Apple car: ಐಫೋನ್ ಆಯ್ತು, ಇದೀಗ ಆ್ಯಪಲ್ ಐ-ಕಾರ್

| Updated By: ಝಾಹಿರ್ ಯೂಸುಫ್

Updated on: Feb 16, 2022 | 8:01 PM

Apple car: ಆ್ಯಪಲ್ ಕಾರ್‌ ತನ್ನ ಮೊದಲ ಆವೃತ್ತಿಯನ್ನು ಸಂಪೂರ್ಣ ಸ್ವಯಂ-ಚಾಲನಾ ವ್ಯವಸ್ಥೆಯನ್ನು ಹೊಂದಿರುವ ಕಾರಾಗಿಸುವ ಇರಾದೆಯಲ್ಲಿದೆ.

1 / 5
ವಿಶ್ವ ಪ್ರಸಿದ್ದ ಟೆಕ್ ಕಂಪೆನಿ ಆ್ಯಪಲ್ ಶೀಘ್ರದಲ್ಲೇ ವಾಹನ ಕ್ಷೇತ್ರದತ್ತ ಮುಖ ಮಾಡಲಿದೆ. ಈಗಾಗಲೇ ಆ್ಯಪಲ್ ಐಫೋನ್ ಮೂಲಕ ಸ್ಮಾರ್ಟ್​ಫೋನ್ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿರುವ ಆ್ಯಪಲ್ ಎಲೆಕ್ಟ್ರಿಕ್ ಕಾರನ್ನು ಅಭಿವೃದ್ಧಿಪಡಿಸುತ್ತಿದೆ.  Apple Inc. ಪರಿಚಯಿಸಲಿರುವ ಎಲೆಕ್ಟ್ರಿಕ್ ಕಾರಿನ ಪೇಟೆಂಟ್ ಚಿತ್ರ ಸೋರಿಕೆಯಾಗಿದ್ದು, ಹೊಸ ಮಾದರಿ ಇದೀಗ ಕಾರು ವಿನ್ಯಾಸವು ಎಲ್ಲರ ಗಮನ ಸೆಳೆಯುತ್ತಿದೆ.

2 / 5
ಸೋರಿಕೆಯಾಗಿರುವ ಫೋಟೋದಂತೆ ಆ್ಯಪಲ್ ಎಲೆಕ್ಟ್ರಿಕ್ ಕಾರಿನಲ್ಲಿ ಸನ್‌ರೂಫ್‌ ಕಾಣಬಹುದು. ಈ ವಿನ್ಯಾಸವನ್ನು 2020 ರಲ್ಲೇ ಮಾಡಲಾಗಿದ್ದು, ಇದೀಗ ಹೊಸ ಕಾರಿಗಾಗಿ ಮತ್ತಷ್ಟು ನವೀಕರಣಗಳನ್ನು ಮಾಡಲಾಗಿದೆ.

3 / 5
 ಇನ್ನು ಆ್ಯಪಲ್ ಕಾರು ಕ್ಯಾಬಿನ್ ಒಳಗೆ ಹೆಚ್ಚಿನ ಸ್ಥಳಾವಕಾಶ ಹೊಂದಿರಲಿದೆ. ಅಲ್ಲದೆ ಈ ಕಾರ್ ಸಂಪೂರ್ಣ ಸ್ವಯಂ ಚಾಲನಾ ತಂತ್ರಜ್ಞಾನ ಹೊಂದಿರಲಿದೆ ಎಂದು ತಿಳಿದು ಬಂದಿದೆ. ಅಂದರೆ ಆಟೋಮ್ಯಾಟಿಕ್ ಡ್ರೈವ್ ಮೋಡ್ ಈ ಕಾರಿನಲ್ಲಿ ಇರಲಿದೆ. ಇದರಿಂದ ಚಾಲಕರಿಲ್ಲದೆ ಕೂಡ ನಿರ್ದಿಷ್ಟ ಪ್ರದೇಶಗಳಿಗೆ ಚಲಿಸಬಹುದು. ಇದಾಗ್ಯೂ ಈ ಹೊಸ ಕಾರಿನ ಹೆಚ್ಚಿನ ಮಾಹಿತಿಯನ್ನು ಆ್ಯಪಲ್ ಕಂಪೆನಿ ಹೊರಬಿಟ್ಟಿಲ್ಲ.

4 / 5
ಆ್ಯಪಲ್ ಕಾರ್‌ ತನ್ನ ಮೊದಲ ಆವೃತ್ತಿಯನ್ನು ಸಂಪೂರ್ಣ ಸ್ವಯಂ-ಚಾಲನಾ ವ್ಯವಸ್ಥೆಯನ್ನು ಹೊಂದಿರುವ ಕಾರಾಗಿಸುವ ಇರಾದೆಯಲ್ಲಿದೆ. ಇದೇ ಕಾರಣದಿಂದ ಆ್ಯಪಲ್ ಎಲೆಕ್ಟ್ರಿಕ್ ಕಾರಿನ ಬಿಡುಗಡೆ ತಡೆವಾಗುತ್ತಿದೆ. ಪ್ರಸ್ತುತ ಮಾಹಿತಿ ಪ್ರಕಾರ ಆ್ಯಪಲ್ ತನ್ನ ಸ್ವಯಂ ಚಾಲಿತ ಕಾರನ್ನು 2025 ರಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ.

5 / 5
ಸದ್ಯ ಎಲೆಕ್ಟ್ರಿಕ್ ಕಾರುಗಳ ಮೂಲಕ ಹೊಸ ಸಂಚಲನ ಸೃಷ್ಟಿಸಿರುವ ಟೆಸ್ಲಾಗೆ ಆ್ಯಪಲ್ ಪ್ರತಿಸ್ಪರ್ಧೆಯೊಡ್ಡುವ ನಿರೀಕ್ಷೆಯಿದ್ದು, ಇದಾಗ್ಯೂ ಆ್ಯಪಲ್ ತನ್ನ ಎಲೆಕ್ಟ್ರಿಕ್ ಕಾರಿನ ಬಿಡುಗಡೆ ವಿಳಂಬಗೊಳಿಸುತ್ತಿರುವುದರಿಂದ ಇತರೆ ಕಂಪೆನಿಗಳ ಪೈಪೋಟಿಯನ್ನೂ ಕೂಡ ಎದುರಿಸಬೇಕಾಗಿ ಬರಬಹುದು. ಏಕೆಂದರೆ ವಿಶ್ವದಾದ್ಯಂತ ಎಲ್ಲಾ ಪ್ರಮುಖ ವಾಹನ ತಯಾರಿಕಾ ಕಂಪೆನಿಗಳು ಇದೀಗ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯತ್ತ ಮುಖ ಮಾಡಿದೆ.