Updated on:Nov 13, 2022 | 2:28 PM
ವಿಜಯ್ ಹಜಾರೆ ಟ್ರೋಫಿಯಲ್ಲಿ ಸೌರಾಷ್ಟ್ರದ ಆರಂಭಿಕ ಆಟಗಾರ ಸಮರ್ಥ್ ವ್ಯಾಸ್ ವೇಗದ ಬ್ಯಾಟಿಂಗ್ ಮೂಲಕ ಅದ್ಭುತ ಸಾಧನೆ ಮಾಡಿದ್ದಾರೆ. ಈ ಆಟಗಾರ ಮಣಿಪುರ ವಿರುದ್ಧದ ಪಂದ್ಯದಲ್ಲಿ ಅಬ್ಬರದ ದ್ವಿಶತಕ ಬಾರಿಸಿ ಮಿಂಚಿದ್ದಾರೆ.
ಈ ಬಲಗೈ ಸ್ಫೋಟಕ ಬ್ಯಾಟ್ಸ್‌ಮನ್ ಕೇವಲ 131 ಎಸೆತಗಳಲ್ಲಿ 200 ರನ್ ಬಾರಿಸಿದ್ದು, ಈ ದ್ವಿಶತಕದ ಇನ್ನಿಂಗ್ಸ್ನಲ್ಲಿ ಸಮರ್ಥ್ ಬ್ಯಾಟ್‌ನಿಂದ 9 ಸಿಕ್ಸರ್ ಮತ್ತು 20 ಬೌಂಡರಿಗಳು ಹೊರಬಂದವು.
ಸಮರ್ಥ್ ಹೊರತಾಗಿ ಹಾರ್ವಿಕ್ ದೇಸಾಯಿ ಕೂಡ ಶತಕ ಬಾರಿಸಿದರು. ದೇಸಾಯಿ 107 ಎಸೆತಗಳಲ್ಲಿ 100 ರನ್ ಗಳಿಸಿದರು. ಇದರೊಂದಿಗೆ ಸಮರ್ಥ್-ದೇಸಾಯಿ ನಡುವೆ ಮೊದಲ ವಿಕೆಟ್‌ಗೆ 282 ರನ್ ಜೊತೆಯಾಟ ನಡೆಯಿತು. ಈ ಇಬ್ಬರ ಶತಕದ ನೆರವಿನಿಂದ ಸೌರಾಷ್ಟ್ರ ತಂಡ 50 ಓವರ್‌ಗಳಲ್ಲಿ 397 ರನ್ ಗಳಿಸಿತು.
ವಿಜಯ್ ಹಜಾರೆ ಟ್ರೋಫಿಯಲ್ಲಿ ಸೌರಾಷ್ಟ್ರ ಪರ ದ್ವಿಶತಕ ಸಿಡಿಸಿದ ಮೊದಲ ಕ್ರಿಕೆಟಿಗ ಸಮರ್ಥ್ ವ್ಯಾಸ್. ಕಳೆದ ವರ್ಷ ಚಂಡೀಗಢ ವಿರುದ್ಧ ಪ್ರೇರಕ್ ಮಂಕಡ್ 174 ರನ್ ಗಳಿಸಿದ್ದರು.
ಸಮರ್ಥ್ ವ್ಯಾಸ್ ಅವರ ದ್ವಿಶತಕದ ಆಧಾರದ ಮೇಲೆ ಸೌರಾಷ್ಟ್ರ ವಿಜಯ್ ಹಜಾರೆ ಟ್ರೋಫಿಯಲ್ಲಿ ತನ್ನ ಅತ್ಯುತ್ತಮ ಸ್ಕೋರ್ ಗಳಿಸಿದೆ. ಕಳೆದ ವರ್ಷ ಚಂಡೀಗಢ ವಿರುದ್ಧ ಸೌರಾಷ್ಟ್ರ 388 ರನ್ ಗಳಿಸಿದ್ದು, ಮಣಿಪುರ ವಿರುದ್ಧ 397 ರನ್ ಬಾರಿಸಿತ್ತು.
Published On - 2:28 pm, Sun, 13 November 22