ಕಣ್ಮನ ಸೆಳೆದ ಫಲಪುಷ್ಪ ಪ್ರದರ್ಶನ, ಕಲ್ಲಂಗಡಿ ಹಣ್ಣಿನಲ್ಲಿ ಅರಳಿದ ಅನೇಕ ಮಹನೀಯರ ಚಿತ್ರಗಳು; ಝಲಕ್​ ಇಲ್ಲಿದೆ ನೋಡಿ

|

Updated on: Mar 12, 2023 | 6:14 PM

ಬಸವಕಲ್ಯಾಣ ಉತ್ಸವದ ನಿಮಿತ್ತವಾಗಿ ತೋಟಗಾರಿಕೆ ಇಲಾಖೆ ಹಮ್ಮಿಕೊಂಡಿದ್ದ ಫಲ ಪುಷ್ಪ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಒಂದಲ್ಲ ಎರಡಲ್ಲ ನಾನಾ ಜಾತಿಯ ಪುಷ್ಟಗಳ ಜೊತೆ ವಿವಿಧ ಬಗೆಯ ಹಣ್ಣಿನಲ್ಲಿ ಕೆತ್ತಿದ್ದ ಚಿತ್ರಗಳು ವಿಶೇಷವಾಗಿತ್ತು.

1 / 8
ಸಾಲು ಗಟ್ಟಿ ನಿಂತ ವಿವಿಧ ಶಾಲೆಯ ವಿದ್ಯಾರ್ಥಿಗಳು, ಅರಳಿ ನಿಂತು ನಗತೊಡಗಿರೋ ನಾನಾ ಬಗೆಯ ಹೂವುಗಳು, ಗುಲಾಬಿ ಸೇವಂತಿಗೆಯಲ್ಲಿ ಅರಳಿ ನಿಂತಿದ್ದ ಚಿತ್ರಗಳು. ವಿದ್ಯಾರ್ಥಿಗಳಷ್ಟೇ ಅಲ್ಲದೆ ಸೆಲ್ಫಿ ತೆಗೆದುಕೊಳ್ಳುವಲ್ಲಿ ನಿರತರಾಗಿದ್ದ ವಯಸ್ಕರು. ಹೌದು ಈ ದೃಶ್ಯಗಳೆಲ್ಲ ಕಂಡು ಬಂದಿದ್ದು ಬೀದರ್ ಜಿಲ್ಲೆಯ ಬಸವಕಲ್ಯಾಣ ಪಟ್ಟಣದಲ್ಲಿ.

2 / 8
ಬಸವಕಲ್ಯಾಣ ಉತ್ಸವದ ನಿಮಿತ್ಯವಾಗಿ ತೋಟಗಾರಿಕೆ ಇಲಾಖೆ ಹಮ್ಮಿಕೊಂಡಿದ್ದ  ಫಲ ಪುಷ್ಪ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ನಿನ್ನೆ(ಮಾ.11) ಫಲಪುಷ್ಪ ಪ್ರದರ್ಶನ ಎಲ್ಲರ ಗಮನ ಸೆಳೆದಿತ್ತು. ಬರೀ ಹೂವುಗಳಷ್ಟೇ ಅಲ್ಲದೆ ಕಲ್ಲಂಗಡಿ ಹಾಗೂ ಕುಂಬಳಕಾಯಿಯಲ್ಲೂ ಕಲಾಕೃತಿಗಳನ್ನು ಮಾಡಿ ಪ್ರದರ್ಶನಕ್ಕಿಡಲಾಗಿತ್ತು.

3 / 8
ಈ ಹಣ್ಣುಗಳಲ್ಲಿ ಕಲೆ ಮೂಲಕ ಮೂಡಿದ್ದ ಮೂರ್ತಿಗಳಂತೂ ಎಲ್ಲರ ಮೆಚ್ಚುಗೆಗೆ ಕಾರಣವಾಗಿದ್ದವು. ಇನ್ನು ಬೀದರ್ ಜಿಲ್ಲೆಯ ಅನೇಕ ಶಾಲೆಗಳ ಶಿಕ್ಷಕರು ಸಹ ತಮ್ಮ ವಿದ್ಯಾರ್ಥಿಗಳೊಂದಿಗೆ ಮೇಳದಲ್ಲಿ ಪಾಲ್ಗೊಂಡಿದ್ದರು.

4 / 8
ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಎರಡು ದಿನ ನಡೆಯುವ ಬಸವಕಲ್ಯಾಣ ಉತ್ಸವದಲ್ಲಿ ಫಲ-ಪುಷ್ಪ ಪ್ರದರ್ಶನ ನಡೆಯುತ್ತಿಲೇ ಬಂದಿದೆ. ಆದರೆ ಈ ವರ್ಷ ನಡೆಯುತ್ತಿರುವ ಫಲ-ಪುಷ್ಪ ಪ್ರದರ್ಶನ ಸ್ವಲ್ಪ ವಿಭನ್ನವಾಗಿದ್ದು, ಸಮಗ್ರ ಜಲಾನಯನ ಯೋಜನೆಯ ಪ್ರಾತ್ಯಕ್ಷಿತೆ ಕೂಡ ವಿಶೇಷವಾಗಿತ್ತು.

5 / 8
ಜೊತೆಗೆ ರೈತರಿಗೆ ಫಲ-ಪುಷ್ಪ ಪ್ರದರ್ಶನದ ಜೊತೆಗೆ ಸರಕಾರದ ಯೋಜನೆ ತಿಳಿಸುವ ಕೆಲಸವನ್ನು ಮಾಡಲಾಗಿತ್ತು. ಬೀದರ್ ಐತಿಹಾಸಿಕ ಅನುಭವ ಮಂಟಪ ಸೇರಿದಂತೆ ವಿವಿಧ ಐತಿಹಾಸಿಕ ಸ್ಥಳಗಳನ್ನ ಹೂವಿನಲ್ಲಿ ಅಲಂಕರಿಸಲಾಗಿದ್ದು ಸಹಜವಾಗಿಯೇ ಇಲ್ಲಿನ ಜನರಿಗೆ ಖುಷಿ ಕೊಟ್ಟಿತು.

6 / 8
ಇನ್ನು ಇಂತಹ ಬರಗಾಲದಲ್ಲೂ ಎಲ್ಲಿಂದ ಇಷ್ಟೊಂದು ಹೂವು, ಹಣ್ಣುಗಳನ್ನು ಬೆಳೆದರು ಎಂಬಂತೆ ಎಲ್ಲರನ್ನು ಅಚ್ಚರಿಗೊಳಿಸಿದೆ. ವಿಶೇಷ ಕುಬ್ಜ ಗಿಡಗಳು, ವಿವಿಧ ಬಗೆಯ ತರಕಾರಿಗಳು ರೈತರಿಗೆ ಅಗತ್ಯ ಮಾಹಿತಿ ನೀಡುವುದರ ಜೊತೆಗೆ ಅದ್ಭುತವಾದ ದೀಪಾಲಂಕಾರ ಹಾಗೂ ಅಪರೂಪದ ಚಿತ್ರಕಲೆ ಪ್ರದರ್ಶನ ಜನಸಾಗರವನ್ನೇ ಕೈಬೀಸಿ ಕರೆಯುತ್ತಿತ್ತು.

7 / 8
ವಿಶೇಷ ಆಕರ್ಷಣೆಯಾಗಿ ಹಣ್ಣುಗಳಲ್ಲಿ ಕೆತ್ತಿದ್ದ ಮಹಾತ್ಮರ ಆಕರ್ಷಕ ಕಲಾಕೃತಿ ಫಲಪುಷ್ಪ ಪ್ರದರ್ಶನದ ಕೇಂದ್ರ ಬಿಂದುವಾಗಿತ್ತು. ವಿವಿಧ ರೂಪಗಳಲ್ಲಿ ಕಲ್ಲಂಗಡಿಯಲ್ಲಿ ದರ್ಶನ ನೀಡುತ್ತಿರುವ ವಿವಿಧ ಗಣ್ಯರ, ದೇವರ ಆಶೀರ್ವಾದ ಇಲ್ಲಿ ಲಭಿಸುವಂತೆ ಭಾಸವಾಗುವ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು.

8 / 8
ಗಡೀ ಜಿಲ್ಲೆ ಬೀದರ್ ನಲ್ಲಿ ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ಜನರ ಕಣ್ಮನ ತಣಿಸುತ್ತಿದೆ. ಈ ಪ್ರದರ್ಶನವನ್ನು ನೋಡಲು ಜನರು ಆಸಕ್ತಿಯಿಂದ ಬರುತ್ತಿರುವುದರಿಂದ ಆಯೋಜಕರಿಗೂ ಇದರಿಂದ ತುಂಬಾ ಖುಷಿಯಾಗಿದೆ. ಒಟ್ಟಿನಲ್ಲಿ ಹೇಳಬೇಕೆಂದರೆ ಈ ಪುಷ್ಪ ಮೇಳ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಆಸಕ್ತಿಯಿಂದ ನೋಡುವಂತಹ ವಾತಾವರಣವನ್ನಂತೂ ನಿರ್ಮಾಣ ಮಾಡಿದ್ದಂತೂ ಸುಳ್ಳಲ್ಲ.