Updated on: Oct 20, 2022 | 9:15 AM
ಬೆಂಗಳೂರು ನಗರದಲ್ಲಿ ಸುರಿದ ಭಾರೀ ಮಳೆಗೆ ವಿವಿಧ ಕಡೆಗಳಲ್ಲಿ ಅವಾಂತರಗಳು ಸೃಷ್ಟಿಯಾಗಿವೆ. ಅಂಡರ್ಪಾಸ್ ರಸ್ತೆಗಳು ಮತ್ತು ರಸ್ತೆಗಳಲ್ಲಿ ನದಿಯಂತೆ ಮಳೆ ನೀರು ಹರಿದು ಹೋಗಿದೆ. ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣ ಬಳಿ ಮತ್ತು ವಿಲ್ಸನ್ಗಾರ್ಡನ್ ರಸ್ತೆಗಳಲ್ಲಿ ನೀರು ತುಂಬಿದ ಹರಿದಿದೆ. ಇದರಿಂದಾಗಿ ವಾಹನ ಸವಾರರ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಯಿತು. (ಫೋಟೋ ಕ್ರೆಡಿಟ್: bineetmishra/Twitter)
ಸೇಂಟ್ ಜೋಸೆಫ್ ಕಾಲೇಜು ಬಳಿ ರಸ್ತೆಗಳು ಜಲಾವೃತಗೊಂಡು ಫುಟ್ಪಾತ್ ಮಟ್ಟಕ್ಕೆ ನೀರು ಹರಿದಿದೆ. ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ಪರದಾಡಿದರು. ಬೆಂಗಳೂರು ಮಳೆಯ ಬಗ್ಗೆ ನಗರವಾಸಿಗಳು ಸಾಮಾಜಿಕ ಜಾಲತಾಣದಲ್ಲಿ ಫೋಟೋ, ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. (ಫೋಟೋ ಕ್ರೆಡಿಟ್: mayurchannagere/Twitter)
Bangalore Rain Heavy rain in Bangalore Many areas are flooded bangalore news in Kannada
Published On - 9:15 am, Thu, 20 October 22