
ಪ್ರತಿಯೊಂದು ಹೆಣ್ಣು ತನ್ನ ಸೌಂದರ್ಯದಲ್ಲಿ ಬಗ್ಗೆ ಅತಿಯಾದ ಕಾಳಜಿ ವಹಿಸುತ್ತಾಳೆ. ಅದ್ದಕ್ಕಾಗಿ ಅದೆಷ್ಟೋ ದುಡ್ಡು, ಸಮಯ ವ್ಯಯ ಮಾಡುವುದುಂಟು. ಮುಖದ ಸೌಂದರ್ಯದಲ್ಲಿ ಹುಬ್ಬುಗಳು ಪ್ರಮುಖ ಆಕರ್ಷಣೆಯಾಗಿದೆ. ಆದ್ದರಿಂದ ಈ ಕೆಳಗಿನ ಮನೆ ಮದ್ದು ಪ್ರಯೋಗಿಸಿ ಆಕರ್ಷಕ ದಟ್ಟ ಹುಬ್ಬು ಪಡೆಯಿರಿ.

ಕ್ಯಾಸ್ಟರ್ ಆಯಿಲ್ ಅಥವಾ ಹರಳೆಣ್ಣೆ ಹುಬ್ಬುಗಳು ದಪ್ಪವಾಗಿ ಮತ್ತು ವೇಗವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಶುದ್ಧ ಹರಳೆಣ್ಣೆಯಿಂದ ಪ್ರತಿ ದಿನ 2 ರಿಂದ 3 ನಿಮಿಷಗಳ ಕಾಲ ನಿಮ್ಮ ಹುಬ್ಬುಗಳನ್ನು ಮೃದುವಾಗಿ ಮಸಾಜ್ ಮಾಡಿ ಮತ್ತು 30 ನಿಮಿಷಗಳ ಕಾಲ ಅಥವಾ ರಾತ್ರಿಯಿಡೀ ಅದನ್ನು ಬಿಡಿ.

ತೆಂಗಿನ ಎಣ್ಣೆ ಇದು ವಿಟಮಿನ್ ಇ ಮತ್ತು ಕಬ್ಬಿಣವನ್ನು ಹೊಂದಿದ್ದು, ದಪ್ಪ ಮತ್ತು ಆರೋಗ್ಯಕರ ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ. ಯಾವುದೇ ಪ್ರೋಟೀನ್ ನಷ್ಟವನ್ನು ತಡೆಯುತ್ತದೆ. ಕೂದಲಿನ ಬೇರನ್ನು ಗಟ್ಟಿಗೊಳಿಸಲು ತೆಂಗಿನೆಣ್ಣೆಯೊಂದಿಗೆ ಸ್ವಲ್ಪ ಅಶ್ವಗಂಧದ ಬೇರಿನ ಪುಡಿಯನ್ನು ಕೂಡ ಸೇರಿಸಬಹುದು.

ಆಲಿವ್ ಎಣ್ಣೆ ಒಲೀಕ್ ಆಸಿಡ್ ಎಂಬ ಕೊಬ್ಬಿನಾಮ್ಲವನ್ನು ಹೊಂದಿದೆ, ಇದು ಹುಬ್ಬಿನ ಕೂದಲಿನ ಬೇರುಗಳಿಗೆ ತೇವಾಂಶವನ್ನು ನೀಡುತ್ತದೆ. ಇದು ಕ್ಯಾಪಿಲ್ಲರ್ ಎಂಬ ಸಣ್ಣ ರಕ್ತನಾಳದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಆರೋಗ್ಯಕರ ಕ್ಯಾಪಿಲ್ಲರಿಗಳು ಆರೋಗ್ಯಕರ ಮತ್ತು ಬಲವಾದ ಕೂದಲು ಬೆಳವಣಿಗೆಗೆ ಸಹಾಯಕವಾಗಿದೆ.

ಮೆಂತ್ಯ ಕಾಳುಗಳು ಕೂದಲು ಉದುರುವಿಕೆಯನ್ನು ನಿಲ್ಲಿಸಲು ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಆರೋಗ್ಯಕರ ಕೂದಲು ಬೆಳವಣಿಗೆಯನ್ನು ಉತ್ತೇಜಿಸುವ ಪ್ರೋಟೀನ್ಗಳು, ನಿಕೋಟಿನಿಕ್ ಆಮ್ಲ ಸಮೃದ್ಧವಾಗಿವೆ.

ಮೊಟ್ಟೆಯ ಹಳದಿ ಲೋಳೆಯನ್ನು ನಿಮ್ಮ ಹುಬ್ಬುಗಳಿಗೆ ಹಚ್ಚಿ 20 ನಿಮಿಷಗಳ ಕಾಲ ಬಿಡಿ. ನಂತರ, ನಿಮ್ಮ ಹುಬ್ಬುಗಳನ್ನು ಉಗುರು ಬೆಚ್ಚಗಿನ ನೀರಿನಿಂದ ಸ್ವಚ್ಛಗೊಳಿಸಿ. ನೀವು ಇದನ್ನು ವಾರಕ್ಕೆ 2 ಬಾರಿ ಮಾಡಬಹುದು. ಇದ್ದರಿಂದ ನಿಮ್ಮ ಹುಬ್ಬುಗಳು ದಟ್ಟವಾಗಿ ಬೆಳೆಯಲು ಸಹಾಯ ಮಾಡುತ್ತದೆ.