
ಏಷ್ಯನ್ ಗೇಮ್ಸ್ ಕ್ರೀಡಾಕೂಟದ 13ನೇ ದಿನದಂದು ಭಾರತಕ್ಕೆ 13ನೇ ಚಿನ್ನದ ಪದಕ ಸಿಕ್ಕಿದೆ. ಮಹಿಳೆಯರ ಬಾಕ್ಸಿಂಗ್‌ನ 75 ಕೆಜಿ ವಿಭಾಗದಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಲೊವ್ಲಿನಾ ಬೊರ್ಗೊಹೈನ್ ಬಂಗಾರಕ್ಕೆ ಮುತ್ತಿಕ್ಕಿದ್ದಾರೆ. ಲೊವ್ಲಿನಾ ಬೊರ್ಗೊಹೈನ್ ತಮ್ಮ 29 ನೇ ಹುಟ್ಟುಹಬ್ಬದಂದು ಈ ಚಿನ್ನದ ಪದಕ ಗೆದ್ದಿರುವುದು ಅವರಿಗೆ ಮತ್ತಷ್ಟು ವಿಶೇಷವಾಗಿದೆ(PC-PTI).
ಶುಕ್ರವಾರ ನಿಶಿಯೋ ಜಿಮ್ನಾಷಿಯಂನಲ್ಲಿ ನಡೆದ ಮಹಿಳೆಯರ 75 ಕೆಜಿ ವಿಭಾಗದ ಫೈನಲ್‌ನಲ್ಲಿ ಚೀನಾದ ಜಿ ಬಾವೊ ಅವರನ್ನು ಸೋಲಿಸಿದ ಭಾರತೀಯ ಸ್ಟಾರ್ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ಏಷ್ಯನ್ ಕ್ರೀಡಾಕೂಟದಲ್ಲಿ ತಮ್ಮ ಮೊದಲ ಚಿನ್ನದ ಪದಕವನ್ನು ಗೆದ್ದರು(PC-PTI).
ಇದರೊಂದಿಗೆ ಅಥ್ಲೀಟ್ ಮೇರಿ ಕೋಮ್ ನಂತರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಎರಡನೇ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಗೆಲುವಿನೊಂದಿಗೆ, 2014 ರಲ್ಲಿ ಮೇರಿ ಕೋಮ್ ನಂತರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಮೊದಲ ಮಹಿಳಾ ಎಂಬ ದಾಖಲೆಯೂ ಬಾಕ್ಸರ್ ಲೊವ್ಲಿನಾ ಪಾಲಾಗಿದೆ(PC-PTI).
ತೀವ್ರ ಪೈಪೋಟಿಯ ಈ ಹೋರಾಟದಲ್ಲಿ ಲೊವ್ಲಿನಾ, ಚೀನಾದ ಜಿ ಬಾವೊ ಅವರನ್ನು 5-0 ಅಂತರದಿಂದ ಸೋಲಿಸಿದರು. ಈ ಹಿಂದೆ ಕಝಾಕಿಸ್ತಾನದ ನಟಾಲಿಯಾ ಬೊಗ್ಡಾನೋವಾ ಅವರನ್ನು ಸೋಲಿಸಿ ಫೈನಲ್ ತಲುಪಿದ್ದ ಲೊವ್ಲಿನಾ, ಅಂತಿಮವಾಗಿ ಈ ಕಾಂಟಿನೆಂಟಲ್ ಈವೆಂಟ್‌ನಲ್ಲಿ ಚಿನ್ನವನ್ನು ತನ್ನದಾಗಿಸಿಕೊಂಡಿದ್ದಾರೆ. ಇನ್ನು 2022 ರಲ್ಲಿ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಲೊವ್ಲಿನಾ ಬೆಳ್ಳಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು(PC-PTI).
28 ವರ್ಷದ ಲೊವ್ಲಿನಾ ಬೊರ್ಗೊಹೈನ್ ಈಗಾಗಲೇ ಒಲಿಂಪಿಕ್ ಕ್ರೀಡಾಕೂಟ, ವಿಶ್ವ ಚಾಂಪಿಯನ್‌ಶಿಪ್, ಏಷ್ಯನ್ ಕ್ರೀಡಾಕೂಟ ಮತ್ತು ಏಷ್ಯನ್ ಚಾಂಪಿಯನ್‌ಶಿಪ್‌ಗಳಲ್ಲಿ ಪದಕಗಳನ್ನು ಗೆದ್ದಿದ್ದಾರೆ. ಇದೀಗ ಜಪಾನ್ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ತಮ್ಮ ವೃತ್ತಿಜೀವನಕ್ಕೆ ಹೊಸ ಆಯಾಮ ನೀಡಿದ್ದಾರೆ(PC-PTI).
Published On - 3:33 pm, Fri, 2 October 26