥಾಪಿಸಿ ಧ್ಯಾನದಲ್ಲಿ ನಿರತರಾಗಿದ್ದಾರೆ.
48 ವರ್ಷಗಳಿಂದ ಸೇವೆ ಕಳೆದ 36 ವರ್ಷಕ್ಕೂ ಹೆಚ್ಚು ವರ್ಷಗಳಿಂದ ಮಂದಿರದಲ್ಲಿಯೇ ಈ ರೀತಿ ಹರಕೆ ಸಲ್ಲಿಸುತ್ತಿದ್ದು, ತಾವು ಈ ರೀತಿ ಭಕ್ತಿ ಸಮರ್ಪಿಸುವುದರಲ್ಲಿಯೇ ಸಂತೋಷ ಕಾಣುತ್ತಾರೆ. ಜಿಲ್ಲೆಯಲ್ಲಿ ಈ ರೀತಿಯ ಹತ್ತಾರು ಮಹಿಳೆಯರು ಪದ್ಮಾಸನ ಭಂಗಿಯಲ್ಲಿ ಕೂತು ಘಟವನ್ನ ಸ್ಥಾಪನೆ ಮಾಡಿಕೊಂಡು ದೇವಿಯ ಆರಾಧನೆ ಮಾಡುವುದರಲ್ಲಿ ತಲ್ಲಿನವಾಗುತ್ತಾರೆ. ಇವರು 5 ದಿನಗಳ ಕಾಲ ಯಾವುದೆ ಆಹಾರವನ್ನ ಸೇವಿಸುವುದಿಲ್ಲ. ಇದಕ್ಕಾಗಿ ನವರಾತ್ರಿ ಆರಂಭಕ್ಕೆ ಒಂದು ತಿಂಗಳ ಮುಂಚೆ ಆಹಾರವನ್ನ ಕಡಿಮೆ ಮಾಡುತ್ತಾ ಬರುತ್ತಾರೆ. ನವರಾತ್ರಿ ಆರಂಭದ ದಿನ ಎಲ್ಲವನ್ನ ತ್ಯಜಿಸಿ ಘಟವನ್ನ ಸ್ಥಾಪನೆ ಮಾಡಿಕೊಂಡು ದೇವಾಲಯದಲ್ಲಿ ಕೂತು ಬಿಡುತ್ತಾರೆ. ಈ ಸಂಪ್ರದಾಯ ಬಹುವರ್ಷದಿಂದ ನಡೆದುಕೊಂಡು ಬಂದಿದೆ ಎಂದು ಇಲ್ಲಿನ ಭಕ್ತರು ಹೇಳುತ್ತಾರೆ.
ಒಟ್ಟಾರೆ ಗಡಿ ಜಿಲ್ಲೆ ಬೀದರ್ನಲ್ಲಿ ನವರಾತ್ರಿ ಉತ್ಸವ ಬಂದರೆ ಸಾಕು ದೇವಿ ಆರಾಧನೆ ಮಾಡಿ ದೇವಿಯ ಶಕ್ತಿಯನ್ನ ಸಿದ್ದಿ ಪಡಿಸಿಕೊಳ್ಳುವ ಭಕ್ತರ ಸಂಖ್ಯೆಯೇನು ಕಡಿಮೆ ಇಲ್ಲ. ಈ ಸಮಯದಲ್ಲಿ ದೇವಿಯ ಆರಾಧಾನೆ ಮಾಡಿದರೆ ಶಕ್ತಿ ಲಭಿಸುತ್ತೆ, ಅಷ್ಟೆ ಅಲ್ಲದೆ ತಮ್ಮ ಕಡೆ ಬರುವ ಭಕ್ತರ ಮನೊಕಾಮನೆಯನ್ನ ತಾಯಿ ಈಡೇರಿಸುತ್ತಾಳೆ ಎನ್ನುವ ಕಾರಣಕ್ಕೆ ಬಹುತೇಕ ಕಡೆ ಇಂತಹ ಕಠಿಣ ವೃತ್ತಕ್ಕೆ ಮುಂದಾಗುತ್ತಾರೆ.
Published On - 9:01 pm, Thu, 10 October 24