Aishwarya Rai: ಕಾನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ಐಶ್ವರ್ಯಾ ರೈ
Cannes 2024: ಕಪ್ಪು, ಬಿಳಿ ಮತ್ತು ಗೋಲ್ಡನ್ ಬಣ್ಣಗಳಿಂದ ವಿನ್ಯಾಸಗೊಂಡ ಗೌನ್ ಧರಿಸಿ ಅವರು ಮಿಂಚಿದ್ದಾರೆ. ಸದ್ಯ ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿ ಗಮನ ಸೆಳೆದಿದೆ.
1 / 6
ಐಶ್ವರ್ಯಾ ರೈ ಅವರು ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅದೇ ರೀತಿ ಮಾಡೆಲಿಂಗ್ ಕ್ಷೇತ್ರದಲ್ಲೂ ಅವರಿಗೆ ಬೇಡಿಕೆ ಇದೆ. ಐಶ್ವರ್ಯಾ ರೈ ಅವರು ಈಗ ಕಾನ್ ಸಿನಿಮೋತ್ಸವದಲ್ಲಿ ಮಿಂಚಿದ್ದಾರೆ.
2 / 6
ಕಪ್ಪು, ಬಿಳಿ ಮತ್ತು ಗೋಲ್ಡನ್ ಬಣ್ಣಗಳಿಂದ ವಿನ್ಯಾಸಗೊಂಡ ಗೌನ್ ಧರಿಸಿ ಅವರು ಮಿಂಚಿದ್ದಾರೆ. ಸದ್ಯ ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿ ಗಮನ ಸೆಳೆದಿದೆ.
3 / 6
ಐಶ್ವರ್ಯಾ ರೈ ಅವರ ಕೈಗೆ ಪೆಟ್ಟಾಗಿದೆ. ಆದರೆ, ಯಾವುದೇ ನೆಪ ಹೇಳದೇ ಅವರು ಸಿನಿಮೋತ್ಸವದಲ್ಲಿ ಭಾಗಿ ಆಗಿದ್ದಾರೆ. ಅವರಿಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಗುತ್ತಿದೆ.
4 / 6
ಐಶ್ವರ್ಯಾ ರೈ ಅವರು ಮೊದಲು ಕೂಡ ಹಲವು ಬಾರಿ ಕಾನ್ ಸಿನಿಮೋತ್ಸವಗಳಲ್ಲಿ ಭಾಗಿ ಆಗಿದ್ದರು. ಈಗ ಮತ್ತೊಮ್ಮೆ ಅವರು ಕಾನ್ ಸಿನಿಮೋತ್ಸವದಲ್ಲಿ ಮಿಂಚಿ ಗಮನ ಸೆಳೆದಿದ್ದಾರೆ.
5 / 6
2002ರಲ್ಲಿ ಐಶ್ವರ್ಯಾ ಅವರು ಕಾನ್ ಕೆಂಪು ಹಾಸಿನ ಮೇಲೆ ಮೊದಲ ಬಾರಿಗೆ ಹೆಜ್ಜೆ ಹಾಕಿದ್ದರು. ಅಂದಿನಿಂದ ಇಂದಿನ ತನಕ ಅವರು ಪ್ರತಿ ವರ್ಷವೂ ಕಾನ್ ಸಿನಿಮೋತ್ಸವದಲ್ಲಿ ಭಾಗಿ ಆಗುತ್ತಿದ್ದಾರೆ.
6 / 6
ಐಶ್ವರ್ಯಾ ರೈ ಅವರು ಒಂದಲ್ಲ ಎರಡಲ್ಲ ಈವರೆಗೆ ಬರೋಬ್ಬರಿ 21 ಬಾರಿ ಕಾನ್ ಫಿಲ್ಮ್ ಫೆಸ್ಟಿವಲ್ನ ರೆಡ್ ಕಾರ್ಪೆಟ್ನಲ್ಲಿ ನಡೆದಿದ್ದಾರೆ ಅನ್ನೋದು ವಿಶೇಷ. ಪ್ರತಿ ಬಾರಿಯೂ ಅವರ ಡ್ರೆಸ್ ಗಮನ ಸೆಳೆದಿದೆ.