
ಅಕ್ಷಯ ತೃತೀಯ 2022: ಅಕ್ಷಯ ತೃತೀಯ ಹಬ್ಬವನ್ನು ಮೇ 3ರಂದು ಆಚರಿಸಲಾಗುತ್ತಿದೆ. ಅಂದು ಚಿನ್ನ ಅಥವಾ ಆಭರಣವನ್ನು ಖರೀದಿಸಿದರೆ ಅದು ಅಕ್ಷಯವಾಗುತ್ತದೆ ಎನ್ನುವುದು ನಂಬಿಕೆ. ಶುಭಕಾರ್ಯಗಳಿಗೂ ಅಕ್ಷಯ ತೃತೀಯ ವಿಶೇಷ ದಿನ. ಈ ವಿಶೇಷ ದಿನದಂದು ಮಹಿಳೆಯರು ಮತ್ತಷ್ಟು ಸಂಭ್ರಮದಿಂದ ಹಬ್ಬವನ್ನು ಸ್ವಾಗತಿಸುತ್ತಾರೆ. ಹಬ್ಬಕ್ಕೆ ಯಾವ ರೀತಿಯ ಆಭರಣಗಳು ಉತ್ತಮ? ಯಾವ ರೀತಿಯ ದಿರಿಸು ಸಂಭ್ರಮವನ್ನು ಮತ್ತಷ್ಟು ಅಂದವಾಗಿಸುತ್ತದೆ? ಇಲ್ಲಿದೆ ನೋಡಿ.

ಅಕ್ಷಯ ತೃತೀಯ ದಿನದಂದು ಚಿನ್ನ, ಬೆಳ್ಳಿ ಮೊದಲಾದ ಆಭರಣಗಳನ್ನು ಕೊಳ್ಳಲು ಶುಭ ದಿನ ಎಂಬ ನಂಬಿಕೆ ಇದೆ. ಅಂದು ನೀವು ಹಬ್ಬವನ್ನು ಹೇಗೆ ಮತ್ತಷ್ಟು ಸಂಭ್ರಮದಿಂದ ಆಚರಿಸಬಹುದು? ಇಲ್ಲಿದೆ ಟಿಪ್ಸ್

ಮಹಿಳೆಯರು ಸೀರೆ ಅಥವಾ ಲೆಹಂಗಾದೊಂದಿಗೆ ಅಕ್ಷಯ ತೃತೀಯ ದಿನದಂದು ಮಿಂಚಬಹುದು. ದಿರಿಸಿನ ಬಣ್ಣಕ್ಕೆ ಹೊಂದುವ ಸಿಂಧೂರ ಹಾಗೂ ಬಳೆಗಳು ನಿಮ್ಮನ್ನು ಮತ್ತಷ್ಟು ಅಂದವಾಗಿಸುತ್ತದೆ.

ನೆಕ್ಲೇಸ್ ಧರಿಸುವುದು ಇತ್ತೀಚಿನ ದಿನಗಳಲ್ಲಿ ದೊಡ್ಡ ಟ್ರೆಂಡ್. ಅದರಲ್ಲೂ ಯುವತಿಯರು, ಮಹಿಳೆಯರಿಗೆ ತಮ್ಮ ಸೀರೆ ಅಥವಾ ಲೆಹಂಗಾಕ್ಕೆ ಹೊಂದುವ ಬಣ್ಣದ ನೆಕ್ಲೆಸ್ ಧರಿಸುವುದು ಮತ್ತಷ್ಟು ಖುಷಿ ನೀಡುತ್ತದೆ. ನೀವು ಕೂಡಈ ಬಾರಿ ಇದನ್ನು ಟ್ರೈ ಮಾಡಬಹುದು.

ನಿಮ್ಮನ್ನು ಮತ್ತಷ್ಟು ಅಂದವಾಗಿಸುವಲ್ಲಿ ಕಿವಿಯೋಲೆಗಳ ಪಾತ್ರ ಹಿರಿದು. ಡ್ರಾಪ್ ಡೌನ್ ವಿನ್ಯಾಸ, ಹೂಪ್ಸ್, ಚಿನ್ನದ ಮೇಲಿನ ಸ್ಟಡ್‌ಗಳು ಅಥವಾ ಇತರ ಲೋಹದ ಇಯರ್ ರಿಂಗ್‌ಗಳು ಸಾಮಾನ್ಯವಾಗಿ ಎಲ್ಲರಿಗೂ ಹೊಂದುತ್ತವೆ. ಹೀಗೆ ನಿಮ್ಮ ಅಕ್ಷಯ ತೃತೀಯವನ್ನು ಸಂಭ್ರಮದಿಂದ ಆಚರಿಸಿ.