Richest Temple: ಭಾರತದಲ್ಲಿರುವ ಪ್ರಮುಖ 5 ಶ್ರೀಮಂತ ದೇವಾಲಯಗಳಿವು
ಭಾರತವು ಶ್ರೀಮಂತ ಸಂಸ್ಕೃತಿ ಮತ್ತು ವೈವಿಧ್ಯಮಯ ಪರಂಪರೆಯನ್ನು ಹೊಂದಿದೆ. ಇಲ್ಲಿನ ಪುರಾತನ ದೇವಾಲಯಗಳು ಪ್ರಪಂಚದಾದ್ಯಂತ ಪ್ರತಿ ವರ್ಷ ಲಕ್ಷಾಂತರ ಭಕ್ತರು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತದೆ.
1 / 6
ಅಯೋಧ್ಯೆ ರಾಮಮಂದಿರದಲ್ಲಿ ನಿನ್ನೆ(ಜ.22) ರಾಮ ಲಲ್ಲಾನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಯಾಗಿದೆ. ಈ ಪ್ರತಿಷ್ಠಾಪನಾ ಕಾರ್ಯಕ್ರಮದ ಅಂದಾಜು ವೆಚ್ಚ ರೂ. 1,800 ಕೋಟಿ. ಆದ್ದರಿಂದ ಭಾರತದ ಅತ್ಯಂತ ಶ್ರೀಮಂತ ದೇವಾಲಯಗಳ ಬಗ್ಗೆ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.
2 / 6
ತಿರುಮಲ ತಿರುಪತಿ ವೆಂಕಟೇಶ್ವರ ದೇವಸ್ಥಾನ (ಆಂಧ್ರಪ್ರದೇಶ): ವಿಶ್ವದ ಅತ್ಯಂತ ಶ್ರೀಮಂತ ದೇವಸ್ಥಾನ ಎಂದು ಗುರುತಿಸಲ್ಪಟ್ಟಿರುವ ಈ ದೇವಾಲಯ ತಿರುಮಲ ಬೆಟ್ಟಗಳ ಮಧ್ಯದಲ್ಲಿದೆ. ಪ್ರತಿದಿನ ಇಲ್ಲಿಗೆ 50,000 ಕ್ಕೂ ಹೆಚ್ಚು ಭಕ್ತರು ಮತ್ತು ಸಂದರ್ಶಕರು ಬರುತ್ತಾರೆ. ಇದು 3 ಲಕ್ಷ ಕೋಟಿ ರೂ. ನಿವ್ವಳ ಮೌಲ್ಯವನ್ನು ಹೊಂದಿರುವ ವಿಶ್ವದ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ.10 ನೇ ಶತಮಾನದಲ್ಲಿ ನಿರ್ಮಿಸಲಾದ ಈ ದೇವಾಲಯವು 16.2 ಎಕರೆ ಪ್ರದೇಶದಲ್ಲಿ ಹರಡಿದೆ.
3 / 6
ಅನಂತ ಪದ್ಮನಾಭ ಸ್ವಾಮಿ ದೇವಾಲಯ: ಕೇರಳದ ತಿರುವನಂತಪುರಂನಲ್ಲಿರುವ ಈ ದೇವಾಲಯವು 120,000 ಕೋಟಿ ಆಸ್ತಿಯನ್ನು ಹೊಂದಿರುವ ವಿಶ್ವದ ಅತ್ಯಂತ ಶ್ರೀಮಂತ ದೇವಾಲಯವಾಗಿದೆ. ಸಂಪತ್ತುಗಳಲ್ಲಿ ಚಿನ್ನದ ವಿಗ್ರಹಗಳು, ಚಿನ್ನ, ಪಚ್ಚೆಗಳು, ಪುರಾತನ ಬೆಳ್ಳಿ, ವಜ್ರಗಳು ಮತ್ತು ಹಿತ್ತಾಳೆ ಸೇರಿರುವ ಖಜಾನೆ ಕೋಣೆಯನ್ನು ಒಳಗೊಂಡಿದೆ.
4 / 6
ಗುರುವಾಯೂರು ದೇವಸ್ಥಾನ (ಕೇರಳ): ಬಹಳಷ್ಟು ಪವಾಡಗಳಿಗೆ ಸಾಕ್ಷಿಯಾಗಿರುವ ಗುರುವಾಯೂರ್ ಶ್ರೀ ಕೃಷ್ಣ ದೇವಾಲಯವು ಭಾರತದ ಅತ್ಯಂತ ಪುರಾತನ ದೇವಾಲಯಗಳಲ್ಲಿ ಒಂದು. 2022 ರಲ್ಲಿ,ಈ ದೇವಾಲಯವು ರೂ.1,737.04 ಕೋಟಿ ಬ್ಯಾಂಕ್ ಠೇವಣಿ ಹೊಂದಿದೆ ಎಂದು ಬಹಿರಂಗಪಡಿಸಲಾಗಿತ್ತು. ಇದಲ್ಲದೇ ದೇವಾಲಯಕ್ಕೆ 271.05 ಎಕರೆ ಜಮೀನು ಕೂಡ ಇದೆ.
5 / 6
ಗೋಲ್ಡನ್ ಟೆಂಪಲ್,ಪಂಜಾಬ್: ಅಮೃತಸರದ ಹೃದಯಭಾಗದಲ್ಲಿರುವ ಗೋಲ್ಡನ್ ಟೆಂಪಲ್ ದೇಶದ ಅತ್ಯಂತ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ. ಈ ದೇವಾಲಯದ ಮೇಲಿನ ಮಹಡಿಗಳನ್ನು ಮಾಡಲು ಸುಮಾರು 400 ಕೆಜಿ ಚಿನ್ನವನ್ನು ಬಳಸಲಾಗಿದೆ.ದೇಗುಲದ ವಾರ್ಷಿಕ ಆದಾಯ 500 ಕೋಟಿ ರೂ.
6 / 6
ಸೋಮನಾಥ ದೇವಾಲಯ (ಗುಜರಾತ್): ಭಾರತದ ಹನ್ನೆರಡು ಪವಿತ್ರ ಜ್ಯೋತಿರ್ಲಿಂಗಗಳಲ್ಲಿ ಈ ದೇವಾಲಯ ಮೊದಲನೆಯದು ಎಂದು ನಂಬಲಾಗಿದೆ. ದೇವಾಲಯದ ಸಂಪತ್ತು ಬಹಿರಂಗವಾಗದಿದ್ದರೂ, 1700 ಎಕರೆ ಜಮೀನು ಸೇರಿದಂತೆ ಅದರ ಒಳಭಾಗದಲ್ಲಿ 130 ಕೆಜಿ ಚಿನ್ನ ಮತ್ತು ಅದರ ಶಿಖರದಲ್ಲಿ 150 ಕೆಜಿ ಚಿನ್ನವಿದೆ.
Published On - 2:21 pm, Tue, 23 January 24