
ನಿಧಿ ಸುಬ್ಬಯ್ಯ

ಬ್ರೇಕ್ ಬಳಿಕ ಚಿತ್ರರಂಗದಲ್ಲಿ ಮತ್ತೆ ಸಕ್ರಿಯರಾಗುತ್ತಿದ್ದಾರೆ ನಟಿ ನಿಧಿ ಸುಬ್ಬಯ್ಯ. 2012 ರ ಬಳಿಕ ಬ್ರೇಕ್ ತೆಗೆದುಕೊಂಡಿದ್ದರು ನಿಧಿ. 2016 ರಿಂದ ಮತ್ತೆ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ್ದಾರೆ.

ಬಿಗ್ಬಾಸ್ ಸೀಸನ್ 8 ರಲ್ಲಿ ಭಾಗವಹಿಸಿದ್ದ ನಟಿ ನಿಧಿ ಸುಬ್ಬಯ್ಯ ಬಿಗ್ಬಾಸ್ ಮನೆಯಲ್ಲಿ 84 ದಿನಗಳನ್ನು ಕಳೆದಿದ್ದರು. ಚಿತ್ರರಂಗದಿಂದ ಬಹುತೇಕ ದೂರವಾಗಿದ್ದ ನಿಧಿಗೆ ರೀ ಎಂಟ್ರಿಗೆ ಬಿಗ್ಬಾಸ್ ಸಹಾಯ ಮಾಡಿತು.

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಟಿ ನಿಧಿ ಸುಬ್ಬಯ್ಯ, ತಮ್ಮ ವರ್ಕೌಟ್ ಚಿತ್ರಗಳು, ಪ್ರವಾಸದ ಚಿತ್ರಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ.

2009ರ ಅಭಿಮಾನಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ನಿಧಿ ಸುಬ್ಬಯ್ಯ ಕನ್ನಡದ ಜೊತೆಗೆ ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.

ಹಾಟ್ ಅವತಾರದಲ್ಲಿ ನಟಿ ನಟಿ ನಿಧಿ ಸುಬ್ಬಯ್ಯ. ಗ್ಲಾಮರಸ್ ಫೋಟೊಶೂಟ್ ಮಾಡಿಸಿರುವ ನಿಧಿ ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
Published On - 9:08 pm, Wed, 1 March 23