- Kannada News Photo gallery Anupama Gowda New house Nammane ceremony Photos Entertainment News In Kannada
ಕನಸಿನ ಮನೆ ಕಟ್ಟಿ ಗೃಹಪ್ರವೇಶ ಮಾಡಿದ ಅನುಪಮಾ ಗೌಡ; ಹೇಗಿದೆ ನೋಡಿ ‘ನಮ್ಮನೆ’
ಅನುಪಮಾ ಗೌಡ ಅವರು ತಮ್ಮ ಕನಸಿನ ಮನೆ ಕಟ್ಟಿದ್ದಾರೆ. ಇದಕ್ಕೆ ಅವರು ‘ನಮ್ಮನೆ’ ಎಂದು ಹೆಸರು ಇಟ್ಟಿದ್ದಾರೆ. ಈ ಮನೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಫೋಟೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
Updated on: Oct 11, 2024 | 8:43 AM

ನಟಿ ಅನುಪಮಾ ಗೌಡ ಅವರು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದಿದ್ದಾರೆ. ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಅವರಿಗೆ ಬೇಡಿಕೆ ಇದೆ. ಇಷ್ಟೇ ಅಲ್ಲ, ಅವರು ನಿರೂಪಣೆ ಮೂಲಕವೂ ಗಮನ ಸೆಳೆದಿದ್ದಾರೆ. ಅವರ ಖ್ಯಾತಿ ಹೆಚ್ಚಾಗಿದೆ.

ಅನುಪಮಾ ಗೌಡ ಅವರು ತಮ್ಮ ಕನಸಿನ ಮನೆ ಕಟ್ಟಿದ್ದಾರೆ. ಇದಕ್ಕೆ ಅವರು ‘ನಮ್ಮನೆ’ ಎಂದು ಹೆಸರು ಇಟ್ಟಿದ್ದಾರೆ. ಈ ಮನೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಫೋಟೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

‘ನಮ್ಮನೆ’ ಗೃಹಪ್ರವೇಶ ನಡೆದಿದೆ. ನೇಹಾ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ವಿವಿಧ ಕಮೆಂಟ್ಗಳು ಬಂದಿವೆ. ಅನೇಕರು ಅನುಪಮಾಗೆ ಶುಭಾಶಯ ಕೋರಿದ್ದಾರೆ.

ಅನುಪಮಾ ಗೌಡ ಈ ಮನೆಯನ್ನು ನಿರ್ಮಾಣ ಮಾಡಲು ಸಾಕಷ್ಟು ಶ್ರಮ ಹಾಕಿದ್ದಾರೆ. ಕಿರುತೆರೆ, ಹಿರಿತೆರೆಯಲ್ಲಿ ನಟಿಸಿ ಅದರಿಂದ ಬಂದ ಹಣವನ್ನು ಕೂಡಿಟ್ಟು ಅವರು ಮನೆಯನ್ನು ಕಟ್ಟಿದ್ದಾರೆ. ಅವರ ಬಗ್ಗೆ ಹೆಮ್ಮೆ ಆಗುತ್ತಿದೆ ಎಂದು ಕೆಲವರು ಹೇಳಿದ್ದಾರೆ.

ಅನುಪಮಾ ಅವರು ಕಲರ್ಸ್ ಕನ್ನಡದ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲ ‘ಆ ಕರಾಳ ರಾತ್ರಿ’ ರೀತಿಯ ಸಿನಿಮಾಗಳಲ್ಲೂ ಅವರು ಬಣ್ಣ ಹಚ್ಚಿದ್ದಾರೆ. ಬಿಗ್ ಬಾಸ್ಗೂ ಅವರು ಬಂದಿದ್ದರು. ಅವರ ಜನಪ್ರಿಯತೆ ದಿನಕಳೆದಂತೆ ಹೆಚ್ಚುತ್ತಿದೆ.



















