
ನಟಿ ಆಲಿಯಾ ಭಟ್ ಅವರು ಕಳೆದ ವರ್ಷ ಹೆಣ್ಣುಮಗುವಿಗೆ ಜನ್ಮ ನೀಡಿದರು. ಮಗು ಜನಿಸಿದ ನಂತರ ಆಲಿಯಾ ಸಖತ್ ಗ್ಲಾಮರಸ್ ಆಗಿದ್ದಾರೆ. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

c

‘ನೀವು ಕ್ವೀನ್’ ಎಂದು ಆಲಿಯಾ ಭಟ್ ಫೋಟೋಗೆ ಕಮೆಂಟ್ ಮಾಡಿದ್ದಾರೆ. 12 ಗಂಟೆಯಲ್ಲಿ ಈ ಚಿತ್ರವನ್ನು 18 ಲಕ್ಷ ಮಂದಿ ಲೈಕ್ಸ್ ಮಾಡಿದ್ದಾರೆ.

ಆಲಿಯಾ ಭಟ್ ಅವರು ಮಗಳು ರಹಾ ಆರೈಕೆಯಲ್ಲಿ ಬ್ಯುಸಿ ಇದ್ದಾರೆ. ಶೀಘ್ರವೇ ಅವರು ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಲಿದ್ದಾರೆ. ಅವರು ಹೊಸ ಸಿನಿಮಾ ಘೋಷಿಸಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

ಆಲಿಯಾ ಭಟ್ ಹಾಗೂ ರಣವೀರ್ ಸಿಂಗ್ ನಟನೆಯ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಜುಲೈ 28ರಂದು ರಿಲೀಸ್ ಆಗಲಿದೆ. ಕರಣ್ ಜೋಹರ್ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.