
ನಿರ್ದೇಶಕ ಅಟ್ಲಿ ಹಾಗೂ ಪ್ರಿಯಾ ದಂಪತಿ ಸೋಶಿಯಲ್ ಮೀಡಿಯಾದಲ್ಲಿ ಖುಷಿಯ ಸುದ್ದಿ ಒಂದನ್ನು ಹಂಚಿಕೊಂಡಿದ್ದಾರೆ. ಈ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಈ ದಂಪತಿಗೆ ಎಲ್ಲ ಕಡೆಗಳಿಂದ ಶುಭಾಶಯ ಹರಿದುಬರುತ್ತಿದೆ.

ಅಟ್ಲಿ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರು ದಳಪತಿ ವಿಜಯ್ ಜೊತೆ ಮೂರು ಸಿನಿಮಾ ಮಾಡಿದ್ದಾರೆ. ಶಾರುಖ್ ಖಾನ್ ಜೊತೆ ‘ಜವಾನ್’ ಚಿತ್ರ ಮಾಡಿ ಅಟ್ಲಿ ಫೇಮಸ್ ಆದರು. ಈಗ ಅವರು ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡುತ್ತಿದ್ದಾರೆ.

ಅಟ್ಲಿ ಹಾಗೂ ಪ್ರಿಯಾ 2014ರಲ್ಲಿ ವಿವಾಹ ಆದರು. ಈ ದಂಪತಿಗೆ ಒಂದು ಮಗು ಇದೆ. ಈಗ ಅಟ್ಲಿ ಅವರು ಮತ್ತೊಮ್ಮೆ ತಂದೆ ಆಗುತ್ತಿದ್ದು, ಈ ಖುಷಿಯ ಸುದ್ದಿಯನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಅಭಿಮಾನಿಗಳು ಅಟ್ಲಿ ದಂಪತಿಗೆ ಅಭಿನಂದನೆ ತಿಳಿಸಿದ್ದಾರೆ.

ಅಟ್ಲಿ ಹಾಗೂ ಪ್ರಿಯಾ ಬಾಂಧವ್ಯ ಗಟ್ಟಿಯಾಗಿದೆ. ಇಬ್ಬರೂ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಆದರೆ, ಅಟ್ಲಿ ದೇಹದ ಬಣ್ಣದ ಕಾರಣಕ್ಕೆ ಅವರನ್ನು ಅನೇಕರು ಟೀಕೆ ಮಾಡಿದ್ದು ಇದೆ. ಈ ಟೀಕೆಗಳು ಅವರ ದಾಂಪತ್ಯಕ್ಕೆ ತೊಂದರೆ ಮಾಡಿಲ್ಲ.

ಪ್ರಿಯಾ ಅಟ್ಲಿ ಅವರು ನಟಿಯಾಗಿದ್ದರು. ಅವರು ನಿರ್ಮಾಪಕಿ ಕೂಡ ಹೌದು. ಇಬ್ಬರೂ ಗೆಳೆಯರಾಗಿದ್ದರು. ನಂತರ ಇವರು ವಿವಾಹ ಆದರು. ಈಗ ಇವರ ಕುಟುಂಬ ಹಿರಿದಾಗುತ್ತಿದೆ ಎಂಬುದು ವಿಶೇಷ.