ವಿದೇಶಿ ವರನೊಟ್ಟಿಗೆ ಅರ್ಜುನ್ ಸರ್ಜಾ ಕಿರಿಯ ಪುತ್ರಿಯ ವಿವಾಹ: ಇಲ್ಲಿವೆ ಚಿತ್ರಗಳು

Updated on: Oct 25, 2026 | 4:12 PM

ಖ್ಯಾತ ನಟ ಅರ್ಜುನ್ ಸರ್ಜಾ ಅವರ ಕಿರಿಯ ಪುತ್ರಿ ಅಂಜನಾ, ತಮ್ಮ ಬಹು ವರ್ಷದ ಪ್ರಿಯಕರ, ವಿದೇಶಿ ಪ್ರಜೆ ಇಸಾಯ್ ಜೊತೆಗೆ ವಿವಾಹವಾಗಿದ್ದಾರೆ. ಕಳೆದ ಹದಿನಾಲ್ಕು ವರ್ಷಗಳಿಂದಲೂ ಈ ಜೋಡಿ ಪ್ರೀತಿಯಲ್ಲಿತ್ತು. ಕಳೆದ ವರ್ಷ ಇಟಲಿಯಲ್ಲಿ ಇವರಿಬ್ಬರ ಎಂಗೇಜ್​​ಮೆಂಟ್ ಕುಟುಂಬ ಸದಸ್ಯರ ಸಮ್ಮುಖದಲ್ಲಿ ನಡೆದಿತ್ತು.

1 / 7
ಖ್ಯಾತ ನಟ ಅರ್ಜುನ್ ಸರ್ಜಾ ಅವರ ಕಿರಿಯ ಪುತ್ರಿ ಅಂಜನಾ, ತಮ್ಮ ಬಹು ವರ್ಷದ ಪ್ರಿಯಕರ, ವಿದೇಶಿ ಪ್ರಜೆ ಇಸಾಯ್ ಜೊತೆಗೆ ವಿವಾಹವಾಗಿದ್ದಾರೆ.

ಖ್ಯಾತ ನಟ ಅರ್ಜುನ್ ಸರ್ಜಾ ಅವರ ಕಿರಿಯ ಪುತ್ರಿ ಅಂಜನಾ, ತಮ್ಮ ಬಹು ವರ್ಷದ ಪ್ರಿಯಕರ, ವಿದೇಶಿ ಪ್ರಜೆ ಇಸಾಯ್ ಜೊತೆಗೆ ವಿವಾಹವಾಗಿದ್ದಾರೆ.

2 / 7

ಕಳೆದ ಹದಿನಾಲ್ಕು ವರ್ಷಗಳಿಂದಲೂ ಈ ಜೋಡಿ ಪ್ರೀತಿಯಲ್ಲಿತ್ತು. ಕಳೆದ ವರ್ಷ ಇಟಲಿಯಲ್ಲಿ ಇವರಿಬ್ಬರ ಎಂಗೇಜ್​​ಮೆಂಟ್ ಕುಟುಂಬ ಸದಸ್ಯರ ಸಮ್ಮುಖದಲ್ಲಿ ನಡೆದಿತ್ತು.

3 / 7

ಇಟಲಿ ಪ್ರಜೆಯಾಗಿರುವ ಇಸಾಯ್, ಉದ್ಯಮಿ ಆಗಿದ್ದು ಜಾಗತಿಕ ಬ್ರ್ಯಾಂಡಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೀಗ ಈ ಜೋಡಿ ಭಾರತೀಯ ಸಂಪ್ರದಾಯದಂತೆ ವಿವಾಹವಾಗಿದ್ದಾರೆ.

4 / 7

ಅರ್ಜುನ್ ಸರ್ಜಾ ಕುಟುಂಬ ಮತ್ತು ಇಸಾಯ್ ಅವರ ಕುಟುಂಬ ಮತ್ತು ಆಪ್ತರ ಸಮ್ಮುಖದಲ್ಲಿ ಭಾರತೀಯ ಸಂಪ್ರದಾಯದಂತೆ ವಿದೇಶದಲ್ಲಿ ವಿವಾಹ ಸಮಾರಂಭ ನಡೆದಿದೆ.

5 / 7

ಅಂಜನಾ ಸರ್ಜಾ ಅವರು ಸಿನಿಮಾ ರಂಗದಿಂದ ಅಂತರ ಕಾಯ್ದುಕೊಂಡಿದ್ದರು. ಫ್ಯಾಷನ್ ಉದ್ಯಮಿ ಆಗಿರುವ ಅವರು ವಿದೇಶದಲ್ಲಿ ಫ್ಯಾಷನ್​ ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ.

6 / 7

ಇದೀಗ ವಿದೇಶದಲ್ಲಿಯೇ ಅಂಜನಾ ಮತ್ತು ಇಸಾಯ್ ಅವರ ಮದುವೆ ನಡೆದಿದ್ದು, ಭಾರತೀಯ ಸಂಪ್ರದಾಯದಂತೆಯೇ ವಿವಾಹ ಮಾಡಲಾಗಿದೆ. ಎಲ್ಲರೂ ಭಾರತೀಯ ಶೈಲಿಯ ಉಡುಪು ಧರಿಸಿ ಮದುವೆಯಲ್ಲಿ ಭಾಗಿ ಆಗಿದ್ದಾರೆ.

7 / 7

ಅರ್ಜುನ್ ಅವರ ಮೊದಲ ಮಗಳು ಐಶ್ವರ್ಯಾ ನಟಿಯಾಗಿದ್ದು ಅವರು 2024ರಲ್ಲಿ ತಮಿಳಿನ ನಟ ಉಮಾಪತಿ ರಾಮಯ್ಯ ಅವರೊಟ್ಟಿಗೆ ವಿವಾಹವಾಗಿದ್ದಾರೆ.

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us