- Kannada News Photo gallery Cricket photos Virat Kohli celebrates Anushka Sharma's birthday with RCB teammates
RCB ತಂಡದೊಂದಿಗೆ ಹುಟ್ಟುಹಬ್ಬ ಆಚರಿಸಿದ ಅನುಷ್ಕಾ ಶರ್ಮಾ
Virat Kohli-Anushka Sharma: ಅನುಷ್ಕಾ ಕೊನೆಯದಾಗಿ ಕಾಣಿಸಿಕೊಂಡಿದ್ದು ಶಾರುಖ್ ನಟನೆಯ ‘ಜೀರೋ’ ಚಿತ್ರದಲ್ಲಿ. ನಂತರ ಅವರು ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಿದ್ದರು.
Updated on: May 01, 2022 | 7:30 PM

ಆರ್ಸಿಬಿ ತಂಡದ ಸ್ಟಾರ್ ಆಟಗಾರ (Virat Kohli) ತಮ್ಮ ಪತ್ನಿ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ (Anushka Sharma) ಅವರ 31ನೇ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಿದ್ದಾರೆ. ಅದು ಕೂಡ ಆರ್ಸಿಬಿ ತಂಡದ ಆಟಗಾರರೊಂದಿಗೆ ಎಂಬುದು ವಿಶೇಷ.

ಅಂದರೆ ಆರ್ಸಿಬಿ ತಂಡದ ಬಯೋಬಬಲ್ನಲ್ಲೇ ಅನುಷ್ಕಾ ಶರ್ಮಾ ಅವರ ಹುಟ್ಟುಹಬ್ಬವನ್ನು ವಿರಾಟ್ ಕೊಹ್ಲಿ ಆಚರಿಸಿದ್ದಾರೆ. ಇದೇ ವೇಳೆ ಸಿದ್ದಾರ್ಥ್ ಕೌಲ್ ದಂಪತಿ, ದಿನೇಶ್ ಕಾರ್ತಿಕ್ ಪತ್ನಿ ದೀಪಿಕಾ ಪಲ್ಲಿಕಲ್, ಫಾಫ್ ಡುಪ್ಲೆಸಿಸ್, ಕೋಚ್ ಸಂಜಯ್ ಬಂಗಾರ್, ಹರ್ಷಲ್ ಪಟೇಲ್ ಸೇರಿದಂತೆ ಆರ್ಸಿಬಿ ತಂಡ ಪ್ರಮುಖರು ಹಾಜರಿದ್ದರು.

ಇದೀಗ ಬರ್ತ್ಡೇ ಸೆಲೆಬ್ರೇಷನ್ ಫೋಟೋವನ್ನು ವಿರಾಟ್ ಕೊಹ್ಲಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ನೀ ಜನಿಸಿದಕ್ಕೆ ದೇವರಿಗೆ ಧನ್ಯವಾದಗಳು. ಏಕೆಂದರೆ ನೀ ಇಲ್ಲದಿರದಿದ್ರೆ ನಾನು ಮಾಡುತ್ತಿದ್ದೇ ಎಂಬುದೇ ನಂಗೆ ಗೊತ್ತಿಲ್ಲ. ನಿನ್ನ ಸೌಂದರ್ಯದಂತೆ ನಿನ್ನ ಮನಸೂ ಕೂಡ ಸುಂದರ ಎಂದು ವಿರಾಟ್ ಕೊಹ್ಲಿ ಬರೆದುಕೊಂಡಿದ್ದಾರೆ.

ಅನುಷ್ಕಾ ಶರ್ಮಾ ಸದ್ಯ ಆರ್ಸಿಬಿ ತಂಡದೊಂದಿಗೆ ಇದ್ದು, ಆರ್ಸಿಬಿ ಪಂದ್ಯದ ವೇಳೆ ವಿರಾಟ್ ಕೊಹ್ಲಿಯನ್ನು ಹುರಿದುಂಬಿಸುತ್ತಾ ಗ್ಯಾಲರಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಶೀಘ್ರದಲ್ಲೇ ಬಾಲಿವುಡ್ಗೂ ಕಂಬ್ಯಾಕ್ ಮಾಡಲಿದ್ದಾರೆ. ಅನುಷ್ಕಾ ಕೊನೆಯದಾಗಿ ಕಾಣಿಸಿಕೊಂಡಿದ್ದು ಶಾರುಖ್ ನಟನೆಯ ‘ಜೀರೋ’ ಚಿತ್ರದಲ್ಲಿ. ನಂತರ ಅವರು ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಿದ್ದರು.

ಇದೀಗ ಭಾರತೀಯ ಮಹಿಳಾ ಕ್ರಿಕೆಟ್ ತಾರೆ ಜೂಲನ್ ಗೋಸ್ವಾಮಿ ಅವರ ಜೀವನಾಧಾರಿತ ಚಿತ್ರದಲ್ಲಿ ಅನುಷ್ಕಾ ಬಣ್ಣಹಚ್ಚಿದ್ದಾರೆ. ‘ಚಕ್ಡಾ ಎಕ್ಸ್ಪ್ರೆಸ್’ ಹೆಸರಿನ ಈ ಚಿತ್ರವು ಶೀಘ್ರದಲ್ಲೇ ತೆರೆಕಾಣಲಿದೆ.









