
ಬಾಲಿವುಡ್ ಹಾಟ್ ನಟಿ ಹುಮಾ ಖುರೇಷಿ ಸದ್ಯ 'ಮೋನಿಕಾ ಓ ಮೈ ಡಾರ್ಲಿಂಗ್' ಚಿತ್ರದ ಸಕ್ಸಸ್ನಲ್ಲಿದ್ದಾರೆ.

'ಮೋನಿಕಾ ಓ ಮೈ ಡಾರ್ಲಿಂಗ್' ಚಿತ್ರದ ನಿರ್ಮಾಪಕರು ಮಂಗಳವಾರ (ನ. 29) ರಾತ್ರಿ ಸಕ್ಸಸ್ ಪಾರ್ಟಿ ಆಯೋಜಿಸಿದ್ದರು. ನಟಿ ಹುಮಾ ಖುರೇಷಿ ಭಾಗವಹಿಸಿದ್ದು, ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಕೆಂಪು ಬಣ್ಣದ ಕಟ್ ಔಟ್ ಡ್ರೆಸ್ ಧರಿಸಿ ಹುಮಾ ಖುರೇಷಿ ಪಾರ್ಟಿಯಲ್ಲಿ ಸಖತ್ ಹಾಟ್ ಆಗಿ ಮಿಂಚಿದ್ದು, ಸದ್ಯ ತಮ್ಮ ಬಟ್ಟೆಯಿಂದ ನೆಟ್ಟಿಗರ ಟ್ರೋಲ್ಗೆ ಗುರಿಯಾಗಿದ್ದಾರೆ.

ಪಾಪರಾಜಿಗಳು ಹುಮಾ ಖುರೇಷಿ ಅವರ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ನೆಟ್ಟಿಗರು ಬಗೆಬಗೆಯಾಗಿ ಕಮೆಂಟ್ ಮಾಡಿದ್ದಾರೆ.

'ನಿಮ್ಮ ದೇಹದ ಗಾತ್ರಕ್ಕೆ ಅನುಗುಣವಾಗಿಯಾದರೂ ಬಟ್ಟೆಗಳನ್ನು ಧರಿಸಿ' ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದರೆ, ಮತ್ತೊಬ್ಬರು 'ಮನೆಯಿಂದ ಹೊರಡುವುದಕ್ಕೂ ಮುಂಚೆ ನಿಮ್ಮನ್ನು ನೀವು ಒಂದು ಬಾರಿ ಕನ್ನಡಿಯಲ್ಲಿ ನೋಡಿಕೊಳ್ಳುವ ಅಭ್ಯಾಸವಿಲ್ವಾ' ಎಂದು ಪ್ರಶ್ನಿಸಿದ್ದಾರೆ.
Published On - 10:07 pm, Wed, 30 November 22