Kannada News Photo gallery DK Shivakumar paid the debt of Guru Ex CM SM Krishna even though he is a Deputy CM of state
ತಾವೊಬ್ಬ ಡಿಸಿಎಂ ಎನ್ನುವುದನ್ನೇ ಮರೆತು ಗುರುವಿನ ಋಣ ತೀರಿಸಿದ ಡಿಕೆ ಶಿವಕುಮಾರ್
ಡಿಸಿಎಂ ಡಿಕೆ ಶಿವಕುಮಾರ್ ಅವರ ರಾಜಕೀಯ ಬೆಳವಣಿಗೆಯಲ್ಲಿ ಎಸ್ಎಂ ಕೃಷ್ಣ ಅವರ ಪಾತ್ರ ಕೂಡ ಇದೆ. ಗುರು-ಶಿಷ್ಯರಾದ ಇವರು ಬಳಿಕ ಸಂಬಂಧಿಕರಾದ್ರು. ಎಸ್.ಎಂ ಕೃಷ್ಣ ಅವ್ರ ಪಾಲಿಗೆ ಡಿಕೆ ಶಿವಕುಮಾರ್ ಬರೀ ಬೀಗರಲ್ಲ. ಮನೆಮಗನಂತೆ ಕುಟುಂಬದ ಜೊತೆ ನಿಂತವರು. ಕೃಷ್ಣ ಅವರ ಮನೆಗೆ ಮಗಳನ್ನೇ ಧಾರೆ ಎರೆದು ಕೊಟ್ಟವರು. ಕೃಷ್ಣ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ರೂ ಗುರುವಿನ ಮೇಲಿನ ಡಿಕೆ ನಿಯತ್ತು ಮಾತ್ರ ಅಚಲವಾಗಿಯೇ ಇತ್ತು. ಹೀಗಾಗಿ ತಾವೊಬ್ಬ ಡಿಸಿಎಂ ಎನ್ನುವುದನ್ನು ಮರೆತು ಎಸ್ಎಂ ಕೃಷ್ಣರ ಶಿಷ್ಯನಾಗಿ ಕಾಣಿಸಿಕೊಂಡಿದ್ರು. ಕೈಯಲ್ಲಿ ಮೈಕ್ ಹಿಡಿದು ಎಲ್ಲವನ್ನೂ ನಿರ್ವಹಿಸಿದ ಡಿಕೆ ಶಿವಕುಮಾರ್, ಗುರುವಿಗೆ ಹೆಗಲು ನೀಡಿ ಅಂತಿಮ ವಿದಾಯ ಹೇಳಿದರು. ಇನ್ನು ಎಸ್ಎಂ ಕೃಷ್ಣ ಉಸಿರು ನಿಲ್ಲಿಸಿದ ಬಳಿಕ ಅವರನ್ನು ಗೌರವಪೂರ್ವಕವಾಗಿ ಕಳುಹಿಸಿಕೊಡುವವರೆಗೆ ಡಿಕೆಶಿ ಎಲ್ಲಾ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಫೋಟೋಗಳೇ ಎಲ್ಲವನ್ನೂ ಹೇಳುತ್ತವೆ.