Updated on: Aug 11, 2021 | 11:24 AM
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಜಿ.ಹೊಸಳ್ಳಿ ಗ್ರಾಮದ ಒಳಗೆ ಕಾಡಾನೆಯೊಂದು ನುಗ್ಗಿದ್ದು, ಜನರಿಗೆ ಆತಂಕ ಹೆಚ್ಚಾಗಿದೆ.
ಏಕಾಏಕಿ ಗ್ರಾಮಕ್ಕೆ ಕಾಡಾನೆ ನುಗ್ಗಿದ್ದರಿಂದ ಜನರು ಭಯಗೊಂಡಿದ್ದಾರೆ. ಮೂಲರಹಳ್ಳಿ ಗ್ರಾಮದ ಗಜಪಡೆಗಳಿಂದ ಬೆಳೆ ನಾಶವಾಗಿದೆ.
ಲಕ್ಷಾಂತರ ರೂಪಾಯಿ ಮೌಲ್ಯದ ಕಾಫಿ, ಮೆಣಸು ಬೆಳೆಗೆ ಹಾನಿಯಾಗಿದೆ. ಕಾಡಾನೆ ಓಡಿಸಲು ಅರಣ್ಯ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ.
ಕಾಡಾನೆಗಳ ನಿರಂತರ ದಾಳಿಯಿಂದ ರೈತರು ಕಂಗೆಟ್ಟಿದ್ದು, ಅರಣ್ಯ ಸಿಬ್ಬಂದಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಅಲೇಖಾನ್ ಹೊರಟ್ಟಿ ಗ್ರಾಮದಲ್ಲಿ ಅನೆ ಅಡಿಕೆ ಮತ್ತು ಕಾಫಿ ಬೆಳೆಯನ್ನು ನಾಶಮಾಡಿದೆ.