- Kannada News Photo gallery Cricket photos IPL 2022: 5 reasons why Ravindra Jadeja has requested MS Dhoni to lead CSK
IPL 2022: ರವೀಂದ್ರ ಜಡೇಜಾ ನಾಯಕತ್ವ ತೊರೆಯಲು ಇದುವೇ ಕಾರಣ
IPL 2022: CSK ತಂಡದ ನಾಯಕತ್ವದಿಂದ ರವೀಂದ್ರ ಜಡೇಜಾ (Ravindra Jadeja) ಕೆಳಗಿಳಿದಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಮತ್ತೆ ಸಿಎಸ್‌ಕೆ ತಂಡವನ್ನು ಮಹೇಂದ್ರ ಸಿಂಗ್ ಧೋನಿ (MS Dhoni) ಮುನ್ನಡೆಸಲಿದ್ದಾರೆ.
Updated on: Apr 30, 2022 | 8:53 PM

ಐಪಿಎಲ್ ಸೀಸನ್ 15 ಆರಂಭಕ್ಕೂ ಮುನ್ನ ಸಿಎಸ್‌ಕೆ ತಂಡವು ರವೀಂದ್ರ ಜಡೇಜಾ ಅವರನ್ನು ನಾಯಕನಾಗಿ ಆಯ್ಕೆ ಮಾಡುವ ಮೂಲಕ ಅಚ್ಚರಿ ಮೂಡಿಸಿತ್ತು. ಇದೀಗ ಐಪಿಎಲ್ನ ಅರ್ಧದಲ್ಲೇ ನಾಯಕತ್ವ ತೊರೆಯುವ ಮೂಲಕ ಜಡೇಜಾ ಎಲ್ಲರಿಗೂ ಶಾಕ್ ನೀಡಿದ್ದಾರೆ. ಇಲ್ಲಿ ಆಟದ ಮೇಲೆ ಗಮನ ಕೇಂದ್ರೀಕರಿಸಲು ನಾಯಕತ್ವ ತೊರೆಯುವುದಾಗಿ ಜಡೇಜಾ ಹೇಳಿದ್ದಾರೆ. ಆದರೆ ದಿಢೀರಣೆ ಇಂತಹ ನಿರ್ಧಾರಕ್ಕೆ ಇನ್ನೂ ಹಲವು ಕಾರಣಗಳಿವೆ ಎಂಬುದೇ ವಿಶೇಷ. ಹಾಗಿದ್ರೆ ನಾಯಕತ್ವದಿಂದ ಕೆಳಗಿಳಿಯಲು ಮುಖ್ಯ ಕಾರಣಗಳೇನು ನೋಡೋಣ...

IPL 2022 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕಳಪೆ ಆಟವೇ ಮೊದಲ ಮತ್ತು ದೊಡ್ಡ ಕಾರಣ ಎನ್ನಬಹುದು. ಏಕೆಂದರೆ ಆಡಿರುವ 8 ಪಂದ್ಯಗಳಲ್ಲಿ 2 ಜಯ ಸಾಧಿಸಿ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಇನ್ನು 6 ಪಂದ್ಯಗಳಿದ್ದು, ಈ ಪಂದ್ಯಗಳು ಸಿಎಸ್‌ಕೆ ಪ್ಲೇಆಫ್ ರೇಸ್ಗೆ ನಿರ್ಣಾಯಕ. ಹೀಗಾಗಿ ಜಡೇಜಾ ಹೆಚ್ಚಿನ ರಿಸ್ಕ್ ತೆಗೆದುಕೊಳ್ಳಲು ಮುಂದಾಗಿಲ್ಲ ಎನ್ನಬಹುದು.

ಎರಡನೆಯ ಕಾರಣವೆಂದರೆ ಸ್ವತಃ ರವೀಂದ್ರ ಜಡೇಜಾ ಅವರಿಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ ಎಂಬುದು. ಜಡೇಜಾ ಒಬ್ಬ ಶ್ರೇಷ್ಠ ಆಲ್‌ರೌಂಡರ್. ಸ್ವಂತ ಬಲದಿಂದ ಹಲವು ಬಾರಿ ಸಿಎಸ್‌ಕೆ ತಂಡವನ್ನು ಗೆಲ್ಲಿಸಿದ್ದಾರೆ. ಆದರೆ ಈ ಸಲ ಆಡಿರುವ 8 ಪಂದ್ಯಗಳಲ್ಲಿ ಜಡೇಜಾ ಕೇವಲ 112 ರನ್ ಮಾತ್ರ ಕಲೆಹಾಕಿದ್ದಾರೆ. ಇನ್ನು ಪಡೆದಿರುವುದು ಕೇವಲ 5 ವಿಕೆಟ್ ಮಾತ್ರ. ಐಪಿಎಲ್ನಲ್ಲಿ ಕಳಪೆ ಪ್ರದರ್ಶನ ನೀಡಿದ್ರೆ ಮುಂದೆ ಟೀಮ್ ಇಂಡಿಯಾದಲ್ಲೂ ಚಾನ್ಸ್ ಸಿಗುವುದಿಲ್ಲ ಎಂಬ ಭಯ ಕೂಡ ಜಡೇಜಾಗೆ ಕಾಡಿರಬಹುದು.

ಮೂರನೇ ಕಾರಣ ಎಂದರೆ ಪ್ಲೇಆಫ್ಗೇರುವುದು. ಅಂದರೆ ಮುಂದಿನ 6 ಪಂದ್ಯಗಳಲ್ಲಿ ಸಿಎಸ್‌ಕೆ ಗೆದ್ದರೆ 16 ಪಾಯಿಂಟ್ಗಳೊಂದಿಗೆ ಪ್ಲೇಆಫ್ ಆಡುವ ಅವಕಾಶ ಸಿಎಸ್ಕೆಗೆ ದೊರೆಯಲಿದೆ. ಹೀಗಾಗಿ ಇಂತಹ ಪರಿಸ್ಥಿತಿಯಲ್ಲಿ ಧೋನಿಗೆ ಅಧಿಕಾರ ಹಸ್ತಾಂತರಿಸುವ ಮೂಲಕ ಪ್ಲೇಆಫ್ ತಲುಪುವ ಭರವಸೆ ಉಳಿಸಿಕೊಳ್ಳಲು ಜಡೇಜಾ ಮುಂದಾಗಿದ್ದಾರೆ.

ಇನ್ನು ಮಹೇಂದ್ರ ಸಿಂಗ್ ಧೋನಿ ಉತ್ತಮ ಫಾರ್ಮ್ನಲ್ಲಿದ್ದು, ಇದೀಗ ಧೋನಿ ಮತ್ತೆ ನಾಯಕತ್ವ ವಹಿಸುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ. ಮತ್ತೊಂದೆಡೆ ಸಂಪೂರ್ಣ ಜವಾಬ್ದಾರಿಯಿಂದ ಕೆಳಗಿಳಿದರೆ ಜಡೇಜಾಗೆ ಮತ್ತೆ ಫಾರ್ಮ್ಗೆ ಮರಳಬಹುದು. ಇದು ಸಿಎಸ್‌ಕೆ ತಂಡಕ್ಕೂ ಪ್ಲಸ್ ಪಾಯಿಂಟ್ ಆಗಲಿದೆ. ಹೀಗಾಗಿ ರವೀಂದ್ರ ಜಡೇಜಾ ಯಶಸ್ವಿ ನಾಯಕನಿಗೆ ಮತ್ತೆ ಜವಾಬ್ದಾರಿವಹಿಸಿ ಆಲ್‌ರೌಂಡರ್ ಪ್ರದರ್ಶನದತ್ತ ಗಮನಹರಿಸಲು ನಿರ್ಧರಿಸಿದ್ದಾರೆ.



















