Updated on: Mar 05, 2022 | 10:26 AM
ಬಾಳೆಹಣ್ಣು ಆರೋಗ್ಯವನ್ನು ಉತ್ತಮಗೊಳಿಸುವಲ್ಲಿ ಸಹಕಾರಿಯಾಗಿದೆ. ಬಾಳೆಹಣ್ಣಿನಲ್ಲಿರು ಪೊಟ್ಯಾಸಿಯಂ ಅಂಶವು ದೇಹ್ಕಕೆ ಬೇಕಾದ ಪ್ರೋಟೀನ್ ಅಂಶಗಳನ್ನು ನೀಡುತ್ತದೆ.
ಬಾಳೆಹಣ್ಣಿನಲ್ಲಿ ಸಮೃದ್ಧವಾದ ಫೈಬರ್ ಅಂಶ ಅಡಕವಾಗಿದೆ. ಇದು ದೇಹವನ್ನು ಆರೋಗ್ಯವಾಗಿರುವಂತೆ ಮಾಡುತ್ತದೆ. ಆದರೆ ನೆನಪಿಡಿ, ಕಫ, ಶೀತದ ಸಮಸ್ಯೆ ಇದ್ದರೆ ಬಾಳೆಹಣ್ಣಿನ ಸೇವನೆಯ ಮುನ್ನ ಎಚ್ಚರವಹಿಸಿ.
ಕರುಳಿನ ಸೂಕ್ಷ್ಮಾಣು ಜೀವಿಗಳಿಗೆ ಬಾಳೆಹಣ್ಣು ಒಳ್ಳೆಯದು. ಹೀಗಾಗಿ ಕರುಳಿನ ಸಮಸ್ಯೆಯುಳ್ಳವರಿಗೆ ಬಾಳೆಹಣ್ಣು ಒಳ್ಳೆಯದು.
ಪ್ರೋಬಯಾಟಿಕ್ ಅಮಶಗಳನ್ನು ಹೊಂದಿರುವ ಬಾಳೆಹಣ್ಣು ದೇಹವನ್ನು ಆರೋಗ್ಯವಾಗಿಡುವಂತೆ ಮಾಡುತ್ತದೆ. ಆದ್ದರಿಂದ ಪ್ರತಿದಿನ ಬಾಳೆಹಣ್ಣಿನ ಸೇವನೆ ಉತ್ತಮ.
ಬಾಳೆಹಣ್ಣಿನಲ್ಲಿರುವ ವಿಟಮಿನ್ ಸಿ ಅಂಶಗಳು ದೇಹವನ್ನು ಸುರಕ್ಷಿತವಾಗಿಡುವಂತೆ ಮಾಡುತ್ತದೆ. ಅಲ್ಲದೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಬಾಳೆಹಣ್ಣಿನಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಅಂಶಗಳು ದೀರ್ಘಕಾಲದ ರೋಗವನ್ನು ತಡೆಗಟ್ಟುತ್ತದೆ. ದೇಹದ ತೂಕವನ್ನು ಸಮತೋಲನಲ್ಲಿಡಲೂ ಕೂಡ ಸಹಾಯಕವಾಗಿದೆ.
ಆರೋಗ್ಯಕರ ಕಾರ್ಬೋಹೈಡ್ರೇಟ್ಸ್ ಹೊಂದಿರುವ ಬಾಳೆಹಣ್ಣು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.
ವಿಟಮಿನ್ ಬಿ6 ಅಂಶವಿರುವ ಬಾಳೆಹಣ್ಣು ಒತ್ತಡ ಮತ್ತು ಆತಂಕವನ್ನು ಕಡಿಮೆಗೊಳಿಸುತ್ತದೆ.
ಬಾಳೆಹಣ್ಣಿನಲ್ಲಿರುವ ವಿಟಮಿನ್ ಎ ಅಂಶಗಳು ಚರ್ಮದ ಕಾಂತಿಯನ್ನು ಹೆಚ್ಚಿಸಲು ನೆರವಾಗುತ್ತದೆ.
ಯಥೇಚ್ಛವಾದ ವಿಟಮಿನ್ಸ್ ಮಿನರಲ್ಸ್ ಹಾಗೂ ಅಮೈನೋ ಆಕ್ಸೈಡ್ಗಳನ್ನು ಹೊಂದಿರುವ ಬಾಳೆಹಣ್ಣಿನ ಸೇವನೆ ದೇಹದ ಆರೋಗ್ಯವನ್ನು ಹೆಚ್ಚಿಸುವಲ್ಲಿ ನೆರವಾಗುತ್ತದೆ ಎನ್ನುತ್ತಾರೆ ತಜ್ಞರು.