Almonds for Weight Loss: ತೂಕ ಇಳಿಸಿಕೊಳ್ಳಲು ಬಾದಾಮಿ ತಿನ್ನಿ

| Updated By: ಅಕ್ಷಯ್​ ಪಲ್ಲಮಜಲು​​

Updated on: May 28, 2024 | 3:00 PM

ಬಾದಾಮಿ ಹೆಚ್ಚಿನ ಪ್ರೋಟೀನ್ ಮತ್ತು ಫೈಬರ್ ಅನ್ನು ಹೊಂದಿರುತ್ತದೆ. ಕಡಿಮೆ ಮಟ್ಟದ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತದೆ. ಬಾದಾಮಿ ನಿಮ್ಮ ಕೊಲೆಸ್ಟ್ರಾಲ್ ಅಪಾಯವನ್ನು ಕಡಿಮೆ ಮಾಡುತ್ತದೆ. ಬಾದಾಮಿ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಬಲ್ಲದು. ಇದಿಷ್ಟೇ ಅಲ್ಲದೆ, ಬಾದಾಮಿಯು ರಕ್ತದ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ.

1 / 11
ಬಾದಾಮಿ ಸೇವಿಸುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ದಿನವೂ ಒಂದೆರಡು ಬಾದಾಮಿ ಸೇವಿಸಿದರೆ ಅನೇಕ ಕಾಯಿಲೆಗಳಿಂದ ದೂರ ಇರಬಹುದು.

2 / 11
ಇದೀಗ ಅಧ್ಯಯನವೊಂದು ಹೊಸ ವಿಚಾರ ಹೊರಹಾಕಿದ್ದು, ಬಾದಾಮಿ ಸೇವಿಸುವುದರಿಂದ ನಿಮ್ಮ ತೂಕವನ್ನು ಇಳಿಸಬಹುದು ಎಂದು ತಿಳಿಸಿದೆ.

3 / 11
ಸೌತ್ ಆಸ್ಟ್ರೇಲಿಯಾದ ಯುನಿವರ್ಸಿಟಿಯ ಅಧ್ಯಯನ ತಂಡವೊಂದು ಈ ಬಗ್ಗೆ ಸಂಶೋಧನೆ ಮಾಡಿದೆ.

4 / 11
ಬಾದಾಮಿ ಹೆಚ್ಚು ಪೌಷ್ಟಿಕವಾಗಿದೆ. ವಿಟಮಿನ್​ಗಳು ಮತ್ತು ಖನಿಜಗಳು ಸೇರಿದಂತೆ ಕೊಬ್ಬುಗಳು, ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತದೆ.

5 / 11
ಬಾದಾಮಿ ತೂಕ ಇಳಿಸಲು ಮಾತ್ರವಲ್ಲದೆ ಹೃದಯದ ಆರೋಗ್ಯ ಕಾಪಾಡುವುದರಲ್ಲೂ ಮುಖ್ಯ ಪಾತ್ರ ವಹಿಸುತ್ತದೆ ಎಂದು ತಿಳಿಸಿದೆ.

6 / 11
ಬಾದಾಮಿಯಲ್ಲಿ ಪ್ರೋಟೀನ್, ಫೈಬರ್ ಮತ್ತು ಪೋಷಕಾಂಶಗಳು ಸಮೃದ್ಧವಾಗಿವೆ.

7 / 11
ಹೀಗಾಗಿ, ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಬಾದಾಮಿ ಸೇವಿಸಬಹುದು.

8 / 11
ಆದರೆ, ಬಾದಾಮಿಯು ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುವುದರಿಂದ ಅವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸುವಾಗ ಅತಿಯಾಗಿ ಸೇವಿಸದಿರುವುದು ಅವಶ್ಯಕ.

9 / 11
ಊಟವಾದ ನಂತರ ಸಂಜೆಯ ವೇಳೆಗೆ ಸ್ನಾಕ್ಸ್​ ರೀತಿಯಲ್ಲಿ ನಾಲ್ಕೈದು ಬಾದಾಮಿ ತಿನ್ನುವುದು ಒಳ್ಳೆಯದು. ಅಥವಾ ಬೆಳಗ್ಗೆ ಎದ್ದಕೂಡಲೆ ಬಾದಾಮಿಯನ್ನು ನೆನಸಿಟ್ಟು ತಿನ್ನಬಹುದು.

10 / 11
ಅದೂ ಬೇಡವೆಂದರೆ ಬಾದಾಮಿಯ ಸ್ಮೂಥಿ ಮಾಡಿ ಕುಡಿಯಬಹುದು. ಆಗ ಇದಕ್ಕೆ ಬೇರೆ ಹಣ್ಣುಗಳನ್ನು ಸೇರಿಸಿಕೊಳ್ಳಬೇಕಾಗುತ್ತದೆ.

11 / 11
ಬಾದಾಮಿಯನ್ನು ಇತರ ಕೆಲವು ನಟ್ಸ್​ಗಳೊಂದಿಗೆ ಸೇವಿಸಿದಾಗ ಅದು ನಿಮ್ಮ ಹೃದಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ.